ಬೇರೆಯಾದ ಜೋಡೆತ್ತುಗಳು! ; ಡಿಕೆಶಿಗೆ ಖಡಕ್ ಕ್ಕಾಗಿ ಟಾಂಗ್ ನೀಡಿದ ಕುಮಾರಸ್ವಾಮಿ.



ಕೋಲಾರ: ಅಂದು ದೇವೇಗೌಡರಿಗೆ ಕಾಲಿಗೆ ಬಿದ್ದು, ಪ್ರಧಾನಿ ಹುದ್ದೆ ನೀಡಿದರು. ಮೊನ್ನೆ ನಾನು ಬೇಡ ಅಂದ್ರೂ ನನಗೆ ಸಿಎಂ ಹುದ್ದೆ ನೀಡಿದರು. ನಾವೇನು ಸಿಎಂ ಹುದ್ದೆ ನೀಡಿ ಎಂದು ಅರ್ಜಿ ಹಾಕಿಕೊಂಡು ಹೋಗಿರಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೆ ಟಾಂಗ್ ನೀಡಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ದೆವೇಗೌಡರು ಪ್ರಧಾನಿ ಹುದ್ದೆಗಾಗಿ ಅರ್ಜಿ ಹಾಕಿ ಹೋಗಿದ್ರಾ? ಬೇಡ ಅಂದರೂ ಇವರೇ ಪ್ರಧಾನಿ ಹುದ್ದೆ ನೀಡಿದರು.

ಬಳಿಕ ಪ್ರಧಾನಿ ಹುದ್ದೆಯಿಂದ ದೇವೇಗೌಡರನ್ನು ಕೆಳಗಿಳಿಸಿದ್ದು ಯಾರು? ನಾನು ಬೇಡ ಬೇಡ ಎಂದರೂ ನನ್ನನ್ನು ಸಿಎಂ ಮಾಡಿದರು. ನಾನೇನು ಸಿಎಂ ಹುದ್ದೆಗಾಗಿ ಅರ್ಜಿ ಹಾಕಿ ಇವರ ಮನೆ ಬಾಗಿಲಿಗೆ ಹೋಗಿರಲಿಲ್ಲ ಎಂದು ಕಿಡಿಕಾರಿದರು. ನಾನಾಗಲಿ, ದೇವೇಗೌಡರಾಗಲಿ ಅಧಿಕಾರದಲ್ಲಿರುವವರನ್ನು ಅಥವಾ ಮುಖ್ಯಮಂತ್ರಿಗಳನ್ನು ಭೇಟಿಯಾಗಬೇಕು ಎಂದರೆ ನೇರವಾಗಿ ಹೋಗಿ ಭೇಟಿ ಮಾಡುತ್ತೇವೆ. ಇವರಂತೆ ಕದ್ದು ಮುಚ್ಚಿ ಮಧ್ಯರಾತ್ರಿಯಲ್ಲಿ ಹೋಗಿ ಭೇಟಿಯಾಗಲ್ಲ. ನಾನು ಬಿಜೆಪಿಯ ಜೊತೆ ಯಾವುದೇ ಒಪ್ಪಂದವನ್ನೂ ಮಾಡಿಕೊಂಡಿಲ್ಲ. ಕಮಿಟ್ ಆಗಿ ರಾಜಕೀಯ ಮಾಡುವ ಅನಿವಾರ್ಯತೆ ನನಗಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಗುಡುಗಿದ್ದಾರೆ.


ಜಾಹಿರಾತು: ನಿಮ್ಮ ಏನೇ ಸಮಸ್ಯೆ ಇದ್ದರೂ ಕೂಡಲೇ ಈ ಕೆಳಕಂಡ ಸಂಖ್ಯೆಗೆ ಕರೆ ಮಾಡಿ!

ಪಂಡಿತ್ ದಾಮೋದರ್ ಭಟ್
ದಕ್ಷಿಣ ಕರ್ನಾಟಕದ ಖ್ಯಾತ
ಜ್ಯೋತಿಷ್ಯರು ಮತ್ತು ಆಧ್ಯಾತ್ಮಿಕ ಚಿಂತಕರು
ನಿಮ್ಮ ಕುಟುಂಬದ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದಾದ
ಅಥವಾ ಅಲ್ಲದ, ವಿದ್ಯಾಭ್ಯಾಸ ವ್ಯವಹಾರದ ಕಷ್ಟ,
ಆರ್ಥಿಕ ಸಂಕಷ್ಟಕ್ಕೆ ಮೂಲಕಾರಣ ಮತ್ತು ಅದಕ್ಕೆ ಸೂಕ್ತ ಪರಿಹಾರ ಶತಸಿದ್ಧ!

ಈಗಲೇ ಕರೆಮಾಡಿ : 9008611444


ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/