ಶಾಕಿಂಗ್ ವೀಡಿಯೋ ನೋಡಿ ; ಪೊಲೀಸರು ಎದುರಲ್ಲೇ ಜೈಲಿನಿಂದ ಕೈದಿ ಪರಾರಿಯಾದ

ಪೊಲೀಸರ ಎದುರೇ ಜೈಲಿನಿಂದ ಕೈದಿ ಪರಾರಿಯಾದ ವೀಡಿಯೋವೊಂದು ಈಗ ಎಲ್ಲಡೆ ವೈರಲ್ ಆಗುತ್ತಿದೆ. ತುಮಕೂರನಲ್ಲಿ ಆಗಸ್ಟ್ 8 ರಂದು ಈ ಘಟನೆ ನಡೆದಿದ್ದು, ಖತರ್ನಾಕ್ ಸರಗಳ್ಳನೊಬ್ಬ ಕೋರ ಪೊಲೀಸ್ ಠಾಣೆಯ ಬಂದಿಖಾನೆಯಿಂದ ರಾತ್ರಿ ಪರಾರಿಯಾಗಿದ್ದು, ಘಟನೆ ಸಂಬಂಧ ಆರು ಮಂದಿ ಪೊಲೀಸ್ ಸಿಬ್ಬಂದಿಯನ್ನು ಎಸ್ಪಿ ಅವರು ಅಮಾನತು ಮಾಡಿದ್ದಾರೆ.

ಇದನ್ನೂ ಓದಿ ; ವೀಡಿಯೋ ನೋಡಿ ; ತನ್ನ ಕೊಂದು ತಿನ್ನಲು ಬಂದವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ ನಂದಿ!

ಇದನ್ನೂ ಓದಿ :  ವೀಡಿಯೋ ನೋಡಿ ; ಹಿಂದೂ ಸಂಘಟನೆ ಪ್ರತಿಭಟನೆ ವೇಳೆ ರಾಷ್ಟ್ರಗೀತೆ ಹೇಳಿದ ಮಹಿಳಾ ಪೊಲೀಸ್ ಅಧಿಕಾರಿ

ಮಧುಗಿರಿ ತಾಲ್ಲೂಕು ಮಿಡಿಗೇಶಿ ಮೂಲದ ರಂಗಪ್ಪ ಅಲಿಯಾಸ್ ಪುನೀತ ಎಂಬಾತನೇ ಜೈಲಿನಿಂದ ಪರಾರಿಯಾಗಿರುವ ಆರೋಪಿ. ಈತ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯ ಅಂತರಸನಹಳ್ಳಿಯಲ್ಲಿ ವಾಸವಾಗಿದ್ದು, ಸರಗಳ್ಳತನ, ದರೋಡೆ ಪ್ರಕರಣ ದಾಖಲಾಗಿವೆ.ಕುಖ್ಯಾತ ಸರಗಳ್ಳನಾದ ರಂಗಪ್ಪನನ್ನು ಕೋರಾ ಠಾಣೆ ಪೊಲೀಸರು ಪತ್ತೆಹಚ್ಚಿ ಠಾಣೆಗೆ ಕರೆತಂದು ಕಳೆದೆರಡು ದಿನಗಳಿಂದ ತೀವ್ರ ವಿಚಾರಣೆಗೊಳಪಡಿಸಿದ್ದರು. ವೀಡಿಯೋ ಒಮ್ಮೆ ನೋಡಿ!