ಸಿಎಂ ರಾಜೀನಾಮೆ.? ಅಸಲಿಯತ್ತೇನು!ರಾಜಿನಾಮೇ ಮಾತಾಡಿದ ಸಿಎಂ ಬಿಎಸ್ವೈ

ಬೆಂಗಳೂರು ಹೈಕಮಾಂಡ್ ಸೂಚನೆಯಂತೆ ಇಲ್ಲಿಯವರೆಗೆ ರಾಜ್ಯದ ಜನತೆಗೆ ಮುಖ್ಯಮಂತ್ರಿಯಾಗಿ ಒಳ್ಳೇಯ ಆಡಳಿತ ನೀಡಿದ ತೃಪ್ತಿ ನನಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.ದಿ ಮಾಜಿ ಮುಖ್ಯಮಂತ್ರಿ ಡಿ ದೇವರಾಜ್ ಅರಸುರವರ ಪುಣ್ಯ ಸ್ಮರಣೆ ದಿನದ ನಿಮಿತ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು ಹೈಕಮಾಂಡ್ ಗೆ ನನ್ನ ಮೇಲೆ ಎಲ್ಲಿಯವರೆಗೆ ವಿಶ್ವಾಸ ಇರುತ್ತದೆಯೋ ಅಲ್ಲಿಯವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಇರುತ್ತೇನೆ.

ಒಂದು ವೇಳೆ ಹೈಕಮಾಂಡ್ ರಾಜಿನಾಮೆ ನೀಡುವಂತೆ ಸೂಚಿಸಿದರೆ ತಕ್ಷಣ ರಾಜಿನಾಮೆ ನೀಡುವೆ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ. ಹೈಕಮಾಂಡ್ ಹೇಳುವವರೆಗೆ ಹಗಲಿರುಳು ಶ್ರಮಿಸಿ ರಾಜ್ಯದ ಜನರ ನೆರವಿಗೆ ಮುಂದಾಗಿ ಅಭಿವೃದ್ಧಿ ಮಾಡುವೆ ಎಂದು ತಿಳಿಸಿದರು.

ಇದನ್ನೂ ಓದಿ :  ಯಡಿಯೂರಪ್ಪ ಇಲ್ಲಾಂದ್ರೆ ಬಿಜೆಪಿ ಇಲ್ಲ, ಬಿಜೆಪಿ ಇಲ್ಲಾಂದ್ರೆ ಯಡಿಯೂರಪ್ಪ ಇಲ್ಲ:ಕಾಂಗ್ರೆಸ್ ಶಾಸಕ

ರಾಜ್ಯದಲ್ಲಿ ಪರ್ಯಾಯ ನಾಯಕ ಇಲ್ಲವೆಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿ.ಎಸ್ ಯಡಿಯೂರಪ್ಪ, ಪರ್ಯಾಯ ನಾಯಕತ್ವ ಇಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ದೇಶದಲ್ಲಿ ಪರ್ಯಾಯ ನಾಯಕರು ಇದ್ದೇ ಇದ್ದಾರೆ. ಆಯಾಯ ಕಾಲಕ್ಕೆ ತಕ್ಕಂತೆ ಪರ್ಯಾಯ ನಾಯಕರು ಸಿಗುತ್ತಾರೆ. ರಾಜ್ಯದಲ್ಲೂ ಪರ್ಯಾಯ ನಾಯಕರು ಇಲ್ಲ ಎಂದೇನಿಲ್ಲ, ಇದನ್ನ ನಾನು ಒಪ್ಪುವುದಿಲ್ಲ ಎಂದರು. ಯಡಿಯೂರಪ್ಪನವರ ಈ ಮಾತುಗಳಿಂದ ಕೆಲದಿನಗಳಿಂದ ಸಿ ಪಿ ಯೋಗಿಶ್ವರ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ನೀಡುತ್ತಿದ್ದ ಹೇಳಿಕೆಗಳಿಗೆ ಈಗ ರೆಕ್ಕೆ ಪುಕ್ಕಗಳು ಬಂದಂತಾಗಿವೆ. ಈ ವೇಳೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.