ಸಿಡಿಯಲ್ಲಿದ್ದ ಮಹಿಳೆ ಕೊನೆಗೆ ಪ್ರತ್ಯಕ್ಷ! ಗೃಹ ಸಚಿವ ಬೊಮ್ಮಾಯಿ ಅವರಿಗೆ ಏನು ಹೇಳಿದ್ದಾರೆ ಗೊತ್ತಾ? ಇಲ್ಲಿದೆ ವಿಡಿಯೋರಮೇಶ್ ಜಾರಕಿಹೊಳಿ ಅವರ ವಿಡಿಯೋ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದರ ಕುರಿತಾಗಿ ಒಬ್ಬೊಬ್ಬ ವ್ಯಕ್ತಿಗಳು ಒಂದೊಂದು ರೀತಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಕೆಲವರು ಪರವಾಗಿ ಮಾತನಾಡಿದರೆ ಇನ್ನೂ ಕೆಲವರು ರಮೇಶ್ ಜಾರಕಿಹೊಳಿ ಅವರ ವಿರುದ್ಧ ಬಗ್ಗೆ ಮಾತನಾಡುತ್ತಿದ್ದಾರೆ. ಇಷ್ಟು ದಿನಗಳ ಕಾಲ ರಮೇಶ್ ಜಾರಕಿಹೊಳಿಯವರು ಯಾಕೆ ಎಫ್ಐಆರನ್ನು ದಾಖಲಿಸಿರಲಿಲ್ಲ ಎಂಬುದು ಪ್ರಶ್ನೆಯಾಗಿ ಉಳಿದಿದೆ ಆದರೆ ಇದೀಗ ಅವರ ಕಡೆಯವರು ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಈ ವಿಚಾರ ಬೇರೆಯದೇ ತಿರುವನ್ನು ಪಡೆದುಕೊಂಡಿದೆ.

ರಮೇಶ್ ಜಾರಕಿಹೊಳಿ ಅವರ ವಿಡಿಯೋದಲ್ಲಿ ಕಂಡುಬಂದಿದ್ದ ಸಂತ್ರಸ್ತೆಯು ಇಷ್ಟು ದಿನಗಳ ಕಾಲ ಹೊರಗೆ ಕಾಣಿಸಿಕೊಂಡಿರಲಿಲ್ಲ, ಆಕೆ ಯಲ್ಲಿದ್ದಾರೆ ಎಂಬುದೇ ಯಾರಿಗೂ ತಿಳಿದಿರಲಿಲ್ಲ ಆದರೆ ಇದೀಗ ಆಕೆ ವಿಡಿಯೋ ಒಂದನ್ನು ಮಾಡಿ ಮಾತನಾಡಿದ್ದಾರೆ ಅದರಲ್ಲಿ ತನ್ನ ಮನೆಯವರು ವಿಡಿಯೋ ನಿಂದಾಗಿ ಬಹಳ ಅನ್ನು ಅವಮಾನವನ್ನು ಅನುಭವಿಸಬೇಕಾಗಿ ಬಂತು ಹೊರಗಿನ ಸುತ್ತಮುತ್ತಲಿನ ಜನರೆಲ್ಲಾ ನಮ್ಮನ್ನು ಇದೆ ಇದರ ಕುರಿತಾಗಿ ಪ್ರಶ್ನಿಸುತ್ತಿದ್ದಾರೆ ನಾವು ಕೆಲವು ಬಾರಿ ಆತ್ಮಹತ್ಯೆಯೂ ಕೂಡ ಪ್ರಯತ್ನಪಟ್ಟಿದ್ದೇವೆ ಈ ವಿಡಿಯೋವನ್ನು ರಮೇಶ್ ಜಾರಕಿಹೊಳಿಯವರು ಹೊರಬಿಟ್ಟಿದ್ದಾರೆ ಇದನ್ನು ಯಾರು ಮಾಡಿದ್ದಾರೆ ಎಂಬುದು ಕೂಡ ತನಗೆ ತಿಳಿದಿಲ್ಲ ನನಗೆ ಯಾವುದೇ ರೀತಿಯ ರಕ್ಷಣೆ ಇಲ್ಲ ದಯವಿಟ್ಟು ನನಗೆ ರಕ್ಷಣೆ ಕೊಡಿ ಎಂದು ನಿಮ್ಮೆಲ್ಲರನ್ನು ಕೇಳಿಕೊಳ್ಳುತ್ತೇನೆ ಎಂದು ಗೃಹ ಸಚಿವ ಬೊಮ್ಮಾಯಿ ಅವರಿಗೆ ಹೇಳಿದ್ದಾರೆ.

ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಒಮ್ಮೆಯು ಕಾಣಿಸಿಕೊಂಡಿರುವ ಸಂತ್ರಸ್ತೆ ಇದೀಗ ಹೇಗೆ ಬಂದಿದ್ದಾರೆ ಇಷ್ಟು ದಿನಗಳ ಕಾಲ ಎಲ್ಲಿದ್ದರೂ ಈಗ ಕಾಣಿಸಿಕೊಳ್ಳಲು ಕಾರಣವೇನು ಎಂಬುದು ಮಾತ್ರ ಆಶ್ಚರ್ಯದ ಸಂಗತಿಯಾಗಿದೆ. ಪೊಲೀಸರು ಕೂಡ ಸುಮ್ಮನೆ ಕೂರದೆ ದಿನದಿಂದ ದಿನಕ್ಕೆ ಹೊಸ ಹೊಸ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ವಿಚಾರಣೆ ಮುಂದುವರೆದು ಸತ್ಯಾಸತ್ಯತೆಗಳ ಪರಿಚಯ ಪೊಲೀಸರಿಂದಲೇ ಆಗಬೇಕಿದೆ. ಅಲ್ಲಿಯವರೆಗೂ ಕಾಯಲೇಬೇಕು