ರಾತ್ರೋರಾತ್ರಿ ಶ್ರೀಮಂತರಾಗಲು ಇಲ್ಲಿದೆ ಚಮತ್ಕಾರ, ನೋಡಲು ಮುಗಿಬಿದ್ದ ಜನ!

ಜಕರ್ತಾ: ರಾತ್ರೋರಾತ್ರಿ ಶ್ರೀಮಂತರಾಗುವ ಕನಸು ಕಂಡಿದ್ದೀರಾ? ಲಾಟರಿ ಹೊಡೆದು ಶ್ರೀಮಂತರಾದವರನ್ನು ನೋಡಿದ್ದೀರಾ? ತಮ್ಮ ವಿಶೇಷ ಪ್ರತಿಭೆಯಿಂದ ಶ್ರೀಮಂತಿಕೆ ಪಡೆದವರನ್ನೂ ಕಂಡಿರುತ್ತೀರ. ಆದರೆ ಮನೆ ಮೇಲೆ ಕಲ್ಲು ಬಿದ್ದರೆ ಶ್ರೀಮಂತರಾಗುವವರನ್ನು ಕಂಡಿದ್ದೀರಾ? ಹೌದು, ಇದು ಆಶ್ಚರ್ಯವೆನಿಸಿದರೂ ಸತ್ಯ. ಮನೆ ಮೇಲೆ ಕಲ್ಲು ಬಿದ್ದಿದ್ದಕ್ಕೆ ವ್ಯಕ್ತಿಯೊಬ್ಬ ಶ್ರೀಮಂತನಾದ ಘಟನೆ ಇಂಡೋನೇಷಿಯಾದಲ್ಲಿ ನಡೆದಿದೆ. 33 ವರ್ಷದ ಜೋಶುವಾ ಹುಟಗಲುಂಗ್ ಹೆಸರಿನ ವ್ಯಕ್ತಿ ತನ್ನ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಮನೆಯಲ್ಲಿದ್ದಾಗ ಮನೆಯ ಮೇಲೆ ಏನೋ ಬಿದ್ದ ಸದ್ದಾಗಿದೆ. ಪೂರ್ತಿ ಮನೆಯೇ ಅಲ್ಲಾಡುವಷ್ಟು ಜೋರಾಗಿ ಶಬ್ಧವಾಗಿದೆ. ಗಾಬರಿಗೊಂಡ ಆತ ಪೂರ್ತಿ ಮನೆಯ ಸುತ್ತ ಏನು ಬಿದ್ದಿದೆ ಎಂದು ಹುಡುಕಾಡಿದ್ದಾನೆ.

ಆಗ ಮನೆಯ ಅಂಚಿನಲ್ಲಿ ಕಲ್ಲೊಂದು ಕಂಡಿದೆ. ಮೇಲ್ನೋಟಕ್ಕ ಕಲ್ಲಿನಂತೆ ಕಂಡ ಆ ವಸ್ತುವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದೊಂದು ಉಲ್ಕಾಶಿಲೆ ಎನ್ನುವುದು ತಿಳಿದುಬಂದಿದೆ. ಇಷ್ಟು ದೊಡ್ಡ ಕಲ್ಲನ್ನು ಯಾರೂ ಎಸೆಯಲು ಸಾಧ್ಯವಿಲ್ಲ, ಇದು ಆಕಾಶದಿಂದಲೇ ಬಿದ್ದಿರಬೇಕು ಎನ್ನುವುದು ಆತನಿಗೆ ಅರಿವಾಗಿದೆ. ಈ ವಿಚಾರವಾಗಿ ತಜ್ಞರ ಬಳಿ ಕೇಳಿದಾಗ ಅವರು ಅದನ್ನು ಉಲ್ಕಾಶಿಲೆ ಎಂದು ಖಚಿತಪಡಿಸಿದ್ದಾರೆ. ಈ ಉಲ್ಕಾಶಿಲೆ ಸುಮಾರು 2.1 ಕೆ.ಜಿ ತೂಕದ್ದಾಗಿದೆ. 4.5 ಬಿಲಿಯನ್ ವರ್ಷಗಳ ಹಿಂದಿನ ಉಲ್ಕಾಶಿಲೆ ಇದಾಗಿದೆ. ಪ್ರತಿ ಗ್ರಾಂ.ಗೆ 853 ಡಾಲರ್ ಬೆಲೆ ಬಾಳುವಂತದ್ದಾಗಿದೆ. ಸಾಮಾನ್ಯ ವ್ಯಕ್ತಿಯ ಮನೆಯ ಮೇಲೆ ಬಿದ್ದ ಈ ಉಲ್ಕಾಶಿಲೆಯನ್ನು ಕೊಳ್ಳಲು ಅನೇಕರು ಮುಂದಾಗಿದ್ದಾರೆ. ತಜ್ಞರಾದ ಜೇರಡ್ ಕಾಲಿನ್ಸ್ ಅವರು 1.8 ಮಿಲಿಯನ್ ಡಾಲರ್ (13 ಕೋಟಿ ರೂಪಾಯಿ) ಕೊಟ್ಟು ಉಲ್ಕಾಶಿಲೆಯನ್ನು ಖರೀದಿಸಿದ್ದಾರೆ.

ಇದನ್ನೂ ಓದಿ :  ಸಾಗರದಲ್ಲಿ ಹುಟ್ಟುವ ಪ್ರತಿಯೊಂದು ಚಂಡಮಾರುತಗಳಿಗೆ ಹೆಸರು ಬರುವುದು ಹೇಗೆ ಗೊತ್ತಾ?! ; ಇಲ್ಲಿದೇ ವಿಶೇಷ ಮಾಹಿತಿ.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/