ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೊಸ ಪ್ರಯತ್ನಕ್ಕೆ  ಕೈ ಹಾಕಿದ ‘ಕೈ’ ಪಕ್ಷ !??ನವದೆಹಲಿ: ಸತತ ಸೋಲಿನ ಕಹಿ ಉಣ್ಣುತ್ತಲೇ ಇರುವ ಕಾಂಗ್ರೆಸ್ ಪಕ್ಷದ ನಾಯಕತ್ವದ ಬಗ್ಗೆ ಹಿರಿಯ ನಾಯಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುವುದನ್ನು ಮುಂದುವರಿಸಿದ್ದಾರೆ. ಈ ನಡುವೆ, ಹೊಸ ಅಧ್ಯಕ್ಷರ ಆಯ್ಕೆ ವಿಚಾರವೂ ಪದೇಪದೆ ಚರ್ಚೆಗೆ ಬರುತ್ತಿವೆ. ಹೊಸ ವಿಚಾರ ಅಂದರೆ ಕಾಂಗ್ರೆಸ್ ಪಕ್ಷದ ಹೊಸ ಅಧ್ಯಕ್ಷರ ಆಯ್ಕೆ ನಡೆಸುವುದಕ್ಕೆ ಡಿಜಿಟಲ್ ಸ್ಪರ್ಶ ನೀಡುವುದಕ್ಕೆ ಹೈಕಮಾಂಡ್ ತೀರ್ಮಾನಿಸಿದೆಯಂತೆ!ಪಕ್ಷದ ಕೇಂದ್ರೀಯ ಚುನಾವಣಾ ತಂಡ 1,500ರಷ್ಟು ಎಐಸಿಸಿ ಪದಾಧಿಕಾರಿಗಳ ಮತದಾರರ ಯಾದಿಯನ್ನು ಸಿದ್ಧಪಡಿಸುತ್ತಿದೆ. ಅವರಿಗೆ ಡಿಜಿಟಲ್ ಐಡಿ ಕಾರ್ಡ್ಗಳನ್ನು ಒದಗಿಸಲು ಕ್ರಮ ತೆಗೆದುಕೊಂಡಿದೆ. ಇದೇ ಮೊದಲ ಬಾರಿಗೆ ಪಕ್ಷದ ಚುನಾವಣೆಗೆ ಡಿಜಿಟಲ್ ಸ್ಪರ್ಶ ನೀಡಲು ಹೈಕಮಾಂಡ್ ತೀರ್ಮಾನಿಸಿರುವಂಥದ್ದು.

ಇದಕ್ಕಾಗಿ ರಾಜ್ಯ ಘಟಕಗಳಿಗೆ ಎಐಸಿಸಿ ಪದಾಧಿಕಾರಿಗಳ ಡಿಜಿಟಲ್ ಫೋಟೋ ಸಂಗ್ರಹಿಸಿ ಕಳುಹಿಸಲು ಸೂಚನೆ ನೀಡಲಾಗಿದೆ. ಮುಂದಿನ ಕೆಲವೇ ವಾರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ರಾಹುಲ್ ಗಾಂಧಿ ಅಧ್ಯಕ್ಷರಾಗಿ ಆಯ್ಕೆ ಆದಾಗ 2017ರಲ್ಲಿ ಇದ್ದ ಎಐಸಿಸಿ ಪದಾಧಿಕಾರಿಗಳ ಪಟ್ಟಿಯನ್ನೇ ಈ ಚುನಾವಣೆಗೆ ಪರಿಗಣಿಸಲಾಗಿದೆ. ಒಮ್ಮೆ ಪಕ್ಷದ ಎಲೆಕ್ಟೋರಲ್ ಕಾಲೇಜ್ ಚುನಾವಣೆ ಸಿದ್ಧವಾದ ಕೂಡಲೇ ಈ ಬಗ್ಗೆ ಅಧಿಸೂಚನೆ ಪ್ರಕಟಿಸಲಾಗುವುದು. ಪಂಚ ರಾಜ್ಯ ಚುನಾವಣೆಗೂ ಮೊದಲೇ ಪಕ್ಷದ ಈ ಚುನಾವಣೆ ನಡೆಯಲಿದೆ. ಅಧ್ಯಕ್ಷರ ಅಧಿಕಾರಾವಧಿ 2 ವರ್ಷವಾಗಿದ್ದು, ಪ್ರತಿ ಎರಡು ವರ್ಷಕ್ಕೊಮ್ಮೆ ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. 

ಇದನ್ನೂ ಓದಿ :  ಮುಂದಿನ ಜೂನ್‌ಗೆ ಸಿಹಿ ಸುದ್ದಿ ನೀಡಿದ ಯಡಿಯೂರಪ್ಪ

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/