ಬೆಂಗಳೂರು: ಕಾಂಗ್ರೆಸ್ ನಾಯಕರ ಮೊದಲ ಟಾರ್ಗೆಟ್ ಜೆಡಿಎಸ್. ಇದು ಅವರ ಮೊದಲ ಅಜೆಂಡಾ ಆಗಿದೆ. ಬಿಜೆಪಿಗಿಂತ ನಮ್ಮ ಪಕ್ಷದ ಮೇಲೆಯೇ ಅವರಿಗೆ ಕೋಪ, ಅಸೂಯೆ ಜಾಸ್ತಿ. ನನಗೆ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಇದೆ ಎಂದು ಇಲ್ಲಸಲ್ಲದ ಅಪಪ್ರಚಾರ ನಡೆಯುತ್ತಿದೆ. ಈಗಿನ ಬಿಜೆಪಿ ಅಭ್ಯರ್ಥಿಯನ್ನು ಬೆಳೆಸಿದವರೇ ಸೋಲಿಸಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಗ್ಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು 2004ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರಲಿಲ್ಲ.ಆಗ ಅನಿವಾರ್ಯವಾಗಿ ಕಾಂಗ್ರೆಸ್ ಜೊತೆ ಸರ್ಕಾರ ರಚನೆ ಮಾಡಬೇಕಾಯಿತು. ಆದರೆ ಆರು ತಿಂಗಳು ಸಂಪುಟ ವಿಸ್ತರಣೆ ಮಾಡಲೇ ಇಲ್ಲ. ಆದರೆ, ಅಂದೇ ಕಾಂಗ್ರೆಸ್ ನವರು ನಮ್ಮ ಪಕ್ಷವನ್ನು ಮುಗಿಸಲು ಆರಂಭಿಸಿದ್ದರು. ಅದೇ ಕಾರಣಕ್ಕೆ ಕಾಂಗ್ರೆಸ್ ಜೊತೆ ಸರ್ಕಾರ ರಚನೆಗೆ ನನಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ ಎಂದರು.
ಬಿಜೆಪಿ ಹಾಗೂ ಬಿಜೆಪಿ ಅಭ್ಯರ್ಥಿ ಬಗ್ಗೆ ಕುಮಾರಸ್ವಾಮಿ ಸಾಫ್ಟ್ಕಾರ್ನರ್ ಹೊಂದಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಜನರ ಹಣ ಲೂ ಟಿ ಹೊಡೆಯೋರ ಬಗ್ಗೆ ನಾನು ಮಾತಾಡಲ್ಲ. 250 ಕೋಟಿ ರೂ. ಕಳ್ಳ ಬಿಲ್ ಮಾಡಿ ಹಣ ಗುಳುಂ ಮಾಡಿದ್ದಾರೆ. ಬೆವರು ಸುರಿಸಿ ದುಡಿದ ಹಣದಲ್ಲಿ ನಮ್ಮ ಅಭ್ಯರ್ಥಿ ಕೃಷ್ಣಮೂರ್ತಿ ಕೋವಿಡ್ ಸಮಯದಲ್ಲಿ ಜನಕ್ಕೆ ಸಹಾಯ ಮಾಡಿದ್ದಾರೆ. ಆದರೆ, ಜನರ ಪಾಪದ ಹಣದಲ್ಲಿ ಬಿಜೆಪಿ ಅಭ್ಯರ್ಥಿ ಫುಡ್ಕಿಟ್ ನೀಡಿದ್ದಾರೆ ಎಂದು ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದರು
ಜಾಹಿರಾತು : ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800