ಜಾರಕಿಹೊಳಿ ಸಿಡಿ ಬಗ್ಗೆ ಹೇಳಿಕೆ ನೀಡಿದ ಸಿಎಂಹಾಸನ :ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಹಗರಣ ಕುರಿತು ಕಾನೂನುರೀತ್ಯ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಶುಕ್ರವಾರ ಹಾಸನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸಮೀಪದ ಬೂವನಹಳ್ಳಿ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್ ಮರಣ ಪ್ರಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸುಳ್ಳು ಲೆಕ್ಕಾಚಾರ ಕೊಡುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ.

ಶಾಸಕ ರೇವಣ್ರೇ ಆಗಲಿ ಅಥವಾ ಯಾರೇ ಆಗಿರಲಿ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಬಾರದು, ಅದರಲ್ಲಿ ಸುಳ್ಳು ಹೇಳಿ ಏನಾಗಬೇಕಿದೆ, ಅಂತಹ ಸುಳ್ಳು ಲೆಕ್ಕಾಚಾರದಿಂದ ಪ್ರಯೋಜನವಾದರೂ ಏನಿದೆ ಎಂದು ಮರು ಪ್ರಶ್ನಿಸಿದರು. ಕೋವಿಡ್ ಲಾಕ್‌ಡೌನ್ ಮತ್ತಿತರ ಕಾರಣಗಳಿಗಾಗಿ ರಾಜ್ಯದ ತೆರಿಗೆ ಸಂಗ್ರಹ ಕುಂಠಿತಗೊಂಡು ಹಣಕಾಸು ಪರಿಸ್ಥಿತಿ ಹದಗೆಟ್ಟಿದೆ ನಿಜ ಆದರೆ ಬಡವರಿಗೆ ತೊಂದರೆ ಆಗಬಾರದೆಂದು ಈಗಾಗಲೇ 2 ಪರಿಹಾರ ಪ್ಯಾಕೇಜು ಬಿಡುಗಡೆ ಮಾಡಲಾಗಿದೆ.

ನೀರಾವರಿಗೂ ಆದ್ಯತೆ ಕೊಡಲಾಗಿದೆ ಎಂದರು. ಈ ಮುನ್ನ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಮುಖ್ಯ ಮಂತ್ರಿಗಳಿಗೆ ಸ್ಥಳೀಯ ಪೊಲೀಸರು ಸ್ಥಳದಲ್ಲೇ ಗೌರವ ವಂದನೆ ಸಲ್ಲಿಸಿದರು. ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಅಬಕಾರಿ ಖಾತೆಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಮಾಜಿ ಸಚಿವ ಎ. ಮಂಜು, ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಜಿಲ್ಲಾಧಿಕಾರಿ ಆರ್.ಗಿರೀಶ್, ಶ್ರೀನಿವಾಸಗೌಡ ಮತ್ತಿತರರು ಹಾಜರಿದ್ದರು .