ಹೆಮ್ಮಾರಿ ಕೊರೊನಾ – ಆಕ್ಸಿಜನ್ ಅಭಾವ
ಎಬಿವಿಪಿ ಈ ಸಂದರ್ಭದಲ್ಲಿ ಮಾಡಿದ್ದೇನು?ಆಕ್ಸಿಜನ್ ಚಾಲೆಂಜ್

ಪೀಠಿಕೆ ಭೂಮಿಯ ಮೇಲೆ ವಾಸ ಮಾಡುತ್ತಿರುವ ನಮಗೆ ಸುತ್ತಲೂ ಇರುವ ನೀರಿನ ಸ್ಥಳಗಳು, ಅರಣ್ಯ ಪ್ರದೇಶಗಳು, ಪಶು ಪಕ್ಷಿ, ಮನುಷ್ಯ ತನ್ನ ಸ್ವಾರ್ಥ – ಸುಖಕ್ಕಾಗಿ ಮಾಡಿದ ಕೆಲಸಗಳಿಂದಾಗಿ ಇಂದು ಪರಿಸರ ನಾಶವಾಗುತ್ತಿದೆ. ಇದರ ಬಹುದೊಡ್ಡ ಪರಿಣಾಮ ಮನುಷ್ಯ ಹಾಗೂ ಇನ್ನಿತರ ಜೀವ ಸಂಕುಲಗಳ ಮೇಲೆ ಬೀರುತ್ತಿದೆ. ಹೀಗಾಗಿ ಪರಿಸರ ವನ್ನು ರಕ್ಷಿಸುವ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದು ಅನಿವಾರ್ಯ.
ನಮ್ಮ ಪೂರ್ವಜರ ಕಾಲದಲ್ಲಿ ನಮ್ಮ ಪರಿಸರ ವೈವಿಧ್ಯಮಯವಾಗಿ ಒಂದು ಒಳ್ಳೆಯ ವ್ಯವಸ್ಥೆಯಲ್ಲಿ ಇತ್ತು. ಸುಂದರವಾದ ಕಾಡುಗಳು, ಗುಡ್ಡಗಳು, ಪ್ರಾಣಿ -ಪಕ್ಷಿಗಳ ಸಂಕುಲಗಳು ತುಂಬಾ ಚೆನ್ನಾಗಿ ನೈಸರ್ಗಿಕ ಸಂಪನ್ಮೂಲಗಳೊಂದಿಗೆ ಕೂಡಿತ್ತು. ಕಾಲ ಬದಲಾದಂತೆ ಹಾಗೂ ದಿನಗಳು ಬದಲಾದಂತೆ ಜನಸಂಖ್ಯೆ ಹೆಚ್ಚಾದ ಹಾಗೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ತನ್ನ ಕೆಲಸಕ್ಕಾಗಿ ತಂತ್ರಜ್ಞಾನದ ಪ್ರಭಾವವಾಗಿ ಕಾಡುಗಳನ್ನು ನಾಶ ಮಾಡಿ ಮರ ಗಿಡಗಳನ್ನು ಕಡೆದು ಹಾಕಿ ಪ್ರಾಣಿ ಪಕ್ಷಿಗಳು, ವಾಸಸ್ಥಾನವಾದ ಅರಣ್ಯ ಪ್ರದೇಶಗಳನ್ನು ನಾಶ ಮಾಡಿರುವುದರಿಂದ ಅವುಗಳ ರೊಧನೆ ಮಾತ್ರ ಯಾರಿಗೂ ಕೇಳಲಿಲ್ಲ. ರೊಧನೆಯ ಜೊತೆ ಜೊತೆಯಲ್ಲಿ ತನ್ನ ಅಳಿವಿನ ಅಂಚಿನಲ್ಲಿ ಪ್ರಾಣಿ ಪಕ್ಷಿಗಳ ಸಂಕುಲನೇ ನಾಶವಾಗಿ ಬಿಟ್ಟಿತು. ಇವತ್ತಿನ ದಿನ ಅರಣ್ಯ ನಾಶದಿಂದಾಗಿ ಆಮ್ಲಜನಕದ ಕೊರತೆ ಅನುಭವಿಸಬೇಕಾಗಿದೆ. ನಾವು ಪ್ರಾಣಿಗಳನ್ನು ಚಿತ್ರ ಪುಟಗಳಲ್ಲಿ ಮಕ್ಕಳಿಗೆ ತೊರಿಸುತ್ತಾ ಇದಿವಿ ಮುಂದೊಂದು ದಿನ ಈ ರೀತಿಯಲ್ಲಿಯೇ ನಾವು ಪ್ರಾಣಿ ಪಕ್ಷಿಗಳನ್ನು ಕೇವಲ ಪುಸ್ತಕಗಳಲ್ಲಿ ಮಾತ್ರಾ ತೋರಿಸುವ ಪರಿಸ್ಥಿತಿ ಎದುರಾಗ ಬಾರದು.

ನಮ್ಮ ದೇಶದಲ್ಲಿ ಹಲವಾರು ಜನಸಾಂದ್ರತೆಯನ್ನು ಹೊಂದಿರುವ ನಗರಳಿವೆ ಉದಾಹರಣೆ ಬೆಂಗಳೂರು ಮೊದಲು ಸಾವಿರಾರು ಕೆರೆಗಳಿಂದ ಹಾಗೂ ಅತ್ಯುತ್ತಮವಾದ ಪರಿಸರದಿಂದ ಕೂಡಿತ್ತು ವಿಜ್ಞಾನ ತಂತ್ರಜ್ಞಾನದಿಂದ ಆ ಕೆರೆಗಳನ್ನು ಮುಚ್ಚಿ ಮನೆಗಳು, ಕಾರ್ಖಾನೆಗಳನ್ನು ಸ್ಥಾಪಿಸಿ ನೀರಿನ ಶೇಖರಣೆ ಮಟ್ಟ ಕಡಿಮೆಯಾಗಿದೆ.
ಮಾನವನು ಈ ರೀತಿಯಾಗಿ ಪ್ರಾಣಿ ಪಕ್ಷಿಗಳನ್ನು ಕೊಲ್ಲುವುದರಿಂದ ಹಾಗೂ ಪರಿಸರದ ನಾಶದಿಂದ ಪ್ರಕೃಯು ನಮ್ಮಗೆ ಇಂದು ಪಾಠ ಕಲಿಸುತ್ತಿದೆ

ಈ ಕರೋನ ಮಹಾಮಾರಿ ರೋಗದಿಂದ ಇಡೀ ದೇಶದಲ್ಲಿ ಆಕ್ಸಿಜನ್ ಅಭಾವ ಮತ್ತು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೇಡ್ ಸಿಗದ ಪರಿಸ್ಥಿತಿ ಹಾಗೂ ಆಕ್ಸಿಜನ್ ಕೊರತೆಯಿಂದಾಗಿ ಸಾವಿರಾರು ಜನ ಪ್ರಾಣವನ್ನು ಕಳೆದುಕೊಂಡಿದಾರೆ ಈ ಸಂದರ್ಭದಲ್ಲಿ ನಮಗೆ ಎಲ್ಲರಿಗೂ ಕೂಡ ಆಕ್ಸಿಜನ್ ಅವಶ್ಯಕತೆ ಎಷ್ಟಿದೆ ಎಂಬುದು ಈ ಸಮಾಜಕ್ಕೆ ಮತ್ತು ನಮಗೆ ಅರಿವುವಾಯಿತು. ಅದರಿಂದಾಗಿ ನಮ್ಮ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಹಾಗೂ ಸ್ಟೂಡೆಂಟ್ ಫಾರ್ ಡೆವಲಪ್ಮೆಂಟ್ ವತಿಯಿಂದ ಒಂದು ಅಭಿಯಾನವನ್ನು ಕೊಳ್ಳಲಾಯಿತು.‌ಈ ಅಭಿಯಾನದ ಹೆಸರೇ
ಆಕ್ಸಿಜನ್ ಚಾಲೆಂಜ್

ಇಂದಿನ ದಿನಗಳಲ್ಲಿ ನಾವು ಅನೇಕ ಚಾಲೆಂಜ್ ಗಳನ್ನು ಅಂತರ ಜಾಲದಲ್ಲಿ ನಾವುಗಳು ನೋಡುತ್ತಾ ಇದ್ದೇವೆ. ಅವಶ್ಯಕತೆ ಇಲ್ಲದ ಅನೇಕ ಚಾಲೆಂಜ್ ನ್ನು ಕೇವಲ ಮನರಂಜನೆಗಾಗಿ ಮಾಡುತ್ತಾ ಇದ್ದು, ನಿಜವಾಗಿಯೂ ಯಾವುದರ ಅವಶ್ಯಕತೆಯಿದೆ ನಮಗೆ ಮತ್ತು ನಮ್ಮ ಸಮಾಜಕ್ಕೆ ಹಾಗೂ ನಮ್ಮ ಪರಿಸರಕ್ಕೆ ಎನ್ನುವ ಅರಿವು ಮೂಡಬೇಕಿದೆ. ಹೀಗೆ ಪ್ರಕೃತಿ ಉಳಿವಿಗಾಗಿ ಚಾಲೆಂಜ್ ಗಳನ್ನು ಸ್ವೀಕರಿಸಿ ಯುವ ಸಮುದಾಯವನ್ನು ಇದರಲ್ಲಿ ಸಕ್ರಿಯವಾಗಿ ತೋಡಗಿಕೊಳಲು ಈ ಆಕ್ಸಿಜನ್ ಚಾಲೆಂಜ್ ಅಭಿಯಾನ ಪ್ರಾರಂಭವಾಯಿತು.
ಆಕ್ಸಿಜನ್ ಚಾಲೆಂಜ್ ಮುಖ್ಯ ಉದ್ದೇಶ ಜೂನ ೫ ರಂದು ಐದು ದಿನಗಳ ಅಭಿಯಾನವಾಗಿದ್ದು ೫ ಲಕ್ಷ ಸಸಿಗಳನ್ನು ನೆಡುವುದು. ಒಬ್ಬ ವ್ಯಕ್ತಿ ೫ ಸಸಿಗಳನ್ನು ನೆಡುವುದು ಮತ್ತು ಇನ್ನೊಬ್ಬ ವ್ಯಕ್ತಿಗೆ ಈ ಚಾಲೆಂಜ್ ಯನ್ನು ಕೊಡುವುದು ಮತ್ತು ಇದು ಸಾಮಾಜಿಕ ಜಾಲತಾಣದಲ್ಲಿ #OxygenChallenge ಎಂಬ ಟ್ಯಾಗ್ ಬಳಸಿ ತಮ್ಮ ಫೋಟೋಗಳನ್ನು ಹಾಕುವುದು ಇದೆ ರೀತಿಯಾಗಿ ಒಂದು ಚೈನ ವ್ಯವಸ್ಥೆಯಲ್ಲಿ ಯುವಕರು ಚಾಲೆಂಜ್ ರೂಪದಲ್ಲಿ ತೆಗೆದುಕೊಂಡು ಐದು-ಐದು ಗಿಡಗಳನ್ನು ಹಚ್ಚುತ್ತಾ ಹೋದರೆ ಇದರಿಂದ ನಮ್ಮ ಪರಿಸರ ಸಮತೋಲನವಾಗುತ್ತದೆ ಎಂಬುದು ಆಶಾಭಾವನೆ. ಹೇಗಿದ್ದರು ಲಾಕ್ ಡೌನ್ ಸಮಯದಲ್ಲಿ ಯುವಕರು ಹಳ್ಳಿಗಳಯಲ್ಲಿ ವಾಸವಾಗಿದ್ದಾರೆ ಇದರಿಂದಾಗಿ ಅವರಿಗೆ ಇದು ತುಂಬಾ ಅನುಕೂಲವಾಗುತ್ತದೆ ಈ ಮರ ಗಿಡಗಳನ್ನು ಹಚ್ಚುವುದರ ಮೂಲಕ ಪರಿಸರಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡುವುದೆ ಆಕ್ಸಿಜನ್ ಚಾಲೆಂಜ್ ನ ಮುಖ್ಯ ಉದ್ದೇಶ

ಅನಂತರ ಕೇವಲ ಮರ ಗಿಡಗಳನ್ನು ಹಚ್ಚುವುದಲ್ಲದೆ ಪಾಲನೆ , ಪೋಷಣೆ , ನಾವು ಇರುವಷ್ಟು ದಿನ ಅವುಗಳಿಗೆ ನೀರು ಹಾಕಿ ಅಥವಾ ಪ್ರಾಣಿಗಳಿಂದ ರಕ್ಷಣೆ ಮಾಡಬೇಕು ಈ ರೀಯಾಗಿ ವ್ಯವಸ್ಥಿತವಾಗಿ ಭಾಗಿಯಾಗಿರುವುದರಿಂದ ಅದು ತಾನಾಗಿಯೇ ಅರಣ್ಯ ಸೃಷ್ಟಿ ಆಗುತ್ತದೆ. ಇದರಿಂದ ನಮ್ಮ ನಾಡಿಗೆ ಬೇಕಾದ ಮಳೆ ,ಬೆಳೆ ,ಎಲ್ಲವೂ ಸಹ ಸಮೃದ್ಧಿಯಾಗುತ್ತದೆ. ಆದರಿಂದ ಒಳ್ಳೆಯ ವಾತಾವರಣ ಸಿಗುತ್ತದೆ. ಪ್ರಾಣಿ ಸಂಕುಲ ನಶಿಸಿ ಹೋಗುವುದನ್ನು ತಡೆಗಟ್ಟಬಹುದು ಮತ್ತು ಗ್ಲೋಬಲ್ ವಾರ್ಮಿಂಗನ್ನು ತಡೆಗಟ್ಟಬಹುದು ೫ ಲಕ್ಷ ಸಸಿಗಳನ್ನು ನೆಡುವುದಾದ ನಂತರ ಮತ್ತೊಂದು ಹೊಸ ಯೋಜನೆ ಮಾಡಲಾಗುದೆ.

ಬೀಜದ ಉಂಡೆ
ಎಬಿವಿಪಿ ಆಯಾಮದ ಎಸ್‌. ಎಫ್.ಡಿ ವತಿಯಿಂದ ಹಾಗೂ ಎನ್, ಎಸ್. ಎಸ್. ಸಹಯೋಗದೊಂದಿಗೆ ರಾಜ್ಯದ ೫ ಲಕ್ಷ ಬೀಜದ ಉಂಡಯನ್ನು ತಯಾರಿ ಅವುಗಳನ್ನು ಎಲ್ಲಿ ಬಹುಭಾಗವಾದಂತ ಖಾಲಿ ಇರುವ ಪ್ರದೇಶದಲ್ಲಿ, ಸ್ಥಳಗಳಲ್ಲಿ, ಅಥವಾ ನಮ್ಮ ಸುತ್ತಲಿನ ಪರಿಸರದಲ್ಲಿ ಅಂತಹಾ ಪ್ರದೇಶದಲ್ಲಿ ಬೀಜದ ಉಂಡೆಗಳನ್ನು ತಯಾರು ಮಾಡಿ ಹಾಕುವುದರ ಮೂಲಕ, ಮಳೆ ಬರುವುದರಿಂದ ನೀರು ತಾಗಿಯೇ ಸಿಗುತ್ತದೆ. ಈ ಸಂದರ್ಭದಲ್ಲಿ ಗಿಡಗಳು ಬೆಳೆಯಲು ಪ್ರಾರಂಭವಾಗುತ್ತದೆ. ಎಲ್ಲಿ ಗಿಡ ಮರಗಳ ಅವಶ್ಯಕತೆ ಇದೆಯೋ ಆ ಪ್ರದೇಶದಲ್ಲಿ ಈ ಬೀಜದ ಉಂಡೆಗಳನ್ನು ಹಾಕುವ ಕಾರ್ಯ ಇದು ಜೂನ್ ೧೬ ರಿಂದ ೧೭ ಪ್ರಾರಂಭವಾಗುತ್ತದೆ ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ,ಕುಲಪತಿಗಳು ಕೆಲವು ಅಧಿಕಾರಿಗಳು, ಪ್ರಕೃತಿಯ ಪ್ರೇಮಿಗಳು, ಭಾಗವಾಗಿದ್ದಾರೆ
ಇದೆ ರೀತಿಯಲ್ಲಿ ನಮ್ಮ ಪರಿಸರವನ್ನು ಮುಂದಿನ ಪೀಳಿಗೆಗೆ ಬೇಳಸಿಕೊಂಡು ಹೋಗುವ ಕರ್ತವ್ಯ ನಮ್ಮೆಲ್ಲರ ಜವಾಬ್ದಾರಿ, ನಮ್ಮ ಹೊಣೆ ಎಬಿವಿಪಿ ಕಾರ್ಯಕರ್ತರು ಈ ಒಂದು ಅಭಿಯಾನದಲ್ಲಿ ಭಾಗಿಯಾಗಿ ೩ ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟರೆ ಯಾಗಿ ಆಕ್ಸಿಜನ್ ಚಾಲೆಂಜ್ ಮೂಲಕ ೫ ಲಕ್ಷ ಸಸಿಗಳನ್ನು ಮತ್ತು ೫ ಲಕ್ಷ ಬೀಜದ ಉಂಡೆಗಳನ್ನು ನೆಡುವುದು ಎಬಿವಿಪಿ ಕಾರ್ಯಕರ್ತರಿಂದ ಆರಂಭಗೊಂಡ ಒಂದೊಳ್ಳೆ ಕಾರ್ಯವಾಗಿದೆ. ಇಂತಹ ಯೋಜನೆ, ಯೋಚನೆಗಳ ಮೂಲಕ ನಮ್ಮ ಪ್ರಕೃತಿಯನ್ನು ಉಳಿಸಿ ಬೆಳೆಸೋಣ ನಮ್ಮ ನಡೆ ಪ್ರಕೃತಿಯೆಡೆಗೆ.

ಬಸವರಾಜ ಲಗಳಿ
ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ.ವಿಜಯಪುರ