Rapper ಚಂದನ್ ಶೆಟ್ಟಿ ಫೇಸ್ಬುಕ್ ಅಕೌಂಟ್ ಹ್ಯಾಕ್ ಮಾಡಿ ಲೈವ್ ಬಂದ ಯುವಕ!

ರ‍್ಯಾಪರ್ ಚಂದನ್ ಶೆಟ್ಟಿ ಅವರ ಫೇಸ್ಬುಕ್ ಖಾತೆ ಹ್ಯಾಕ್ ಆಗಿದ್ದು, ವಿದೇಶಿ ವ್ಯಕ್ತಿಯೊಬ್ಬ ನಿರಂತರ ಲೈವ್ ವಿಡಿಯೋ ಪ್ರಸಾರ ಮಾಡಿದ್ದಾನೆ. ಲೈವ್ ಬಂದ ವ್ಯಕ್ತಿ ವಿಯೆಟ್ನಾಂ ಮೂಲದವನು ಎಂಬ ಮಾತುಗಳು ಕೇಳಿಬಂದಿದೆ.

ಸುಮಾರು 25 ನಿಮಿಷಗಳಿಗೂ ಹೆಚ್ಚು ಹೊತ್ತು ಚಂದನ್ ಶೆಟ್ಟಿ ಅವರ ಫೇಸ್ಬುಕ್ ಖಾತೆಯಿಂದ ಲೈವ್ ಪ್ರಸಾರವಾಗಿದೆ. 900ಕ್ಕೂ ಅಧಿಕ ಮಂದಿ ಲೈವ್ ವೀಕ್ಷಿಸಿದ್ದಾರೆ. ವಿದೇಶಿ ವ್ಯಕ್ತಿ ಮತ್ತು ಆತನ ಜೊತೆಗಿದ್ದ ವ್ಯಕ್ತಿ ಲೈವ್ನಲ್ಲಿ ಅಶ್ಲೀಲ ಕೈ ಸನ್ನೆಗಳನ್ನು ಮಾಡಿರುವುದು ಕಂಡುಬಂದಿದೆ. ನಂತರ ಲೈವ್ ಅನ್ನು ಆಫ್ ಮಾಡಿದ್ದಾರೆ.

ಇದನ್ನೂ ಓದಿ :  ನಾಳೆ ಯಶಸ್ವಿಯಾಗಿ ನಡೆಯಲಿದೆಯಾ ಕರ್ನಾಟಕ ಬಂದ್?!, ಏನಿರುತ್ತೇ?, ಏನಿರಲ್ಲ? ; ಇಲ್ಲಿದೆ ಸಂಪೂರ್ಣ ವಿವರ.

ಇತ್ತಿಚೆಗೆ ಗಣೇಶ ಹಬ್ಬದ ಪ್ರಯುಕ್ತ ಚಂದನ್ ಶೆಟ್ಟಿ ಅವರು ಕೋಲು ಮಂಡೆ ವಿಡಿಯೋ ಸಾಂಗ್ ಅನ್ನು ಬಿಡುಗಡೆ ಮಾಡಿದ್ದರು. ಆದರೆ ಈ ಹಾಡು ವಿವಾದ ಸೃಷ್ಠಿಸಿತು. ಚಂದನ್ ಶೆಟ್ಟಿ ವಿರುದ್ಧ ಮಲೆ ಮಹದೇಶ್ವರ ಭಕ್ತರು ಸಿಟ್ಟಾಗಿದ್ದರು.

ಮಹದೇಶ್ವರನ ಭಕ್ತೆ ಶಿವಶರಣೆ ಸಂಕಮ್ಮ ಅವರನ್ನು ಅಶ್ಲೀಲವಾಗಿ ಚಿತ್ರೀಕರಿಸಲಾಗಿದೆ ಮತ್ತು ಜಾನಪದಗೀತೆಯನ್ನು ಮೂಲ ದಾಟಿಗೆ ವಿರುದ್ದವಾಗಿ ಹಾಡಲಾಗಿದೆ ಎಂದು ಆರೋಪಿಸಿದ್ದರು. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚಂದನ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು.