ಸಾಮಾನ್ಯ ಆಟೋ ಡ್ರೈವರ್ ಒಬ್ಬ ‘ಬಿಂದು’ ಕಂಪೆನಿ ಕಟ್ಟಿ ಕೋಟ್ಯಾಧಿಪತಿ ಆದ ಸ್ಟೋರಿ ಓದಿ!ಒಂದು ಕಡೆ ಚೀನಿ ವೈರಸ್ ಕೊರೋನಾದಿಂದ ಭಾರತ ತತ್ತರಿಸಿದೆ ಅತ್ತ ಗಡಿಯಲ್ಲಿ ಭಾರತೀಯ ಸೈನಿಕರಿಗೆ ಸುಖಾಸುಮ್ಮನೆ ಚೀನಿ ಸೈನಿಕರು ಒಂದಿಲ್ಲೊಂದು ಉಪಟಳ ಕೊಡುತ್ತಲೇ ಬಂದಿದ್ದಾರೆ. ಈ ನಡುವೆ ದೇಶದ ಯುವಜನತೆ ಮೋದಿಜಿ ಹೇಳಿದ ಆತ್ಮ ನಿರ್ಭರ್ ಭಾರತ್ ಕಡೆ ಸ್ವಲ್ಪ ಮುಖ ಮಾಡಬೇಕಿದೆ.

ಸಾಧನೆ ಮಾಡೋದಕ್ಕೆ ವಯಸ್ಸಿನ ಮಿತಿಯಿಲ್ಲ, ಪರಿಶ್ರಮ, ಚಲ ಇದ್ದರೆ ಯಾರು ಬೇಕಾದರೂ ಎಂತಹುದನ್ನು ಬೇಕಾದರೂ ಸಾಧಿಸಬಹು ಎನ್ನುವುದಕ್ಕೆ ಸುಳ್ಯ ಮೂಲದ ಸತ್ಯ ಶಂಕರ್ ಭಟ್ ಅತ್ಯದ್ಭುತ ಉದಾಹರಣೆ. ಒಬ್ಬ ಆಟೋ ಚಾಲಕ ತನ್ನ ಪರಿಶ್ರಮದಿಂದ ವಿದೇಶಿ ಕಂಪೆನಿಗಳಿಗೆ ನಿದ್ದೆಗೆಡಿಸಿದ ಕಥೆ ಇದು.

ಸತ್ಯಶಂಕರ್, ಇದು ಅನೇಕರಿಗೆ ಅಪರಿಚಿತ ಹೆಸರು. ಆದರೆ ಬಿಂದು ನಿಮಗೆ ಗೊತ್ತಿಲ್ಲದೇ ಇರಲು ಸಾಧ್ಯವೇ ಇಲ್ಲ ಯಾಕೆಂದರೆ ಬಿಂದು Fizz ಜೀರಾ ಇವತ್ತು ಅಷ್ಟು ಫೇಮಸ್ ಆಗಿಬಿಟ್ಟಿದೆ. ಅತ್ಯಂತ ಶಂಕರ್ ಮೂಲತಃ ಸುಳ್ಯದವರು, ಆಟೋ ಚಾಲಕರಾಗಿ ವೃತ್ತಿಜೀವರ ಪ್ರಾರಂಭಿಸಿದ ಸತ್ಯಶಂಕರ್ ನಂತರ ಅನೇಕ ಸೋಲಿನ ಬಳಿಕ ಎಸ್ ಜಿ ಕಾರ್ಪೋರೇಟ್ಸ್ ಎಂಬ ಸಂಸ್ಥೆ ಕಟ್ಟುತ್ತಾರೆ ಈ ಮೂಲಕ ಬಿಂದು ನೀರನ್ನು ಕಡಿಮೆ ಬೆಲೆಯಲ್ಲಿ ಕೊಡುವ ಮೂಲಕ ಪಿಯುಸಿ ಶಿಕ್ಷಣ ಪಡೆದ ಓರ್ವ ಸಾಮಾನ್ಯ ಕನ್ನಡಿಗ ಸ್ಥಾಪಿಸಿದ ಸಣ್ಣ ಸಂಸ್ಥೆಯೊಂದು ಇವತ್ತು ವಾರ್ಷಿಕ 500 ಕೋಟಿ ಟರ್ನೋವರ್ ಹೊಂದಿರುವ ದೈತ್ಯ ಸಂಸ್ಥೆಯಾಗಿ ಹೊರಹೊಮ್ಮಿದೆ.

ಇದನ್ನೂ ಓದಿ :  ಐಎಂಎ ಹಗರಣ ; ಕುಮಾರಸ್ವಾಮಿಗೆ ಕಂಟಕ

ಕೇವಲ ಭಾರತ ಮಾತ್ರವಲ್ಲದೆ USA ಸೇರಿದಂತೆ ಅನೇಕ ರಾಷ್ಟ್ರದಲ್ಲಿ ಬಿಂದು ಜೀರಾ ಪ್ರಸಿದ್ಧಿ ಪಡೆದಿದೆ. ಕರ್ನಾಟಕದ ಮೂಲದ ಸಂಸ್ಥೆಯೊಂದು ಇಂದು ಅನೇಕ ವಿದೇಶಿ ಕಂಪೆನಿಗೆ ಸೆಡ್ಡು ಹೊಡೆಯುತ್ತಿದ್ದರು. ಕರ್ನಾಟಕ ಮಾತ್ರವಲ್ಲದೆ ತೆಲಂಗಾಣಲ್ಲೂ ತನ್ನ ತಯಾರಿಕಾ ಘಟಕ ಹೊಂದಿದ್ದು ಸದ್ಯ ಬಿಂದು ಒಟ್ಟು 65 ಬಗೆಯ ಪ್ರಾಡಕ್ಟ್ ಗಳನ್ನು ತಯಾರಿಸುತ್ತಿದೆ. 2019 ರ ಆಗಸ್ಟ್ ನಲ್ಲಿ ಬಿಂದು Fizz ಜೀರಾ ವನ್ನು ಭಾರತದ ಅತ್ಯುನ್ನತ ಪಾನೀಯ ಬ್ರ್ಯಾಂಡ್ (Best Beverage of India) ಎಂದು ಘೋಷಿಸಿತ್ತು. ಇನ್ನಾದರೂ ನಮ್ಮ ದೇಶೀಯ ಉತ್ಪನ್ನಗಳನ್ನು ಖರೀದಿಸೋಣ ಭಾರತವನ್ನು ಗೆಲ್ಲಿಸೋಣ. ಮೋದಿಜಿ ಹೇಳಿದ ಆತ್ಮ ನಿರ್ಭರ್ ಭಾರತದತ್ತ ಒಂದು ಹೆಜ್ಜೆ ಹಾಕೋಣ.

ಈ ಕುರಿತು ಖ್ಯಾತ ಚಿಂತಕ, ಅಂಕಣಕಾರ, ಲೇಖಕ, ವಾಗ್ಮಿ, ಯುವ ಬ್ರಿಗೇಡ್ ಮುಂದಾಳು ಚಕ್ರವರ್ಸಿ ಸೂಲಿಬೆಲೆ ಅವರು ಕೂಡ ಮಾತನಾಡಿದ್ದಾರೆ. ಇತ್ತೀಚಿಗೆ ಈ ವೀಡಿಯೋ ಕೂಡ ವೈರಲ್ ಆಗಿದ್ದು ಆ ವೀಡಿಯೋ ಇಲ್ಲಿದೆ ನೋಡಿ. ಸ್ನೇಹಿತರೇ ದಯವಿಟ್ಟು ಇಂತಹ ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳಿ ನೀವು ಮಾಡುವ ಒಂದು ಶೇರ್ ನಮ್ಮನ್ನು ಇನ್ನಷ್ಟು ಇಂತಹ ಅದ್ಬುತ ಮಾಹಿತಿ ನೀಡಲು ಪ್ರೋತ್ಸಾಹ ಕೊಟ್ಟಂತಾಗುತ್ತದೆ.