ಧರ್ಮ ಬಿಟ್ಟು ರಾಜಕಾರಣವಿಲ್ಲ, ರಾಜಕಾರಣ ಬಿಟ್ಟು ಧರ್ಮವಿಲ್ಲ: ಸಚಿವ ಬಿ.ಸಿ.ಪಾಟೀಲ್ಧರ್ಮ ಬಿಟ್ಟು ರಾಜಕಾರಣವಿಲ್ಲ, ರಾಜಕಾರಣ ಬಿಟ್ಟು ಧರ್ಮವಿಲ್ಲ: ಸಚಿವ ಬಿ.ಸಿ.ಪಾಟೀಲ್

ಸಿಎಂ ಯಡಿಯೂರಪ್ಪ ಪರ ಮಠಾಧೀಶರ ಬ್ಯಾಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಧರ್ಮ ಬಿಟ್ಟು ರಾಜಕಾರಣವಿಲ್ಲ, ರಾಜಕಾರಣ ಬಿಟ್ಟು ಧರ್ಮವಿಲ್ಲ. ಪ್ರತಿಯೊಬ್ಬರಿಗು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ, ವಾಕ್ ಸ್ವಾತಂತ್ರ್ಯ ಇದೆ, ಮಠಾಧೀಶರು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ಇಲ್ಲ ಎಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸ್ಪಷ್ಡಪಡಿಸಿದ್ದಾರೆ. ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾಮೂಲಿಯಂತೆ ಪಕ್ಷದ ಆಗು ಹೋಗುಗಳು ಹಾಗು ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲು ಬರುತ್ತಿದ್ದಾರೆ ಎಂದು ಹೇಳಿದ್ದಾರೆ.