ಕೈನಲ್ಲಿ ಈ ವ್ಯಕ್ತಿ ಇರುವವರೆಗೂ ಡಿಕೆಶಿ ಸಿಎಂ ಆಗೋದು ಅಸಾಧ್ಯ..!ವಿಧಾನಸಭೆವಿರೋಧಪಕ್ಷದನಾಯಕಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಇರುವವರೆಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾಗಲು ಸಾಧ್ಯವೇ ಇಲ್ಲ ಎಂದು ಪ್ರವಾ ಸೋದ್ಯಮ ಹಾಗೂ ಪರಿಸರ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿಗೆ ಸಿಎಂ ಆಗುವ ಹಗಲುಗನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಇರೋವರೆಗೆ ಅದು ಯಾವುದೇ ಕಾರಣಕ್ಕೂ ಈಡೇರುವದಿಲ್ಲ, ಡಿಕೆಶಿಗೆ ಶಾಸಕರ ಬೆಂಬಲವೂ ಇಲ್ಲ ಎಂದು ಛೇಡಿಸಿದರು.

ದಲಿತ ಸಿಎಂ ಚರ್ಚೆ ಮುನ್ನೆಲೆಗೆ: ಕಳೆದ 70 ವರ್ಷಗಳಿಂದ ದಲಿತ ಸಮುದಾಯವೂ ಕಾಂಗ್ರೆಸ್ ಪರವಿತ್ತು. ಆದರೆ ಅವರಿಗೆ ಅನ್ಯಾಯವಾಗಿದ್ದರಿಂದ ದಲಿತ ಸಿಎಂ ಆಗಬೇಕೆಂಬ ಕೂಗು ಕೇಳಿ ಬರುತ್ತಿದೆ. ಮುಂದೆ ಇದು ಬಲಗೊಳ್ಳಲಿದೆ ಎಂದರು. ಇನ್ನು ಬಿಜೆಪಿಯ ಕಾರ್ಯಕರ್ತನಾಗಿನನ್ನ ಭಾವನೆಗಳನ್ನು ಹೈಕಮಾಂಡ್ ಮುಂದೆ ಹೇಳಿಕೊಂಡಿದ್ದೇನೆ. ವಾದ-ವಿವಾದ ಎಲ್ಲವೂ ಮುಗಿದಿದೆ. ಈಗ ಜಡ್ಜ್ಮೆಂಟ್ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದು ಮಾರ್ಮಿಕವಾಗಿ ಹೇಳಿದರಲ್ಲದೇ ಪಕ್ಷದ ಹೈಕಮಾಂಡ್ ಏನಾದ್ರೂ ಮಾರ್ಗಸೂಚಿ ನೀಡುತ್ತದೆ ಎಂಬ ಆಶಾಭಾವನೆ ಇದೆ ಎಂದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ ಮಾಧ್ಯಮದಲ್ಲಿ ನೋಡಿದ್ದೇನೆ. ಎಲ್ಲವನ್ನೂ ಪಕ್ಷದ ಚೌಕಟ್ಟಿನಲ್ಲಿ ಸರಿಪಡಿಸಿಕೊಂಡು ಹೋಗುತ್ತೇವೆ. ನಮ್ಮ ಬಳಿ ಯಾವುದೇ ರೀತಿಯ ಗೊಂದಲವಿಲ್ಲ ಎಂದರು.