ಶ್ರೀರಾಮನ ಕುರಿತು ಅವಹೇಳನಕಾರಿ ಪೋಸ್ಟ್ ; ರಾತ್ರೋರಾತ್ರಿ ಠಾಣೆ ಮುಂದೆ ಸೇರಿದ ನೂರಾರು ಹಿಂದೂಗಳು!ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ SDPI ಗೆ ಸೇರಿದ ಮುಸ್ಲಿಂ ಗಲಭೆಕೋರರು ನಡೆಸಿದ ವಿಧ್ವಂಸಕ ಕೃತ್ಯ ಹಸಿಯಾಗಿರುವಾಗಲೇ ಮತ್ತೋರ್ವ ಮುಸ್ಲಿಂ ಯುವಕ ಅಯೋಧ್ಯಾ ಪ್ರಭು ಶ್ರೀರಾಮನ ಕುರಿತು ಅವಹೇಳನಾಕಾರಿ ಪೋಸ್ಟ್ ಹಾಕುವ ಮೂಲಕ ಸಾಮಾಜದಲ್ಲಿ ಶಾಂತಿ ಕದಡಿ ಕೋಮುಗಲಭೆ ಸೃಷ್ಟಿಸಲು ಪ್ರಯತ್ನಿಸಿದ್ದಾನೆ.

ರಾಯಚೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದಿದ್ದು, ಫೇಸ್ಬುಕ್ ಪೋಸ್ಟ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ನೂರಾರು ಮಂದಿ ಗ್ರಾಮಸ್ಥರು ಪೊಲೀಸ್ ಠಾಣೆಯ ಬಳಿ ಜಮಾಯಿಸಿದ್ದಾರೆ. ದೇವದುರ್ಗ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಬಳಿಕ ಆರೋಪಿಯ ಬಂಧನವಾಗದಿದ್ದ ಆಹೋರಾತ್ರಿ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟ ಬಳಿಕ ಅರೋಪಿ ಜಹೀರ್ ಎಂಬ ಮುಸ್ಲಿಂ ಯುವಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಿನಲ್ಲಿ ದಿನೇ ದಿನೇ ಇಂತಹ ಪೋಸ್ಟ್ ಗಳ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸೈಬರ್ ಕ್ರೈಂ ಪೊಲೀಸರು ಸ್ವಲ್ಪಿತ್ತ ಗಮನಹರಿಸಬೇಕಿದೆ. ವೀಡಿಯೋ ನೋಡಿ. (ವೀಡಿಯೋ ಕೃಪೆ : ಒನ್ ಇಂಡಿಯಾ)