13 ರಲ್ಲಿ 11 ಸ್ಥಾನ ಪಡೆದು ವಿಜಯಧ್ವಜ ಹಾರಿಸಿದ ಬಿಜೆಪಿ ; ಕೇಸರಿಯಲ್ಲಿ ಮುಳುಗಿದ ಚಿಕ್ಕಮಗಳೂರು

ಚಿಕ್ಕಮಗಳೂರು: ಭಾರಿ‌ ಕುತೂಹಲ ಕೆರಳಿಸಿದ್ದ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವಿನ ನಗೆ ಬೀರಿದೆ. ಹಲವು ವರ್ಷಗಳಿಂದ ಅಡಳಿತ ನಡೆಸಿಕೊಂಡು ಬರುತ್ತಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಮ ರ್ಮಾಘಾ ತವಾಗಿದೆ. 13 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 11ರಲ್ಲಿ ಜಯಗಳಿಸಿದ್ದಾರೆ. 2 ಸ್ಥಾನಕ್ಕೆ ಜೆಡಿಎಸ್ ತೃಪ್ತಿ ಪಟ್ಟಿದೆ. ಜೆಡಿಎಸ್ ಮುಖಂಡ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೆಗೌಡರಿಗೆ ಸೋಲಾಗಿದ್ದು, ಮೈತ್ರಿ ಪಕ್ಷಗಳಿಗೆ ತೀವ್ರ ಮುಖಭಂಗವಾಗಿದೆ.

ಚಿಕ್ಕಮಗಳೂರಿನಲ್ಲಿ ಬಿಜೆಪಿ ನಿರಂಜನ್ ಹಾಗೂ ಸತೀಶ್ ಆಯ್ಕೆಯಾಗಿದ್ದಾರೆ. ಕೆಲವು ಸಂಘಗಳು ಡಿಸ್ ಕ್ವಾಲಿಫೈ ಅಗಿದ್ದವು, ಇದನ್ನು ಪ್ರಶ್ನಿಸಿ ಜೆಡಿಎಸ್, ಕಾಂಗ್ರೆಸ್ಸಿಗರು ಕೋರ್ಟ್ ಮೇಟ್ಟಿಲೇರಿದ್ದರು. ಸಂಜೆ ನಾಲ್ಕು ಗಂಟೆಯ ಒಳಗೆ ಕೋರ್ಟ್‌ನ ಆದೇಶ ಬಾರದ ಹಿನ್ನೆಲೆಯಲ್ಲಿ ಎಸ್.ಎಲ್ ಭೋಜೇಗೌಡರಿಗೆ ಸೋಲಾಗಿದೆ. ವಿಧಾನ ಪರಿಷತ್ ಉಪ ಸಭಾಪತಿ ಎಸ್.ಎಲ್ ಧರ್ಮೆಗೌಡರಿಗೆ ಗೆಲುವಾಗಿದೆ. ಚಿಕ್ಕಮಗಳೂರಿನ ಜೆಡಿಎಸ್ ಬೆಂಬಲಿತ ಪರಮೇಶ್ವರಪ್ಪ ಎಂಬುವವರಿಗೆ ಗೆಲುವಾಗಿದೆ.

ಕಡೂರು ತಾಲೂಕಿನಿಂದ ಬಿಜೆಪಿಯ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದ ಶಾಸಕ ಬೆಳ್ಳಿ ಪ್ರಕಾಶ್ ಹಾಗೂ ರಾಮಪ್ಪ ಆಯ್ಕೆಯಾಗಿದ್ದಾರೆ. ಕೊಪ್ಪ ತಾಲೂಕಿನಿಂದ ಬಿಜೆಪಿಯಿಂದ ಸ್ವರ್ಧೆ ಮಾಡಿದ್ದ ಜಿ.ಪಂ ಸದಸ್ಯ ಎಸ್.ಎನ್ ರಾಮಸ್ವಾಮಿ ಗೆಲುವಿನ ನಗೆ ಬೀರಿದ್ದಾರೆ. ಆದರೇ, ಕೋರ್ಟ್ನ ಆದೇಶ ಬರುವವರೆಗೂ ಇವರ ಫಲಿತಾಂಶವನ್ನು ಪ್ರಕಟಿಸದಿರಲು ಕೋರ್ಟ್ ಸೂಚಿಸಿದೆ. ನರಸಿಂಹರಾಜ ಪುರ ತಾಲೂಕಿನಿಂದ ಬಿಜೆಪಿಯ ಸಂದೀಪ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೂಡಿಗೆರೆಯಿಂದ ಬಿಜೆಪಿಯ ಹಳಸೆ ಶಿವಣ್ಣ. ತರೀಕೆರೆಯಿಂದ ಬಿಜೆಪಿ ಬೆಂಬಲವಾಗಿ ಶಾಸಕ ಸುರೇಶ್, ಆನಂದಪ್ಪ ಹಾಗೂ ರಮೇಶ್ ಆಯ್ಕೆಯಾಗಿದ್ದಾರೆ. ಶೃಂಗೇರಿ ತಾಲೂಕಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೂರು, ಮೂರು ಮತಗಳನ್ನು ಸಮನಾಗಿ ಪಡೆದುಕೊಂಡಿದ್ದವು. ಈ ವೇಳೆಯಲ್ಲಿ ಚೀಟಿ ಎತ್ತುವ ತಂತ್ರಕ್ಕೆ ಹೋಗಿದ್ದು, ಬಿಜೆಪಿಯ ಶಂಕರಪ್ಪ ಗೌಡ ಎನ್ನುವವರಿಗೆ ವಿಜಯ ಲಕ್ಷ್ಮಿ ಒಳಿದಿದ್ದಾಳೆ.

ಇದನ್ನೂ ಓದಿ :  ನೆಲೆಯಿಲ್ಲದ ಕೆಸರಿನಲ್ಲಿ ಅರಳಿದ ಕಮಲ!? ; ಕಾಂಗ್ರೆಸ್ ಅದ್ಯಕ್ಷಗಿರಿಗೆ  ರಾಜಿನಾಮೆ!

ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800