ಬಿಜೆಪಿ ಹೈಕಮಾಂಡ್ ನಾಯಕ ಶೀಘ್ರ ರಾಜ್ಯಕ್ಕೆಅರುಣ್ ಸಿಂಗ್ ಅವರು ರಾಜ್ಯದ ವಿವಿಧ ಹಂತದ ಮುಖಂಡರೊಂದಿಗೆ ಒಂದು ಸುತ್ತಿನ ಸಮಾಲೋಚನೆ ನಡೆಸಿದ ಬಳಿಕ ಹೈಕಮಾಂಡ್‌ಗೆ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಮೌಖಿಕ ಅಥವಾ ಲಿಖಿತ ವರದಿ ನೀಡುವ ಸಾಧ್ಯತೆಯಿದೆ. ಆವರದಿ ಆಧರಿಸಿಯೇಮುಂದಿನಸೂಕ್ತ ನಿರ್ಧಾರವನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಅರುಣ್ ಸಿಂಗ್ ಆಗಮನ ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಪ್ರಸಕ್ತ ಸಮಸ್ಯೆಗೆ ಯಾವ ರೀತಿಯ ಪರಿಹಾರ ಹುಡುಕುತ್ತಾರೆ ಎಂಬುದರ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಬಿರುಸಿನ ಚರ್ಚೆ ನಡೆದಿದೆ. ರಾಜ್ಯದ ನಾಯಕತ್ವದಲ್ಲಿ ಯಾವುದೇ ಬದಲಾವಣೆಯಿಲ್ಲ.

ಸರ್ಕಾರದ ಇನ್ನುಳಿದ ಅವಧಿಗೆ ಬಿ.ಎಸ್.ಯಡಿಯೂರಪ್ಪ ಅವರೇ ಮುಂದುವರೆಯಲಿದ್ದಾರೆ ಎಂಬುದಾಗಿ ಪಕ್ಷದ ರಾಜ್ಯಾಧ್ಯಕ್ಷರು, ಕೇಂದ್ರ ಸಚಿವರು ಹಾಗೂ ಅನೇಕ ಸಚಿವರು ಘಂಟಾಘೋಷವಾಗಿ ಹೇಳಿದ್ದರೂ ಈವರೆಗೆ ಈ ಬಗ್ಗೆ ವರಿಷ್ಠರು ಯಾವುದೇ ಅಧಿಕೃತ ಹೇಳಿಕೆ ನೀಡದೇ ಇರುವುದರಿಂದ ಅನುಮಾನ ಮುಂದುವರೆದಿದೆ. ಈಗಾಗಲೇ ಪಕ್ಷದ ಹಿರಿಯ ಶಾಸಕ ಹಾಗೂ ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕ ವಿ.ಸುನೀಲ್‌ಕುಮಾರ್‌ ಅವರು ಕೂಡಲೇ ಶಾಸಕಾಂಗ ಪಕ್ಷದ ಸಭೆ ಕರೆದು ಚರ್ಚಿಸಬೇಕು ಎಂದು ಬಹಿರಂಗವಾಗಿಯೇ ಆಗ್ರಹಿಸಿದ್ದಾರೆ.

ಇದನ್ನೂ ಓದಿ :  ಬಂಗಾಳದಲ್ಲಿ ಮಮತಾ ಘರ್‌ವಾಪಸಿ?

ಈ ಅಭಿಪ್ರಾಯವನ್ನು ಪಕ್ಷದ ಇತರ ಕೆಲವು ಶಾಸಕರೂ ಆಂತರಿಕವಾಗಿ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ಆರುಣ್ ಸಿಂಗ್ ಅವರು ರಾಜ್ಯಕ್ಕೆ ಆಗಮಿಸಿದ ಬಳಿಕ ಶಾಸಕಾಂಗ ಪಕ್ಷದ ಸಭೆ ಕರೆಯಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸೂಚಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.