BREAKING NEWS: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದ ರಾಜ್ಯ ರಾಜಕೀಯಕ್ಕೆ ಹೊಸ ಬಾಂಬ್!ಬೆಂಗಳೂರು: ಕಾಂಗ್ರೆಸ್ ನ ಇಪ್ಪತ್ತು ಮಂದಿ ಶಾಸಕರು ರಾಜಿನಾಮೆ ಕೊಟ್ಟು ಬಿಜೆಪಿ ಸೇರಲು ತಯಾರಾಗಿದ್ದಾರೆ ಎಂದು ಹೇಳುತ್ತಿರುವ ಬಿಜೆಪಿ ಸಚಿವರೇ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ. ಅವರ ಮುಂದಿನ‌ ನಡೆ ಏನು ಎಂದು ಕಾಂಗ್ರೆಸ್ ನಾಯಕರನ್ನು ಕೇಳಿದರೆ ಹೇಳುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಹಾಕಿದರು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ‌ಮಾತನಾಡಿದ ಅವರು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು. ಹೇಳಿಕೆ ನೀಡಿದ ವ್ಯಕ್ತಿ ಯಾರೆಂದು ನನಗೆ ಗೋತ್ತಿಲ್ಲ. ಆದರೆ ನೀವು ಹೇಳುತ್ತಿರುವ ಹೆಸರಿನ ವ್ಯಕ್ತಿ ಕಾಂಗ್ರೆಸ್ ನ ಮಾಧ್ಯಮ ಘಟಕದ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಅವರ ಜೊತೆ ಸಂಪರ್ಕದಲ್ಲಿದ್ದಾರೆ. ಮುಂದೆ ಯಾವ ದಾರಿ‌ಹಿಡಿಯುತ್ತಾರೆ ಎಂದು ಉಗ್ರಪ್ಪ ಅವರನ್ನು ಮಾಧ್ಯಮದವರೇ ಕೇಳಿದರೆ ಹೇಳುತ್ತಾರೆ ಎಂದರು. ಬಿಜೆಪಿ ಆಂತರಿಕ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರ್ಯಾರು ಮಾತನಾಡಬಾರದು. ಶಾಸಕಾಂಗ ಪಕ್ಷದ ನಾಯಕರು ಅಥವಾ ಪಕ್ಷ ಅಧ್ಯಕ್ಷನಾದ ನಾನು ಮಾತ್ರ ಮಾತನಾಡುತ್ತೇವೆ ಎಂದು ಹೇಳಿದರು. ತಮ್ಮ ಸಹೋದರ ಸಂಸದ ಡಿ.ಕೆ.ಸುರೇಶ್ ನಿನ್ನೆ ಮಾತನಾಡಿದ್ದಾರೆ. ಅವರಿಗೂ ಸೂಚನೆ ನೀಡಿದ್ದೇನೆ. ಬಿಜೆಪಿ ಆಂತರಿಕ ಬೆಳವಣಿಗೆಯಲ್ಲಿ ನಾವು ಮೂಗು ತೂರಿಸುವುದಿಲ್ಲ. ನಮ್ಮ ಪಕ್ಷ ಸಂಘಟನೆಯ ಬಗ್ಗೆಯಷ್ಟೆ ನಾವು ಗಮನ ಹರಿಸುತ್ತೇವೆ. ಅವರ ಗೊಂದಲಗಳನ್ನು ಅವರೇ ಸರಿ ಪಡಿಸಿಕೊಳ್ಳಲಿ‌ ಎಂದು ಹೇಳಿದರು.

ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಒಂದು ವರ್ಷ ಕಳೆದಿದೆ. ಬಿಜೆಪಿ ಆಡಳಿತ ಗಮನಿಸಿದರೆ ನನ್ನ ನಲವತ್ತು ವರ್ಷದ ರಾಜಕಾರಣದಲ್ಲಿ, ಸ್ವತಂತ್ರ್ಯ ನಂತರ ಜನ ಸರ್ಕಾರದ ವಿರುದ್ದ‌ ಹೆಚ್ಚು ಪ್ರತಿಭಟನೆ ನಡೆಸಿದ್ದು ಈ ಅವಧಿಯಲ್ಲೇ. ಕಾನೂ‌ನು ತಿದ್ದುಪಡಿ ಮೂಲಕ ಜನರಲ್ಲಿ ಅಭದ್ರತೆ ನಿರ್ಮಿಸಲಾಯಿತು, ನಲವತ್ತು ವರ್ಷದಲ್ಲೆ ಅತೀ ಹೆಚ್ಚು ನಿರುದ್ಯೋಗ ದಾಖಲಾಗಿದೆ. ಹಿಂದಿಗಿಂತ 24 ಪಟ್ಟು ನಿರುದ್ಯೋಗ ಹೆಚ್ಚಾಗಿದೆ. ರಾಷ್ಷ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರು, ರೈತ ವರ್ಗದ ಜನರಿಗೆ ಸರ್ಕಾರ ನೆರವು ನೀಡಲಿಲ್ಲ. ಸಣ್ಣ, ಮಧ್ಯಮ ಹಂತದ ಉದ್ಯಮಕ್ಕೂ ಸಹಾಯ ಮಾಡಲಿಲ್ಲ. ದೇಶದ ಅಭಿವೃದ್ದಿಗೆ ಯಾವ ಯೋಜನೆಯೂ ಕೈಗೆತ್ತಿಕೊಳ್ಳಲಿಲ್ಲ. ಸ್ಮಾರ್ಟ್ ಸಿಟಿ, ಬುಲೇಟ್ ಟ್ರೈನ್ ಎಲ್ಲವೂ ಹುಸಿಯಾದವು.‌ ಸಂಸದರಿಗೆ ಹೆಚ್ಚುವರಿ ಹಣ ಕೊಡದೆ ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಿ ಎಂದರು.‌ ಅದು ಸಫಲವಾಗಲಿಲ್ಲ.

ವಲಸೆ ಕಾರ್ಮಿಕರನ್ನು ಪ್ರೀತಿಯಿಂದ ಕಳುಹಿಸಿಕೊಟ್ಟಿದ್ದರು ವಾಪಾಸ್ ಬರುತ್ತಿದ್ದರು. ಕಾರ್ಮಿಕರನ್ನು ಅಪಮಾನ ಮಾಡಿ ಕಳುಹಿಸಲಾಗಿದೆ. ಅವರು ವಾಪಾಸ್ ಬರಲ್ಲ. ಚಪ್ಪಾಳೆ ಹೊಡೆಸಿದ್ರೆ ಜನರ ಹೊಟ್ಟೆ ತುಂಬಲ್ಲ. ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ಪ್ಯಾಕೇಜ್ ಜನರಿಗೆ ತಲುಪಿಲ್ಲ ಎಂದು ಆರೋಪಿಸಿದರು. ಸಾಲ ವಸೂಲಾತಿ ನಿಂತಿಲ್ಲ, ಜನರಿಗೆ ಕಿರುಕುಳ‌ನಿಂತಿಲ್ಲ. ವಕೀಲರಿಗೆ ಹೋಗಿದ್ಯಾ, ಅಡುಗೆಯವರಿಗೆ ಹೋಗಿದ್ಯಾ, ಪ್ಯಾಕೇಜ್ ಹಣ ಯಾರಿಗೆ ಹೋಗಿದೆ ಹೇಳಿ. ಇನ್ನು‌ ಇಪ್ಪತ್ನಾಲ್ಕು ಗಂಟೆ ಕಾಲಾವಕಾಶ ತಗೋಳ್ಳಿ ಪ್ಯಾಕೇಜ್ ಯಾರಿಗೆ ತಲುಪಿದೆ ಹೇಳಿ. ಬಿಜೆಪಿಯವರಿಗೆ ಆಡಳಿತ ಗೋತ್ತಿಲ್ಲ. ಪ್ರಕೃತಿ ತಂದೊಡ್ಡಿದ ಸಮಸ್ಯೆಗಿಂತ ಸರ್ಕಾರ‌ ಸೃಷ್ಠಿಸಿದ ಅನಾವುತವೇ ಹೆಚ್ಚಾಗಿದೆ.‌ ಶಿಕ್ಷಣ ಕ್ಷೇತ್ರ ಕೂಡ ಕುಸಿದಿದೆ. ಐವತ್ತು ಅರವತ್ತು ವರ್ಷದಲ್ಲಾದ ಅಭಿವೃದ್ಧಿಯನ್ನು ಈಗ ಶೂನ್ಯಕ್ಕೆ ತರಲಾಗಿದೆ‌‌ ಎಂದು ಆರೋಪಿಸಿದರು. ಬಿಜೆಪಿಗೆ ಅಧಿಕಾರವಷ್ಟೆ ಮುಖ್ಯ, ಜನರಿಗೆ ನೆರವಾಗುವುದಲ್ಲ ಎಂದು ಆರೋಪಿಸಿದರು.

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938