ಸಿಕ್ಕಿಹಾಕಿಕೊಳ್ಳತಾರಾ ಅಬಕಾರಿ ಸಚಿವ! ರಾಜ್ಯ ಸರ್ಕಾರಕ್ಕೆ ಕಪ್ಪು ಚುಕ್ಕೆ?ಅಬಕಾರಿ ಸಚಿವ ಕೆ. ಗೋಪಾಲಯ್ಯ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಎಸಿಬಿಗೆ ದೂರು ನೀಡಿದೆ.

ಇತ್ತೀಚೆಗೆ ಕೊಪ್ಪಳ ಅಬಕಾರಿ ಉಪ ಆಯುಕ್ತೆ ಸೆಲೆನಾ, ಮತ್ತು ಅಬಕಾರಿ ನಿರೀಕ್ಷಕ ಅಜಯ್ ಮಧ್ಯೆ ನಡೆದ ಫೋನ್ ಸಂಭಾಷಣೆ ವೈರಲ್ ಆಗಿತ್ತು. ಪ್ರತೀ ಜಿಲ್ಲೆಯಿಂದ 5 ಲಕ್ಷ ಹಣ ಸಂಗ್ರಹಿಸಿ ಸಚಿವರಿಗೆ ಕೊಡಬೇಕು. ಹಿರಿಯ ಅಧಿಕಾರಿಗಳು ಹೇಳಿದ್ದಾರೆ ಹಣ ಸಂಗ್ರಹಿಸಿ ಅಂತಾ ಸೆಲೆನಾ ಫೋನಿನಲ್ಲಿ ಮಾತನಾಡಿದ್ದರು.

ಆಡಿಯೋ ವೈರಲ್ ಆದ ನಂತರ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಮಂತ್ರಿಗಳು ಕೂಡಿ ಮಾಡುತ್ತಿರುವ ಭ್ರಷ್ಟಾಚಾರ ಇದಾಗಿದೆ. ಇಲಾಖೆಯಲ್ಲಿ ಅಕ್ರಮವಾಗಿ ಹಣ ಮಾಡುವ ಕೆಲಸ ಮಾಡಲಾಗುತ್ತಿದೆ. ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ದೂರು ನೀಡಲಾಗಿದೆ.