ನವದೆಹಲಿ: ಕರ್ನಾಟಕ ಕೇಡರ್ನ ನಿವೃತ್ತಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಇಂದು ದೆಹಲಿಯಲ್ಲಿ ಬಿಜೆಪಿ ಸೇರಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಪಕ್ಷಕ್ಕೆ ಸೇರ್ಪಡೆಯಾಗಲು ಸಿದ್ಧತೆಯಲ್ಲಿದ್ದಾರೆ.
ಈ ಕುರಿತು ಖಾಸಗಿ ಸುದ್ದಿ ವಾಹಿನಿಗೆ ಪ್ರತಿಕ್ರಿಸಿದ ಅವರು, ನಾನು ಕೆಲವೊಂದು ಕೆಲಸ ಮಾಡಬೇಕಿತ್ತು. ಕೆಲ ಯೋಜನೆಗಳಿವೆ, ಈ ಕುರಿತು ಕೆಲವರ ಬಳಿ ಸಲಹೆ ಪಡೆದುಕೊಂಡಿದ್ದೆ. ಸದ್ಯ ದೆಹಲಿಯಲ್ಲಿದ್ದೇನೆ. 11 ಗಂಟೆಗೆ ನಾನು ಸೇರ್ಪಡೆಯಾಗಲಿದ್ದೇನೆ ಎಂದು ತಿಳಿಸಿದ್ರು. ಸದ್ಯ ಯಾವ ರಾಜ್ಯಕ್ಕೆ ಅಂತಾ ನನಗೆ ಹೇಳಿಲ್ಲ. ದೆಹಲಿಗೆ ಬನ್ನಿ ಅಂದಿದ್ದಾರೆ, ಬಂದಿದ್ದೇನೆ. ಯಾವ ರಾಜ್ಯದಲ್ಲಿ ಕೆಲಸಕ್ಕೆ ಹೇಳ್ತಾರೆ ನೋಡ್ತಿನಿ. ಎಲ್ಲಿ ಕೆಲಸ ನೀಡಿದ್ರೂ ಕಾರ್ಯನಿರ್ವಹಿಸುತ್ತೆನೆ. ಇಂದು ಸೇರ್ಪಡೆಯಾಗಿ ಮುಂದಿನ ಜವಾಬ್ದಾರಿ ಬಗ್ಗೆ ತಿಳಿಸುತ್ತೇನೆ ಎಂದರು.
ಈ ಹಿಂದೆ ಡಿಸಿಪಿ, ಎಸ್ಪಿಯಾಗಿ ಕೆಲಸ ನಿರ್ವಹಿಸಿದ್ದ ಅಣ್ಣಾಮಲೈ, ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದರು. ಅಣ್ಣಾಮಲೈ ಬಿಜೆಪಿ ಸೇರ್ಪಡೆ ಬಗ್ಗೆ ಸಚಿವ ಡಾ.ಕೆ ಸುಧಾಕರ್ ಕೂಡ ಟ್ವೀಟ್ ಮಾಡಿ, ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ಕರ್ನಾಟಕ ಕೇಡರ್ನ ನಿವೃತ್ತಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಇಂದು ದೆಹಲಿಯಲ್ಲಿ ಬಿಜೆಪಿ ಸೇರಲಿದ್ದಾರೆ.
ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ದಕ್ಷತೆಯಿಂದ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ಬಿಜೆಪಿ ಸೇರುತ್ತಿದ್ದಾರೆ. ಅವರು ಬಿಜೆಪಿ ಸೇರುತ್ತಿರುವುದು ನನಗೆ ಅತೀವ ಸಂತೋಷ ತಂದಿದೆ.ಅವರಿಗೆ ಹೃದಯಪೂರ್ವಕ ಸ್ವಾಗತ. pic.twitter.com/iDqL3SEoaf— Dr Sudhakar K (@mla_sudhakar) August 25, 2020