ಕಾಂಗ್ರೆಸ್ ಹಳಸಿದ ಅನ್ನ ತಿನ್ನಲು ಕಾಯುತ್ತಿದೆ. ಹೆಚ್ ಡಿಕೆ ಆಕ್ರೋಶಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಎಚ್ ಡಿಕೆ, ತಿನ್ನುವ ಅನ್ನ ಹಳಸಿದೆ, ಅದನ್ನು ಬೇಗನೆ ತಿನ್ನಲು ನಾಯಿ ಕಾದು ಕುಳಿತಂತೆ, ಕರ್ನಾಟಕದ ಮತ್ತೊಂದು ರಾಜಕೀಯ ಪಕ್ಷ ಕುರ್ಚಿಗಾಗಿ ಕಾದು ಕುಳಿತಿದೆ. ರಾಜ್ಯದಲ್ಲಿ ಹತ್ತಿರುವ ಬೆಂಕಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸುಟ್ಟು ಹೋದರೆ, ನಂತರದ ದಿನಗಳಲ್ಲಿ ತಾವು ಅಧಿಕಾರದಲ್ಲಿ ಕುಳಿತುಕೊಳ್ಳಲು ಅವಕಾಶವಿದೆ ಎಂದು ದೂರಾಲೋಚನೆ ಎಲ್ಲಿದ್ದಾರೆ. ಆ ರಾಷ್ಟ್ರೀಯ ಪಕ್ಷ ಪ್ರಯತ್ನಗಳ ಪೈಪೋಟಿಗೆ ಬಿದ್ದು ನಡೆಸುತ್ತಿದೆ ಅಂತ ಆಕ್ರೋಶ ಹೊರ ಹಾಕಿದರು.

ರಾಜ್ಯದ ಸಂಕಷ್ಟದ ಕಾಲದಲ್ಲಿ ಬಿಜೆಪಿಯಲ್ಲಿ ಉಂಟಾಗಿರುವ ಅಧಿಕಾರದ ಆಸೆ‌ ಹೇಳತಿರದು, ಅದನ್ನು ಬಳಸಿಕೊಂಡು ಅಧಿಕಾರಕ್ಕೆ ಬರಲು ಕೋವಿಡ್‌ ನಿಯಮಗಳನ್ನೆಲ್ಲ ಮೀರಿ ಬೀದಿಗೆ ಬಿದ್ದಿರುವ ಕಾಂಗ್ರೆಸ್‌ ಪಕ್ಷಗಳೆರಡೂ ಆತ್ಮಾವಲೋಕನೆ ಮಾಡಿಕೊಳ್ಳಬೇಕು. ಜನರ ರಕ್ಷಣೆ ಮಾಡುವ ನಾವು ಎನು ಮಾಡತ್ತಿದ್ದೇವೆ
ಎಂದು, ಸಂಕಷ್ಟದ ಪರಿಸ್ಥಿತಿಗಳನ್ನೇ ಅಧಿಕಾರಕ್ಕೇರಲು ಏಣಿ ಮಾಡಿಕೊಂಡು ಕುಳಿತಿರುವ ಈ ಪಕ್ಷಗಳ ನಡೆಯನ್ನು ಜನ ಗಮನಿಸ ಜನ ಚಿಮಾರಿ ಹಾಕಬೇಕು.ಆರೋಗ್ಯ ತುರ್ತು ಪರಿಸ್ಥಿತಿಯ ನಡುವೆ ಕನ್ನಡ, ಕರ್ನಾಟಕದ ಅಸ್ಮಿತೆ ಪ್ರಶ್ನೆ ಮಾಡುವಂಥ ಘಟನೆಗಳು ಒಂದರ ಹಿಂದೊಂದರಂತೆ ನಡೆಯುತ್ತಿವೆ. ಈ ವಿಚಾರವಾಗಿ ಬಿಜೆಪಿ, ಕಾಂಗ್ರೆಸ್‌ ಏನು ಮಾಡಿದವು, ಯಾವದಾದ್ರೂ ನಿರ್ಣಯ ತೆಗೆದುಕೊಂಡ್ರಾ?

ಇದನ್ನೂ ಓದಿ :  ಸಿಎಂ ಬದಲಾವಣೆ : ಕೇವಲ ಹಾಸ್ಯದ ತುಣುಕು! ಇನ್ನೂ ಎರಡು ವರ್ಷಗಳ ಕಾಲ ರಾಜಾಹುಲಿಯೇ ಸಿಎಂ?

ಇವರೆಲ್ಲ ರಾಜಕೀಯ ಮಾಡುತ್ತಿರುವುದು ಕರ್ನಾಟಕದಲ್ಲೇ ಅಲ್ಲವೇ, ಕರ್ನಾಟಕದ ಕುರ್ಚಿಗಾಗಿ ಅಲ್ಲವೇ?ಆದರೆ ನಮ್ಮ ನಾಡು, ನುಡಿ,ಕರ್ನಾಟಕದ ಸ್ವಾಭಿಮಾನಕ್ಕೆ ದಕ್ಕೆಯಾದಾಗ, ಚುತಿಬರುವಂತಹ ಕೆಲಸ ನಡೆದಾಗ ಅದರ ಬಗ್ಗೆ ಕಾಳಜಿವಹಿಸಬೇಕಲ್ಲವೆ ಇವರೆಲ್ಲ ಅದ್ಯಾವ ಬಿಲದಲ್ಲಿ ಅಡಗಿ ಕುಳಿತ ಕುರ್ಚಿಗಾಗಿ ಕಾಯುತ್ತಿದ್ದಾರು? ಗೊತ್ತಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.