ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ನೇರವಾಗಿ ಆಕ್ರೋಶ ವ್ಯಕ್ತಪಡಿಸಿದ ಅನಂತ ಸುಬ್ಬಾರಾವ್ ಅವರು ಹೇಳಿದ್ದೇನು?!ಬೆಂಗಳೂರು: ಸಾರಿಗೆ ನೌಕರರ ಮುಷ್ಕರಕ್ಕೆ ಕುಮ್ಮಕ್ಕು ನೀಡಿದ್ದು ಕೋಡಿಹಳ್ಳಿ ಚಂದ್ರಶೇಖರ್ ಎನ್ನುವ ಅಂಶ ಎದ್ದುಕಾಣುತ್ತಿದ್ದು, ಅವರ ಒಣಪ್ರತಿಷ್ಠೆಗೆ, ಮೊಂಡುತನಕ್ಕೆ ಸಾರಿಗೆ ನೌಕರರನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳತೊಡಗಿದೆ. ಎಐಟಿಯುಸಿ ನೇತಾರ ಅನಂತ ಸುಬ್ಬಾರಾವ್ ಅವರು ದಿಗ್ವಿಜಯ ನ್ಯೂಸ್ಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನೇರವಾಗಿ ಕೋಡಿಹಳ್ಳಿ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಮಾತಿನ ಸಾರ ಹೀಗಿದೆ- ಅನಂತ ಸುಬ್ಬಾರಾವ್ ಅವರದ್ದೇನು ಮೊನೊಪೊಲೀನಾ ಎಂದು ಪ್ರಶ್ನಿಸಿದ ಕೋಡಿಹಳ್ಳಿ ಚಂದ್ರಶೇಖರ್, ಪ್ರತಿಭಟನೆ ಮಾಡಲು ಹೊರಟ ನೌಕರರ ದಾರಿ ತಪ್ಪಿಸಿ ಅವರಿಂದ ದಿಢೀರ್ ಮುಷ್ಕರ ಮಾಡಿಸಿದ್ದಾರೆ. ಸಂಘಟನೆ ಕಟ್ಟಿ ಬೆಳೆಸೋದು ಸಾಮಾನ್ಯ ಸಂಗತಿಯಲ್ಲಿ. ಅನೇಕರ ಬಲಿದಾನ ಇದೆ ಈ ಸಂಘಟನೆಯ ಹಿಂದೆ. ಅವರು ಎಂದಾದರೂ ಕಾರ್ಮಿಕ ಸಂಘಟನೆಗಳನ್ನು ಮುನ್ನಡೆಸಿದ್ದಾರಾ? ಕಾರ್ಮಿಕ ಕಾನೂನುಗಳ ಬಗ್ಗೆ ಅವರಿಗೇನು ಗೊತ್ತು? ಅಗತ್ಯ ಸೇವೆಗಳ ನೌಕರಿಯಲ್ಲಿರುವವರು ಮುಷ್ಕರ ಮಾಡಬೇಕಾದರೆ 22 ದಿನ ಮುಂಚಿತವಾಗಿ ಸರ್ಕಾರಕ್ಕೆ ನೋಟಿಸ್ ನೀಡಬೇಕು.

ಇದೇ ರೀತಿ ಇತರೆ ಸೇವೆಗಳವರು 15 ದಿನ ಮುಂಚಿತವಾಗಿ ಸರ್ಕಾರಕ್ಕೆ ನೋಟಿಸ್ ನೀಡಬೇಕು. ಇದು ಯಾಕೆ ಅಂದರೆ, ಯಾರಿಗೂ ತೊಂದರೆಯಾಗದಂತೆ ನೌಕರರ ಬೇಡಿಕೆ ಆಲಿಸಿ ಮಾತುಕತೆ ನಡೆಸಿ ಬಿಕ್ಕಟ್ಟು ಇತ್ಯರ್ಥಗೊಳಿಸುವುದಕ್ಕೆ ಸರ್ಕಾರಕ್ಕೆ ನೀಡಲಾಗುತ್ತಿರುವ ಕಾಲಾವಕಾಶ ಇದು. ಇದನ್ನು ಈ ಮುಷ್ಕರದಲ್ಲಿ ಪಾಲಿಸಲಾಗಿಲ್ಲ. ಕೋಡಿಹಳ್ಳಿಯವರ ಹಿನ್ನೆಲೆ, ಅವರ ಗುರುಗಳ ಹಿನ್ನೆಲೆ ನೋಡಿ. ಅವರು ಎಲ್ಲರೂ ಖಾಸಗಿ ಪರ ಇದ್ದವರೇ ಹೊರತು, ಸಾರ್ವಜನಿಕ ಸಂಸ್ಥೆಗಳ ಪರ ಇದ್ದವರಲ್ಲ. ಖಾಸಗಿ ಲಾಬಿಯ ಪರ ಕೆಲಸ ಮಾಡುತ್ತಿರುವಂತೆ ಕಾಣುತ್ತದೆ. ಕೋಡಿಹಳ್ಳಿ ಇಂತಹ ಡೀಲ್ ಮಾಡುವ ಡೀಲರ್ ಕೆಲಸ ಬಿಟ್ಟು ಲೀಡರ್ ಆಗಿ ಕೆಲಸ ಮಾಡಲಿ. ಈ ಮುಷ್ಕರದ ಹಿಂದೆಯೂ ಅಂಥದ್ದೇನಾದರೂ ಅಜೆಂಡಾ ಇಟ್ಟುಕೊಂಡಿದ್ದರಾ ಎಂಬ ಸಂದೇಹವಿದೆ. ಅವರ ಒಣಪ್ರತಿಷ್ಠೆಗೆ ಮೊಂಡುತನಕ್ಕೆ ಇದೀಗ ಸಾರಿಗೆ ನೌಕರರು ಬಲಿಯಾಗಬೇಕಾಗಿದೆ. ನಿನ್ನೆಯೇ ಸರ್ಕಾರದ ಸುತ್ತೋಲೆ ಸೇರಿಸಿ ನಮ್ಮ ಸಂಘಟನೆಯ ಸದಸ್ಯರಿಗೆ ಇಂದು ಕೆಲಸ ಮಾಡುವಂತೆ ಸೂಚಿಸಲಾಗಿದೆ. ಅಕಸ್ಮಾತ್ ಅವರು ಅದನ್ನು ಧಿಕ್ಕರಿಸಿ ಕೋಡಿಹಳ್ಳಿ ಮಾತು ಕಟ್ಟಿಕೊಂಡು ಮುಷ್ಕರ ಮುಂದುವರಿಸಿದ್ರೆ ಸರ್ಕಾರ ಕೈಗೊಳ್ಳುವ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅನಂತ ಸುಬ್ಬಾರಾವ್ ತಿಳಿಸಿದ್ದಾರೆ.

ಇದನ್ನೂ ಓದಿ :  ಮುಂದಿನ ಮುಖ್ಯಮಂತ್ರಿ ಎಂದಾಗ ಕಡಕ್ ಟಾಂಗ್ ಕೊಟ್ಟ ಕಂದಾಯ ಸಚಿವ

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/