ಕಾಂಗ್ರೆಸ್ ನಾಯಕರಿಗೆ ಹಿಗ್ಗಾಮುಗ್ಗಾ ಉಗಿದು, ಪಕ್ಷದ ವಿರುದ್ಧ ಕೊನೆಗೂ ತಿರುಗಿಬಿದ್ದ ಅಖಂಡ ಶ್ರೀನಿವಾಸ್ ಮೂರ್ತಿ?ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ಭೈರಸಂದ್ರ ಗಲಭೆಯಲ್ಲಿ ಮನೆ ಕಳೆದುಕೊಂಡ ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.


ರಾಜ್ಯದಲ್ಲಿ ಗೋಹತ್ಯೆ ನಿಷೇಧ ಆಗಬೇಕೆ? ಬೇಡವೇ? ಈ ಲಿಂಕ್ https://viralsuddi.com/others/online-voting-poll/ ಕ್ಲಿಕ್ ಮಾಡಿ ಓಟ್ ಮಾಡಿ! ಬಹುದೊಡ್ಡ ಆನ್ ಲೈನ್ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ


ಖಾಸಗಿ ಸುದ್ದಿ ವಾಹಿನಿ ಜತೆ ಮಾತನಾಡಿದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್, ಕಿಡಿಗೇಡಿಗಳು ನನ್ನ ಮನೆಗೆ ಬೆಂಕಿ ಇಟ್ಟರು. ಗಲಭೆ ನಡೆದುಇಷ್ಟುದಿನವಾದರೂ ಕೆಪಿಸಿಸಿ ಅಧ್ಯಕ್ಷರು ನನ್ನ ಮನೆಗೆ ಭೇಟಿ ನೀಡಿಲ್ಲ. ಕಾಂಗ್ರೆಸ್ನವರು ನನ್ನ ನೆರವಿಗೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸುಟ್ಟು ಹೋಗಿರುವುದು ನಾನು ಬಾಳಿ ಬದುಕಿದ ಮನೆ, ಡಿ.ಕೆ.ಶಿವಕುಮಾರ್ ಅವರ ಮನೆ ಸುಟ್ಟಿಲ್ಲ. ಅವರು ನನ್ನ ಮನೆಯನ್ನು ಬಂದು ನೋಡಲಿ, ಆಮೇಲೆ ಮಾತನಾಡಲಿ ಎಂದು ಅಸಮಾಧಾನ ಹೊರಹಾಕಿದರು. ನನ್ನ ಪರವಾಗಿ ಮಾತನಾಡಿದ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಇದನ್ನೂ ಓದಿ :  ಅರುಣ್ ಸಿಂಗ್ ಮುಂದೆ ಬೆಲ್ಲದ್ ಹೇಳಿದ್ದೇನು?

ನಾನು ಯಾರ ಜತೆಗೂ ದ್ವೇಷ ಸಾಧಿಸಿಲ್ಲ, ಎಲ್ಲರ ಜತೆಗೂ ಸಾಮರಸ್ಯದಿಂದ ಇದ್ದೆ. ಯಾರು ದಾಳಿ ಮಾಡಿದ್ದಾರೋ ಅವರ ಮೇಲೆ ಪೋಲಿಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅಖಂಡ ಶ್ರೀನಿವಾಸ್ ಮೂರ್ತಿ ಹೇಳಿದರು. ಗಲಭೆ ಸಂಬಂಧ ಇಂತದ್ದೇ ಹೇಳಿಕೆ ಕೊಡುವಂತೆ ಅಖಂಡ ಶ್ರೀನಿವಾಸ ಮೂರ್ತಿ ಮೇಲೆ ಸರ್ಕಾರ ಒತ್ತಡ ಹಾಕುತ್ತಿದೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಯನ್ನು ತಳ್ಳಿ ಹಾಕಿದ ಶಾಸಕರು, ಸರ್ಕಾರ ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಹಾಕುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ವರದಿ, ಮೂಲ : ದಿಗ್ವಿಜಯ ನ್ಯೂಸ್