ಲಾಕ್ ಡೌನ್ ಬಳಿಕ ವ್ಯವಸಾಯವನ್ನು ತಮ್ಮ ವೃತ್ತಿಯಾಗಿಸಿದ ಬಾಲಿವುಡ್ ನ ಖ್ಯಾತ ನಟಿ ಯಾರು ಗೊತ್ತಾ?!ಭೂಮಿ ತಾಯಿಯ ಚೊಚ್ಚಲ ಮಗ ರೈತ. ಪ್ರಪಂಚದ ಅಳಿವು-ಉಳಿವು ನಿಂತಿರುವುದೇ ವ್ಯವಸಾಯದಿಂದ. ಅಷ್ಟೇ ಅಲ್ಲದೆ ಯಾವ ಕೆಲಸ ಮಾಡಿದರೂ ಸಿಗದೆ ಇರುವ ಸಂತೋಷ ಸಂತೃಪ್ತಿ ವ್ಯವಸಾಯದಲ್ಲಿ ಸಿಗುತ್ತದೆ. ಇದನ್ನು ಅರಿತಿರುವ ಈ ನಟಿಯರು ತಮ್ಮ ಐಷಾರಾಮಿ ಜೀವನ ಹಾಗೂ ಐಷಾರಾಮಿ ಬಂಗಲೆಗಳನ್ನು ತೊರೆದು ಜಮೀನಿನಲ್ಲಿ ವ್ಯವಸಾಯ ಮಾಡಲು ಮುಂದಾಗಿದ್ದಾರೆ. ಆ ನಟಿಯರು ಯಾರು ಎಂದು ತಿಳಿಯೋಣ ಬನ್ನಿ. ಬಾಲಿವುಡ್ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ಯಾಮಿನಿ ಗೌತಮಿ. ಕೋರೊನದಿಂದಾಗಿ ಹಿಮಾಚಲ ಪ್ರದೇಶದಲ್ಲಿರುವ ತಮ್ಮ ಊರಿಗೆ ಹೋಗಿರುವ ಈ ನಟಿ ತಮಗಿರುವ ಜಮೀನಿನಲ್ಲಿ ಆರ್ಗಣಿಕ್ ಫಾಮಿಂಗ್ ಮಾಡಲು ಮುಂದಾಗಿದ್ದು, ಕೆಲವು ರಿಸರ್ಚ್ ಮಾಡಿ ವ್ಯವಸ್ಥಿತವಾಗಿ ವ್ಯವಸಾಯ ಮಾಡಲು ಮುಂದಾಗಿದ್ದಾರೆ.

ಇವರು ಸುಂದರವಾದ ನಟಿ. ಒಂದು ಕಾಲದಲ್ಲಿ ಕನ್ನಡಿಗರ ಹೃದಯಕ್ಕೆ ಹತ್ತಿರವಾದ ನಟಿ. ಇವರೇ ಜೂಲಿ ಚಾವ್ಲ. ಬಾಲಿವುಡ್ನಲ್ಲಿ ಹತ್ತಾರು ವರ್ಷ ಮಿಂಚಿದ ಈ ನಟಿ, ಈಗ ವ್ಯವಸಾಯದತ್ತ ಮುಖ ಮಾಡಿದ್ದಾರೆ. ಈಗಾಗಲೇ ಕೃಷಿಭೂಮಿಯನ್ನು ಖರೀದಿಸಿರುವ ಇವರು ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತ, ಉತ್ಸುಕತೆಯಿಂದ ಕೃಷಿಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ. ತಮ್ಮ ಅದ್ಬುತ ನಟನೆಯಿಂದ ಹಲವು ಭಾಷೆಗಳಲ್ಲಿ ಮಿಂಚಿದ ನಟಿ ಸಂಪದ ಕುಲಕರ್ಣಿ. ಇವರು ಸಹ ತಮ್ಮನ್ನು ತಾವು ವ್ಯವಸಾಯದಲ್ಲಿ ತೊಡಗಿಸಿಕೊಳ್ಳಲು ತೀರ್ಮಾನಿಸಿ, ಊರಿನ ಜಮೀನಿನಲ್ಲಿ ವ್ಯವಸಾಯ ಮಾಡುವುದರ ಮೂಲಕ ಅನೇಕ ಜನಕ್ಕೆ ಉದ್ಯೋಗ ಅವಕಾಶವನ್ನು ನೀಡಿದ್ದಾರೆ. ಕನ್ನಡದ ಹತ್ತಾರು ಚಿತ್ರಗಳಲ್ಲಿ ನಟಿಸಿರುವ ನಟ ಅರುಣ್ ಪಾಂಡ್ಯನ್. ಇವರ ಮಗಳು ಕೀರ್ತಿ ಪಾಂಡ್ಯನ್ ಉದಯೋನ್ಮುಖ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಸಹ ತನ್ನ ತಂದೆಯ ಜೊತೆ ವ್ಯವಸಾಯಕ್ಕೆ ಇಳಿದಿದ್ದಾರೆ. ಟ್ಯಾಕ್ಟರ್ ಉಳುವುದರಿಂದ ಹಿಡಿದು ಕೆಸರಿನಲ್ಲಿ ಕಾಲಿಟ್ಟು ನಾಟಿ ಮಾಡುವವರೆಗೆ ಎಲ್ಲಾ ಕೆಲಸವನ್ನು ಮಾಡುತ್ತಾರೆ.

ತಮ್ಮ ಮೊದಲನೇ ಚಿತ್ರದಲ್ಲಿ ಹೆಸರು ಮಾಡಿದ ನಟಿ ಮಾಳವಿಕಾ. ಇವರು ಸಹ ತಮ್ಮ ಊರಿನಲ್ಲಿ ದೊಡ್ಡಮಟ್ಟದಲ್ಲಿ ವ್ಯವಸಾಯವನ್ನು ಮಾಡುತ್ತಾ ಅದರಲ್ಲಿ ಸಕ್ಸಸ್ ಪಡೆದು ನೆಮ್ಮದಿಯ ಜೀವನವನ್ನೂ ನಡೆಸುತ್ತಿದ್ದಾರೆ. ಕನ್ನಡದ ಬಿಗ್ ಬಾಸ್ ನಲ್ಲಿ ಮಿಂಚಿದ ಭೂಮಿ ಶೆಟ್ಟಿ. ಇವರು ಸಹ ತಮ್ಮ ಮನೆಯವರ ಜೊತೆಗೂಡಿ ವ್ಯವಸಾಯ ಮಾಡುತ್ತಿದ್ದಾರೆ. ನ್ಯಾಷನಲ್ ಅವಾರ್ಡ್ ಪಡೆದ ಮಲೆಯಾಳಂನ ಸುರಭಿ ಲಕ್ಷ್ಮಿ ತಮ್ಮ ತೋಟದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವತಃ ತಾವೇ ತೋಟವನ್ನು ಕ್ಲೀನ್ ಮಾಡಿ, ಉತ್ತಮ ಅಡಿಕೆ ಬೆಳೆಯನ್ನು ತೆಗೆಯುತ್ತಿದ್ದಾರೆ. ನಗರದ ಏಸಿ ರೂಮ್ನಲ್ಲಿ ಕುಳಿತುಕೊಳ್ಳುವ ಬದಲು ಹಳ್ಳಿಯಲ್ಲಿ ವ್ಯವಸಾಯ ಮಾಡಲು ತೊಡಗಿರುವ ನಟ-ನಟಿಯರ ನಡೆ ಇದು.

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/