ಬೆಳಗಾವಿ ಬಿಮ್ಸ್ ಆಡಳಿತಾಧಿಕಾರಿಯಾಗಿ ಪ್ರಾದೇಶಿಕ ಆಯುಕ್ತ ಬಿಸ್ವಾಸ್ ನೇಮಕ



ಬೆಳಗಾವಿ:- ಬಳ್ಳಾರಿ ಅಕ್ರಮ ಗಣಿಗಾರಿಕೆ ಜಾಲಾಡಿದ್ದ ಖಡಕ್ ಅಧಿಕಾರಿಗೆ ಬಿಮ್ಸ ಆಡಳಿತ ಸೂತ್ರ!ವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಒಪ್ಪಿಸಿದ್ದಾರೆ.
ಮುಖ್ಯಮಂತ್ರಿಗಳು ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ಬಿಮ್ಸ) ಹದಗೆಟ್ಟ ಆಡಳಿತಕ್ಕೆ ಮೇಜರ್ ಸರ್ಜರಿ ನಡೆಸಲೆಂದೇ ಬೆಳಗಾವಿಗೆ ಇಂದು ಶುಕ್ರವಾರ ಬೆಳಗಾವಿಗೆ ಆಗಮಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೇಜರ್ ಸರ್ಜರಿಯ ಮೊದಲ ಹೆಜ್ಜೆ ಇರಿಸಿದ್ದಾರೆ.

ಹಳಿ ತಪ್ಪಿದ ಬಿಮ್ಸನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಬೆಳಗಾವಿಯ ಪ್ರಾದೇಶಿಕ ಆಯುಕ್ತರಾದ ಶ್ರೀ ಆಮ್ಲನ್ ಆದಿತ್ಯ ಬಿಸ್ವಾಸ ಅವರನ್ನು ಹೆಚ್ಚುವರಿಯಾಗಿ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ. 1997 ರ ಬ್ಯಾಚಿನ ಐಎ ಎಸ್ ಅಧಿಕಾರಿಯಾಗಿರುವ ಬಿಸ್ವಾಸ ಅವರು ರಾಜ್ಯದ ಅತ್ಯಂತ ಖಡಕ್ ಐ ಎ ಎಸ್
ಅಧಿಕಾರಿಯಾಗಿ ಎಂದೇ ಹೆಸರುವಾಸಿಯಾಗಿದ್ದಾರೆ. ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಅಲ್ಲಿಯ ಅಕ್ರಮ ಗಣಿಗಾರಿಕೆ ವಿರುದ್ಧ ಚಾಟಿ ಬೀಸಿದ್ದ ಬಿಸ್ವಾಸ ಅವರು ಆಡಳಿತ ಪಕ್ಷದ ನಾಯಕರಿಗೆ ಬಿಸಿ ಮುಟ್ಟಿಸಿದ್ದರು. ಅಲ್ಲದೆ ಅವರು ಯಾವುದೇ ಹುದ್ದೆಯಲ್ಲಿದ್ದರೂ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡಿರಲಿಲ್ಲ.

ಇದನ್ನೂ ಓದಿ :  ಸಿಎಂ ಬದಲಾವಣೆ : ಕೇವಲ ಹಾಸ್ಯದ ತುಣುಕು! ಇನ್ನೂ ಎರಡು ವರ್ಷಗಳ ಕಾಲ ರಾಜಾಹುಲಿಯೇ ಸಿಎಂ?

ಬಿಸ್ವಾಸ ಅವರ ನೇಮಕದಿಂದ ಬಿಮ್ಸ ಆಡಳಿತ ಸರಿದಾರಿಗೆ ಬರುವ ನಿರೀಕ್ಷೆಯಿದೆ ಇದೇ ಬಿಸ್ವಾಸ ಅವರು ಕಳೆದ ತಿಂಗಳು ಕೋವಿಡ್ ಸಂಬಂಧ ಕರೆದ ಸಭೆಗೆ ಬಿಮ್ಸ ನಿರ್ದೇಶಕರೇ ಗೈರು ಉಳಿದಿದ್ದರೆಂದು ಹೇಳಲಾಗಿದೆ. ಬಿಸ್ವಾಸ ಅವರ ನೇಮಕದಿಂದಾಗಿ ಬಿಮ್ಸ ನಲ್ಲಿ ಸಂಚಲನ ಉಂಟಾಗಿದ್ದು ಅವರು ಅಧಿಕಾರ ವಹಿಸಿಕೊಂಡ ನಂತರ ಯಾರ ಯಾರ ತಲೆಗಳು ಉರುಳಲಿವೆ ಎಂಬ ಲೆಕ್ಕಾಚಾರ ಆರಂಭವಾಗಿವೆ.