ನಮ್ಮ ಜನರ ನೋವುಗಳಿಗೆ ನಾವೇ ಸ್ಪಂದಿಸಬೇಕು ಅದೇ ಮಾನವೀಯತೆ:-ಪ್ರತಾಪರಾವ್, ಮಾದರಿಯಾದ ಸಾತಪೋತೆ ಫೌಂಡೇಶನ್ ಕಾರ್ಯಬೆಳಗಾವಿ:- ಮಾನವ ಸಂಘಜೀವಿ ಒಬ್ಬರ ನೋವಿಗೆ ಮತ್ತೊಬ್ಬರು ಮಿಡಿಯುವ ಮೂಲಕ ಮಾನವೀಯ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ನೊಂದವರ ಕಣ್ಣೀರೊರೆಸೋ ಕೆಲಸ ನಡೆಯುತ್ತಿರುವುದು ಶ್ಲಾಘನೀಯದ ಕೆಲಸಗಳು ನಡೆಯುತ್ತಿವೆ.

ಕೊರೋನಾ ಸಂಕಷ್ಟದ ಈ ಸಂದರ್ಭದಲ್ಲಿ ಇಡೀ ಮನುಕುಲವೇ ನಲುಗಿ ಹೋಗಿದೆ ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿದೆಯಾದರೂ ಇದರ ಹೊಡೆತ ಮಾತ್ರ ಬಿದ್ದಿದ್ದು ದಿನಗೂಲಿಯನ್ನೇ ನಂಬಿ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿರುವ ಕಾರ್ಮಿಕ ವರ್ಗ, ಬಡ ಹಾಗೂ ಮಧ್ಯಮ ವರ್ಗ ಎಂಬುದು ವಿಷಾದನೀಯ ಸಂಗತಿಯಾಗಿದೆ. ಈ ಕೋವಿಡ್ ಸಮಯದಲ್ಲಿ ನೊಂದವರಿಗೆ ನೆರವಾಗುವ ಕಾರ್ಯಗಳು ನಗರ ಹಾಗೂ ಪಟ್ಟಣಗಳಲ್ಲಿ ನಡೆಯುತ್ತಿದೆ ಆದರೆ ವಿಶೇಷವಾಗಿ ಗ್ರಾಮೀಣ ಭಾಗದ ಜನರ ಸಂಕಷ್ಟಕ್ಕೆ ಮಿಡಿಯುವ ಜನರು ಮಾತ್ರ ವಿರಳಾತಿವಿರಳ.

ಈ ದಿಶೆಯಲ್ಲಿ ಹೆಜ್ಜೆ ಇಟ್ಟು ಗ್ರಾಮೀಣ ಭಾಗದ ಜನರ ನೋವುಗಳಿಗೆ ಸ್ಪಂದಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.ಸಂಬರಗಿ ಗ್ರಾಮದ ಹಿರಿಯರಾಗಿ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ರೀತಿಯಲ್ಲಿ ಸೇವೆ ಸಲ್ಲಿಸಿ ದಿವಂಗತರಾದ ಗಂಗಾರಾಮ ಸಾತಪೋತೆ ಅವರ ಸವಿನೆನಪಿನಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುವ ಉದ್ದೇಶದಿಂದ ಹಾಗೂ ಜನಸಾಮಾನ್ಯರಿಗೆ ಹತ್ತಿರವಾಗಿ ಜನಸ್ನೇಹಿ ಸಮಾಜವನ್ನು ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆ ಯೊಂದಿಗೆ ಅಸ್ತಿತ್ವಕ್ಕೆ ಬಂದು ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಜೀ ಬೀ ಫೌಂಡೇಶನ್. ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಜೀ ಬೀ ಫೌಂಡೇಶನ್ ಈ ಮಹತ್ಕಾರ್ಯಕ್ಕೆ ಮುಂದಾಗಿ ನೊಂದವರಿಗೆ ತನ್ನ ಕೈಲಾದಷ್ಟು ಅಳಿಲು ಸೇವೆ ಸಲ್ಲಿಸುತ್ತಿದೆ. ಈ ನಿಟ್ಟಿನಲ್ಲಿ ಶನಿವಾರ ಈ ಫೌಂಡೇಶನ್ ವತಿಯಿಂದ ಗ್ರಾಮದ ಬಡಕುಟುಂಬಗಳಿಗೆ ದಿನಶಿ ಪದಾರ್ಥಗಳ ಕಿಟ್ ಹಂಚುವ ಕಾರ್ಯ ಗ್ರಾಮಸ್ಥರು ಹಾಗೂ ಗಣ್ಯರ ಸಮ್ಮುಖದಲ್ಲಿ ಪ್ರಾರಂಭಿಸಲಾಗಿದೆ.

ಇದನ್ನೂ ಓದಿ :  ರಾಜಕಾರಣದ ಗೊಂದಲಕ್ಕೆ ಈ ಇಬ್ಬರ ನಾಯಕರ ಡಬಲ್ ಗೇಮ್ ನೇರ ಕಾರಣ: ಕುಟುಕಿದ ಈಶ್ವರಪ್ಪ

ಈ ಕುರಿತು ಮಾಹಿತಿ ನೀಡಿದ ಫೌಂಡೇಶನ್ ನ ಸಂಸ್ಥಾಪಕರಾದ ಪ್ರತಾಪರಾವ ಸಾತಪೋತೆ ಕೆಲಸ ವಿಲ್ಲದೆ ಖಾಲಿ ಕೈಗಳಿಗೆ ನೆರವಾಗುವ ಉದ್ದೇಶದಿಂದ ಆಹಾರ ಕಿಟ್ ಗಳನ್ನು ನೀಡಲಾಗುತ್ತಿದೆ ನೊಂದವರ ಕಷ್ಟದಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ಸಂಬರಗಿ ಗ್ರಾಮದ 1000 ಕುಟುಂಬಗಳನ್ನು ಗುರಿಯಾಗಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಗ್ರಾಮೀಣ ಭಾಗದ ಜನರಿಗೆ ಯಾವುದೇ ಯೋಜನೆಗಳು ಸಮರ್ಪಕವಾಗಿ ದೊರೆಯುವುದು ಕಷ್ಟ ಈ ಕಷ್ಟದ ಸಂದರ್ಭದಲ್ಲಿ ಸುಮಾರು ಒಂದುವರೆ ಲಕ್ಷ ವೆಚ್ಚದಲ್ಲಿ ವಿವಿಧ ದಿನಸಿ ಪದಾರ್ಥಗಳನ್ನು ಆಹಾರ ಕಿಟ್ ನಲ್ಲಿ ನೀಡಲಾಗುತ್ತಿದೆ ಪ್ರಮುಖವಾಗಿ ಬಡಕುಟುಂಬಗಳಿಗೆ ಇದರ ಲಾಭವಾಗುತ್ತದೆ ಎಂದು ಹೇಳಿದರು.

ಸಕ್ಕರೆ ಅಡುಗೆ ಎಣ್ಣೆ ಯಂತಹ ಸುಮಾರು 8 ದಿನಶಿ ಹಾಗೂ ಆಹಾರ ಪದಾರ್ಥಗಳ ಕಿಟ್ ಇದಾಗಿದೆ ಇವುಗಳನ್ನು ಎರಡು ಮೂರು ದಿನಗಳಲ್ಲಿ ಮನೆಮನೆಗೆ ತೆರಳಿ ಕೋವಿಡ್ ಮಾರ್ಗಸೂಚಿಗಳನ್ವಯ ಹಂಚುವ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಸತೀಶ್ ನರೋಟೆ ಜೀ ಬಿ ಫೌಂಡೇಶನ್ ನ ಕಾರ್ಯ ಸಾಮಾಜಿಕ ಕಳಕಳಿಯ ಉದ್ದೇಶದಿಂದ ನಡೆಯುತ್ತಿರುವ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದು ಎಂದು ಸಂಸ್ಥಾಪಕ ಪ್ರತಾಪರಾವ ಸಾತಪೋತೆ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಸಾಮಾಜಿಕ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಸಂಸ್ಥಾಪಕ ಪ್ರತಾಪರಾವ ಸಾತಪೋತೆ ಹಾಗೂ ಜೀ ಬಿ ಸಾತಪೋತೆ ಫೌಂಡೇಶನ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿರುವುದು ಫೌಂಡೇಶನ್ ನ ಸಾಮಾಜಿಕ ಕಳಕಳಿಯನ್ನು ಎತ್ತಿ ತೋರಿಸುತ್ತದೆ.