ಯಡಿಯೂರಪ್ಪ ಇಲ್ಲಾಂದ್ರೆ ಬಿಜೆಪಿ ಇಲ್ಲ, ಬಿಜೆಪಿ ಇಲ್ಲಾಂದ್ರೆ ಯಡಿಯೂರಪ್ಪ ಇಲ್ಲ:ಕಾಂಗ್ರೆಸ್ ಶಾಸಕಯಡಿಯೂರಪ್ಪ ಇಲ್ಲ ಅಂದರೆ ಬಿಜೆಪಿ ಇಲ್ಲ, ಬಿಜೆಪಿ ಇಲ್ಲ ಅಂದರೆ ಯಡಿಯೂರಪ್ಪ ಇಲ್ಲ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡರವರು ಹೇಳಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ ಕೊಪ್ಪಳದಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿ, ಈ ಪುಣ್ಯಾತ್ಮ ಯಡಿಯೂರಪ್ಪ ಇರುವುದರಿಂದಲೇ ಕೇಂದ್ರದವರು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ.

ಕೇಂದ್ರದಿಂದ ಸರಿಯಾದ ಅನುದಾನ ನೀಡುತ್ತಿಲ್ಲ, ಇತ್ತೀಚಿನ ಚಂಡಮಾರುತದಿಂದ ಕರಾವಳಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ. ಆದರೆ ರಾಜ್ಯಕ್ಕೆ ಅತ್ಯಲ್ಪ ಪರಿಹಾರ ಬಿಡುಗಡೆಯಾಗಿದೆ. ಯಡಿಯೂರಪ್ಪ ಇಳಿಸಲು ಕೇಂದ್ರದ ಅವರ ಹೈಕಮಾಂಡ್ ಹಾಗೂ ರಾಜ್ಯದ ಲೋ ಕಮಾಂಡ್ ಸಹ ಕೆಲಸ ಮಾಡುತ್ತಿದೆ.

ರಾಜ್ಯದಲ್ಲಿ ಪರಿಸ್ಥಿತಿ ಕೆಟ್ಟು ಹೈದರಾಬಾದ್‍ನಂತೆ ಆಗಿದೆ. ಹಿಂದೆ ಜನಾರ್ದನರೆಡ್ಡಿ ಹೈದರಾಬಾದ್‍ಗೆ ಶಾಸಕರನ್ನು ಕರೆದುಕೊಂಡು ಹೋಗಿದ್ದರು. ಈಗ ಆಡಳಿತವೇ ಕೆಟ್ಟು ಹೈದರಾಬಾದ್‍ನಂತೆ ಆಗಿದೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಟೀಕಿಸಿದ್ದಾರೆ.