ರಾಜರಾಜೇಶ್ವರಿ ನಗರದ ಉಪಚುನಾವಣೆಗೆ ಅಭ್ಯರ್ಥಿ ಹೆಸರು ಘೋಷಿಸಿದ ಬಿಜೆಪಿ, ಯಾರ ಪಾಲಾಯ್ತು?, ಇಲ್ಲಿದೆ ಡೀಟೇಲ್ಸ್ಬೆಂಗಳೂರು ಅ.11 : ತೀವ್ರ ಕುತೂಹಲ ಕೆರಳಿಸಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಟಿಕೆಟ್ ಘೋಷಣೆಯಾಗುವುದು ಬಹತೇಕ ಖಚಿತವಾಗಿದೆ.
ಕಳೆದ ರಾತ್ರಿ ನವದೆಹಲಿಯಲ್ಲಿ ಪಕ್ಷದ ಸಂಸದೀಯ ಮಂಡಳಿ ಸಭೆ ನಡೆದಿದ್ದು, ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯುವ ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ತೀವ್ರ ವಿರೋಧದ ನಡುವೆಯೂ ಆರ್. ಆರ್. ನಗರಕ್ಕೆ ಮಾಜಿ ಶಾಸಕ ಮುನಿರತ್ನ ನಾಯ್ಡುಗೆ ಟಿಕೆಟ್ ಖಾತ್ರಿಯಾಗಿದೆ. ಕೊನೆ ಕ್ಷಣದವರೆಗೂ ಈ ಕ್ಷೇತ್ರದಿಂದ ಟಿಕೆಟ್ ಪಡೆಯಲು ಬಿಜೆಪಿ ಮುಖಂಡರ ತುಳಸಿ ಮುನಿರಾಜುಗೌಡ ಭಾರೀ ಹರಸಾಹಸವನ್ನೇ ಪಟ್ಟರೂ ಪ್ರಯೋಜನವಾಗಲಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುನಿರತ್ನ ಬಿಜೆಪಿಗೆ ಬಂದ ಹಿನ್ನೆಲೆಯಲ್ಲಿ ಏನೇ ಆರೋಪ ಹಾಗೂ ವಿವಾದಗಳಿದ್ದರೂ ಉಪಚುನಾವಣೆಯಲ್ಲಿ ಟಿಕೆಟ್ ನೀಡಲೇಬೇಕೆಂದು ವರಿಷ್ಠ ಮಂಡಳಿ ತೀರ್ಮಾನಿಸಿತ್ತು, ಒಂದು ವೇಳೆ ಅವರಿಗೆ ಟಿಕೆಟ್ ಕೈ ತಪ್ಪಿದರೆ ಸರ್ಕಾರದ ಮೇಲೆ ಪರಿಣಾಮ ಬೀರುವುದರ ಜತೆಗೆ ಪಕ್ಷಕ್ಕೆ ವಚನಭ್ರಷ್ಟ ಕಳಂಕ ಅಂಟಿಕೊಳ್ಳುತ್ತದೆ ಎಂಬ ಭೀತಿಯಿಂದಾಗಿ ಟಿಕೆಟ್ ಖಾತರಿಯಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಅಲ್ಲದೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ, ಆರ್‍ಆರ್ ನಗರದಿಂದ ಮುನಿರತ್ನ ನಾಯ್ಡುಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆದರೆ, ತುಳಸಿ ಮುನಿರಾಜುಗೆ ಟಿಕೆಟ್ ಕೊಡಲು ತೆರೆಮರೆಯಲ್ಲಿ ದೆಹಲಿಯಲ್ಲಿರುವ ಪ್ರಭಾವಿ ನಾಯಕರು ಕಸರತ್ತು ನಡೆಸಿದ್ದರು.ಅಂತಿಮವಾಗಿ ವರಿಷ್ಠರು ಮುನಿರತ್ನಕ್ಕೆ ವಲ್ಲದ ಮನಸ್ಸಿನಿಂದಲೇ ಟಿಕೆಟ್ ನೀಡಲು ಸಮ್ಮತಿಸಿದ್ದಾರೆ. ಉಳಿದಂತೆ ತುಮಕೂರು ಜಿಲ್ಲೆ, ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಂಸದ ಮೂಡಲಗಿರಿಯಪ್ಪ ಪುತ್ರ ಡಾ.ರಾಜೇಶ್‍ಗೌಡಗೂ ಟಿಕೆಟ್ ಪಕ್ಕಾ ಆಗಿದೆ.ಸಂಜೆಯೊಳಗೆ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಅಕೃತವಾಗಿ ಘೋಷಣೆ ಮಾಡಲಿದೆ.ಮೂಲಗಳ ಪ್ರಕಾರ, ಇಬ್ಬರೂ ನಾಯಕರು ನಾಳೆ ಔಪಚಾರಿಕವಾಗಿ ನಾಮಪತ್ರ ಸಲ್ಲಿಕೆ ಮಾಡುವ ಸಂಭವವಿದ್ದು, ನಂತರ ಶುಕ್ರವಾರ ಪಕ್ಷದ ನಾಯಕರ ಜತೆ ಮತ್ತೊಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ಜಾಹಿರಾತು : ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800