ಹೆಚ್ ವಿಶ್ವನಾಥ್ ಅವರದ್ದು ದ್ರಾಕ್ಷಿ ಹುಳಿ ಎನ್ನುವ ನರಿ ಜಾಯಮಾನ?



ಮಂಡ್ಯ: ನರಿಗೆ ದ್ರಾಕ್ಷಿ ಎಟುಕದೇ ಇರುವಾಗ ದ್ರಾಕ್ಷಿ ಹುಳಿ ಎನ್ನುತ್ತದೆ . ಆ ಜಾಯಮಾನಕ್ಕೆ ವಿಶ್ವನಾಥ್ ಸೇರಿದ್ದಾರೆ ಎನ್ನುವ ಮೂಲಕ ಮಾಜಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಜಿ ಸಚಿವ ವಿಶ್ವನಾಥ್‌ಗೆ ಟಾಂಗ್ ನೀಡಿದ್ದಾರೆ . ಸಿಎಂ ಮಂಡ್ಯ ಜಿಲ್ಲೆಯ ಕೆಆರ್‌ಪೇಟೆಯಲ್ಲಿ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಕೊರೋನಾ ವಾರಿಯಸ್‌ರ್ಗೆ ಫುಡ್ಕಿಟ್ ವಿತರಣೆ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್.ವಿಶ್ವನಾಥ್ ವಿರುದ್ಧ ಹರಿಹಾಯ್ದರು.

ವಿಶ್ವನಾಥ್ ಯಾವ ಪಕ್ಷದಲ್ಲೂ ಸರಿಯಾಗಿ ಇರೋಕೆ ಆಗಲ್ಲ. ಅವರಿಗೆ ಬೇಕಿರೋದು ಅಧಿಕಾರ ಹಾಗೂ ದುಡ್ಡು. ಅವರಿಗೆ ಅಧಿಕಾರ, ದುಡ್ಡು ಸಿಗದೇ ಇರುವಾಗ ಎಲ್ಲರನ್ನೂ ಬೈಕೊಂಡು ಓಡಾಡುವ ಬುದ್ಧಿ ಅವರದ್ದು. ನರಿಗೆ ದ್ರಾಕ್ಷಿ ಎಟಕದೇ ಇರುವಾಗ ಹುಳಿ ಎನ್ನುತ್ತದೆ ಅಲ್ವಾ, ಜಾಯಮಾನಕ್ಕೆ ವಿಶ್ವನಾಥ್‌ ಸೇರಿದ್ದಾರೆ.

ಇದೇ ವೇಳೆ ಜೆಡಿಎಸ್‌ನಲ್ಲಿ ಕುಟುಂಬ ರಾಜಕೀಯ ಎನ್ನುವ ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್‌ಡಿಕೆ, ವಿಶ್ವನಾಥ್‌ಗೆ ಜೆಡಿಎಸ್ ಅಭ್ಯರ್ಥಿ ಆಗುವ ಮುನ್ನ ಕುಟುಂಬ ರಾಜಕೀಯ ಇದೆ ಎಂದು ಗೊತ್ತಿರಲಿಲ್ವಾ, ಇಡೀ ಜೆಡಿಎಸ್ ಪಕ್ಷವೇ ದೇವೇಗೌಡರ ಕುಟುಂಬ. ಇದು ನಾವು ಅಂದುಕೊಂಡಿರುವ ಕುಟುಂಬ, ವಿಶ್ವನಾಥ್ ಅಂದುಕೊಂಡಿರುವ ಕುಟುಂಬವೇ ಬೇರೆ . ವಿಶ್ವನಾಥ್ ಮಗ ಜಿ.ಪಂ. ಸದಸ್ಯ ಅಲ್ವಾ, ವಿಶ್ವನಾಥ್ ಮಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಲ್ವಾ, ಅದು ಕುಟಂಬ ರಾಜಕೀಯ ಅಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.