4 ಲಕ್ಷದ ಸಂಬಳದ ಕೆಲಸ ಬಿಟ್ಟು ಎಂದು ವ್ಯವಸಾಯ ಮಾಡಿ ವಿದೇಶಿಗರಿಗೆ ಸೆಡ್ಡು ಹೊಡೆದ ಕರ್ನಾಟಕದ ರೈತನ ಈಗಿನ ದುಡಿಮೆ ಎಷ್ಟು ಗೊತ್ತಾ?ಮನುಷ್ಯ ಇಷ್ಟು ಅಭಿವೃದ್ಧಿ ಹೊಂದಿ ಒಂದು ಹಂತಕ್ಕೆ ಬಂದಿದ್ದಾನೆ ಎಂದರೆ ಅದಕ್ಕೆ ಕಾರಣ ಅವನ ಸೂಕ್ಷ್ಮ ಬುದ್ಧಿ ಮತ್ತು ಸೂಕ್ಷ್ಮ ಅವಲೋಕನ. ಅದೇ ಸೂಕ್ಷ್ಮ ಬುದ್ಧಿಯನ್ನು ಬಳಸಿಕೊಂಡ ಇವರು ನಾಲ್ಕು ಲಕ್ಷದ ಉದ್ಯೋಗವನ್ನು ಬಿಟ್ಟು ಬಂದು ವ್ಯವಸಾಯ ಮಾಡಿ ಇಂದು ವಿದೇಶಿಗರಿಗೆ ಸೆಡ್ಡು ಹೊಡೆಯುತ್ತಿದ್ದಾರೆ. ಕನ್ನಡದ ಮಣ್ಣಲ್ಲಿ ಚಿನ್ನ ಬೆಳೆಯಲು ಹೊರಟಿದ್ದಾರೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿಯ 36 ವರ್ಷದ ಗಿರೀಶ್ ರವರು ಇಂಜಿನಿಯರಿಂಗ್ ಮುಗಿಸಿ ತಿಂಗಳಿಗೆ 4 ಲಕ್ಷ ಸಂಬಳ ಪಡೆಯುತ್ತಾ ಜರ್ಮನಿಯಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದರು. ಆದರೆ ಗಿರೀಶ್ ರವರ ಮನಸ್ಸು ಮಾತ್ರ ಯಾವಾಗಲೂ ಊರಿನ ಕಡೆ ಹಾಗು ತಂದೆ ತಾಯಿಯ ಕಡೆ ಸೆಳೆಯುತ್ತಿತ್ತು. ಕೊನೆಗೆ ಒಂದು ದೊಡ್ಡ ನಿರ್ಧಾರ ಮಾಡಿ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ, ಊರಿನಲ್ಲಿ ತನಗಿರುವ ಜಮೀನಿನಲ್ಲಿ ವ್ಯವಸಾಯ ಮಾಡಲು ಮುಂದಾದರು. ನೀರಿಗಾಗಿ ತಮ್ಮ ಜಮೀನಿನಲ್ಲಿ ಸುಮಾರು 40 ಬೋರ್ವೆಲ್ ಹಾಕಿಸಿದರು. ಆದ್ರೆ ನೀರು ಮಾತ್ರ ಸಿಗಲಿಲ್ಲ. ಆಗ ಒಂದು ಅದ್ಭುತ ಆಲೋಚನೆ ಮಾಡಿದರು. ಆ ಐಡಿಯಾ ಏನೋ ಸಿಂಪಲ್ ಆದರೆ ಕಾರ್ಯರೂಪಕ್ಕೆ ತರುವುದು ದೊಡ್ಡ ಸವಾಲು.

ತನಗಿದ್ದ 10 ಎಕರೆ ಜಮೀನಿನಲ್ಲಿ ಗುಲಾಬಿ ಬೆಳೆಯಲು ಪ್ಲಾನ್ ಮಾಡಿದ ಗಿರೀಶ್ ರವರು ಒಂದು ಎಕರೆ ವಿಸ್ತಾರದ 7 ಪಾಲಿಹೌಸ್ ಗಳನ್ನು ನಿರ್ಮಿಸಿ ಅದರೊಳಗೆ ಗುಲಾಬಿ ಬೆಳೆಯಲು ಮುಂದಾದರು. ನೀರಿಗಾಗಿ ಒಂದು ಸ್ಕೆಚ್ ಹಾಕಿದರು. ಮಳೆಗಾಲದಲ್ಲಿ ಪಾಲಿಹೌಸ್ ಗಳ ಮೇಲೆ ಬೀಳುವ ಮಳೆ ನೀರನ್ನು ಪೈಪ್ ಗಳ ಮೂಲಕ ಹರಿಸಿ ವ್ಯವಸ್ಥಿತವಾಗಿ ನಿರ್ಮಿಸಿರುವ ಒಂದು ಕೆರೆಯಲ್ಲಿ ಶೇಖರಣೆ ಮಾಡುವುದು. ನಂತರ ಶೇಖರಣೆಯಾದ ಮಳೆಯ ನೀರನ್ನು ವರ್ಷಪೂರ್ತಿ ಬಳಸಿಕೊಳ್ಳುವುದು. ಹೀಗೆ ಮಳೆಗಾಲದಲ್ಲಿ ಒಂದು 1 ಕೋಟಿ 30 ಲಕ್ಷ ಲೀಟರ್ ಶೇಖರಣೆ ಮಾಡುತ್ತಿರುವ ಗಿರೀಶ್ ರವರು ಗುಲಾಬಿ ಹೂಗಳನ್ನು ಬೆಳೆಯುತ್ತಿದ್ದಾರೆ.

ತಿಂಗಳಿಗೆ 15,000 ಗುಲಾಬಿಹೂಗಳನ್ನು ಬೆಳೆದು ಅದನ್ನು ಭಾರತ ಹಾಗೂ ವಿದೇಶಗಳಿಗೆ ಮಾರಾಟ ಮಾಡುತ್ತಿದ್ದಾರೆ. m-tech ಓದಿರುವ ಗಿರೀಶ್ ರವರ ಪತ್ನಿ ಕೂಡ ತನ್ನ ಪತಿಯ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ಮನೆಯ ದೊಡ್ಡ ಮಗನಾಗಿ ತಂದೆ-ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಮತ್ತು ಕೃಷಿಕನಾಗಿ ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳುವ ಕನಸು. ಹೀಗೆ ಎರಡನ್ನು ನಿಭಾಯಿಸುತ್ತಿರುವ ಗಿರೀಶ್ ರವರ ಈ ನಡೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ.