“ನಾನು ಅವರ ವಾಹಿನಿಯನ್ನು ವೀಕ್ಷಿಸುವುದಿಲ್ಲ, ಆದರೆ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ರಕ್ಷಣೆಗೆ ಸುಪ್ರೀಂ ಕೋರ್ಟ್‌ ಇದೆ” ; ಸುಪ್ರೀಂ ಕೋರ್ಟ್!ನವದೆಹಲಿ: ಇಂಟೀರಿಯರ್ ಡಿಸೈನರ್ ಅನ್ವರ್ ನಾಯಕ್ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ರಿಪಬ್ಲಿಕ್ ಟಿ.ವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸಿರುವ ಕ್ರಮಕ್ಕೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ. ಮಹಾರಾಷ್ಟ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕೋರ್ಟ್, ರಾಜ್ಯ ಸರ್ಕಾರಗಳು ಸಿದ್ಧಾಂತ ಮತ್ತು ಭಿನ್ನಾಭಿಪ್ರಾಯದ ಆಧಾರದ ಮೇಲೆ ಕೆಲವು ವ್ಯಕ್ತಿಗಳನ್ನು ಗುರಿಯಾಗಿಸಿರುವುದು ತೀರಾ ದುರದೃಷ್ಟಕರ ಎಂದಿದೆ. ತಮಗೆ ಜಾಮೀನು ನೀಡುವಂತೆ ಕೋರಿ ಅರ್ನಬ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ಪೀಠ ನಡೆಸಿತು. ರಿಪಬ್ಲಿಕ್ ಟಿವಿ ಸ್ಟುಡಿಯೋ ನಿರ್ಮಿಸುವಾಗ ಅನ್ವಯ್ ನಾಯಕ್ ಅವರೇ ಇಂಟೀರಿಯರ್ ಡಿಸೈನಿಂಗ್ ಮಾಡಿಕೊಟ್ಟಿದ್ದರು. ಅದರ ಹಣ ನೀಡದೆ ಸತಾಯಿಸಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಅರ್ನಬ್ ಗೋಸ್ವಾಮಿ ವಿರುದ್ಧ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಹೈಕೋರ್ಟ್ ಅರ್ನಬ್ ಅವರಿಗೆ ಜಾಮೀನು ನೀಡಲು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಜಾಮೀನು ಅರ್ಜಿಯನ್ನು ಪುರಸ್ಕರಿಸಿರುವ ಪೀಠ, ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ. ಇದರ ವಿಚಾರಣೆ ನಡೆಸಿದ ಕೋರ್ಟ್, ಮಹಾರಾಷ್ಟ್ರ ಸರ್ಕಾರದ ಕ್ರಮದ ವಿರುದ್ಧ ಕೆಂಡಾಮಂಡಲವಾಗಿದೆ.

‘ಎ ಎಂಬ ವ್ಯಕ್ತಿಗೆ ಬಿ ಎಂಬ ವ್ಯಕ್ತಿ ಹಣ ನೀಡದಿದ್ದರೆ ಅದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವಾಗುತ್ತದೆಯೆ, ಇಂಥ ಪ್ರಕರಣದಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸುವುದು ಅಗತ್ಯವಿದೆಯೇ ಎಂದು ಕೋರ್ಟ್‌ ಪ್ರಶ್ನಿಸಿತು. ಅರ್ಜಿದಾರರ (ಅರ್ನಬ್‌) ಸಿದ್ಧಾಂತ ಏನೇ ಇರಲಿ. ನಾನು ಅವರ ವಾಹಿನಿಯನ್ನು ವೀಕ್ಷಿಸುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಸಾಂವಿಧಾನಿಕ ಕೋರ್ಟ್ ಮಧ್ಯೆ ಪ್ರವೇಶಿಸದಿದ್ದರೆ ನಿಸ್ಸಂಶಯವಾಗಿ ನಾವು ವಿನಾಶದ ಹಾದಿಯಲ್ಲಿ ಹೋಗುತ್ತಿದ್ದೇವೆ ಎಂದರ್ಥವಾಗುತ್ತದೆ. ರಾಜ್ಯ ಸರ್ಕಾರಗಳು ಹೀಗೆ ಓರ್ವ ವ್ಯಕ್ತಿಯನ್ನು ಗುರಿಯಾಗಿಸುವುದು ಸರಿಯಲ್ಲ. ಹೀಗೆ ಗುರಿಯಾಗಿಸಿದರೆ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ರಕ್ಷಣೆಗೆ ಸುಪ್ರೀಂ ಕೋರ್ಟ್‌ ಇದೆ ಎನ್ನುವುದನ್ನು ಅರಿಯಬೇಕು’ ಎಂದು ಮಹಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿರುವುದರಿಂದ ಅವರನ್ನು ಕಸ್ಟಡಿ ವಿಚಾರಣೆ ಮಾಡುವ ಅಗತ್ಯವಿದೆಯೇ ಎಂದು ಮಹಾರಾಷ್ಟ್ರ ಸರ್ಕಾರವನ್ನು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಅರ್ನಬ್ ಗೋಸ್ವಾಮಿಯವರ ಪರ ವಾದ ಮಂಡಿಸಿದ ನ್ಯಾಯವಾದಿ ಹರೀಶ್ ಸಾಳ್ವೆ, ‘ಚಾನೆಲ್ ವಿರುದ್ಧ ದಾಖಲಾಗಿರುವ ವಿವಿಧ ಪ್ರಕರಣಗಳನ್ನು ಉಲ್ಲೇಖಿಸಿ ಮಹಾರಾಷ್ಟ್ರ ಸರ್ಕಾರ ನನ್ನ ಕಕ್ಷಿದಾರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುತ್ತಿದೆ’ ಎಂದು ಆರೋಪಿಸಿದರು ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಅವರು ಮನವಿ ಮಾಡಿದರು.

ಇದನ್ನೂ ಓದಿ :  ಶಾಸಕ ಅರವಿಂದ್ ಬೆಲದ ದೆಹಲಿ ಭೇಟಿ ಸಂಚಲನ

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938