ಉಸ್ತುವಾರಿ ಅರುಣಸಿಂಗ್ ವರದಿ ಮಾಹಿತಿ ಸುಳ್ಳು: ಸಿಟಿ ರವಿಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ವರದಿ ನೀಡಿದರು ಎಂಬುದು ಸುಳ್ಳು ಸುದ್ದಿಯಾಗಿದ್ದು, ಅರುಣಸಿಂಗ್ ಅವರನ್ನು ದೂರವಾಣಿ ಮೂಲಕ ಮಾತನಾಡಿಸಿದೆ. ಅವರು ಮೂರು ದಿನಗಳಿಂದ ದೆಹಲಿಯಲ್ಲಿ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಸಿ.ಟಿ.ರವಿ ತಿಳಿಸಿದರು.

ಈ ಸುಳ್ಳು ಸುದ್ದಿಯ ಹಿಂದೆ ಯಾರೋ ಷಡ್ಯಂತ್ರ ನಡೆಸುತ್ತಿರುವುದು ಗೊತ್ತಾಗುತ್ತಿದೆ . ಅಪಪ್ರಚಾರಮಾಡಬೇಕು, ವಿಚಾರವನ್ನು ಜೀವಂತವಾಗಿಡಬೇಕು ಎಂಬ ಕಾರಣಕ್ಕೆ ಈ ಕೆಲಸ ಮಾಡುತ್ತಿದ್ದಾರೆ. ಷಡ್ಯಂತ್ರ ಕಾರಣದಿಂದ ಸುಳ್ಳು ಸುದ್ದಿಗಳನ್ನು ಬಿಟ್ಟು ಚರ್ಚೆ ಹುಟ್ಟು ಹಾಕುತ್ತಿದ್ದಾರೆ ಎಂದರು. ಮುಖ್ಯಮಂತ್ರಿ ಬದಲಾವಣೆ ಎನ್ನುವುದು ಒಂದು ಸುಳ್ಳುಸುದ್ದಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಕೆಲವರು ಉದ್ದೇಶಪೂರಕ ಮತ್ತು ದುರುದ್ದೇಶ ಪೂರಕವಾಗಿಯೋ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಸುಳ್ಳು ಸುದ್ದಿ ಹಬ್ಬಿಸುವವರನ್ನು ಪತ್ತೆಹಚ್ಚುವುದು ಕಷ್ಟವೇನಲ್ಲ, ಎಷ್ಟು ದಿನ ಬಚ್ಚಿಟ್ಟು ಸುಳ್ಳು ಸುದ್ದಿ ಹಬ್ಬಿಸಲು ಸಾಧ್ಯ ಒಂದು ದಿನ ಪತ್ತೆಯಾಗುತ್ತದೆ.

ಇದೆಲ್ಲವನ್ನು ಪಕ್ಷ ಗಮನಿಸುತ್ತಾ ಇರುತ್ತದೆ, ಯಾವಾಗ ಏನು ಕ್ರಮ ಕೈಗೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತದೆ ಎಂದರು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೆಹಲಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂಬುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಪಕ್ಷ ಸಲಹೆ ನೀಡಬಹುದು. ಸಲಹೆ ನೀಡುವ ಸಂದರ್ಭಗಳಲ್ಲಿ ಸಲಹೆ ನೀಡುತ್ತೇವೆ ಎಂದರು.