ಅಪಘಾತ : ಮುಸ್ಲಿಂ ಕುಟುಂಬದ ಸಹಾಯಕ್ಕೆ ಬಂದ ಬಜರಂಗದಳ, ವೀಡಿಯೋ ನೋಡಿ!ರಾಜ್ಯದಲ್ಲಿ ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ಎಸ್ ಡಿ ಪಿ ಐ ಗೆ ಸೇರಿದ ಮುಸ್ಲಿಂ ಗಲಭೆಕೋರರು ದಾಳಿ ನಡೆಸಿದ್ದ ಬೆನ್ನಲ್ಲೇ ರಾಜ್ಯದಲ್ಲಿ ಮಾನವೀಯತೆ ಜೀವಂತವಾಗಿದೆ ಎಂದು ನಿಟ್ಟುಸಿರು ಬಿಡುವಂತ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಮಾಗುಂಡಿಯಲ್ಲಿ ನಡೆದಿದೆ.ಜೆಲ್ಲೆಯ ಮಾಗುಂಡಿಯ ಸಲಾಂ ಎಂಬ ಮುಸ್ಲಿಂ ವ್ಯಕ್ತಿಯೋರ್ವರ ಮನೆಯ ನಾಲ್ವರು ಸದಸ್ಯರಿದ್ದ ಕಾರು ನಿಯಂತ್ರಣ ತಪ್ಪಿ ಸುಬ್ಬೇಗೌಡ ಅವರ ಮನೆಯ ಅಂಗಳಕ್ಕೆ ಬಂದು ಮಗುಚಿ ಬಿದ್ದಿದೆ.

ತಕ್ಷಣವೇ ಅಲ್ಲೇ ಸ್ಥಳೀಯ ಬಜರಂಗದಳ ಯುವಕರು ಸಹಾಯಕ್ಕೆ ಬಂದಿದ್ದು, ಜಿಲ್ಲಾ ಬಜರಂಗದಳ ಸಂಚಾಲಕ ಶಶಾಂಕ್ ಹೇರೂರು ಗಾಯಾಳುಗಳನ್ನು ಆಸ್ಪತ್ರೆ ಸೇರಿಸಿದ್ದಾರೆ. ಬಜರಂಗದಳ ಕಾರ್ಯಕರ್ತರ ಜೊತೆ ಹಾವಳಿ ಟೀಂ ಕೂಡ ಸಹಾಯಕ್ಕೆ ನಿಂತಿದೆ. ಸಂತೋಷ್ ಹಾದಿಹೊಣಿ, ಸಂತೋಷ್ ಅತ್ತಿಗೆರೆ, ಸಮರ್ಥ್ ಮಾಳಿಗನಾಡು, ಮದನ್, ಜೈದೀಪ್, ಮೋಹನ್, ಸಂದೇಶ್, ಸುಬ್ಬೇಗೌಡ, ಅಪ್ಪಣ್ಣಿ ನವೀನ್ ಮುಂತಾದವರು ಈ ಹಾವಳಿ ಟೀಂ ನಲ್ಲಿದ್ದಾರೆ.

ರಾಜ್ಯದಲ್ಲಿ ಎಷ್ಟೇ ಮುಸ್ಲಿಂ ಗಲಭೆಕೋರರು ಹಿಂದೂಗಳ ಮನೆ ಮೇಲೆ ದಾಳಿ ಮಾಡಿದರೂ, ದೇವಸ್ಥಾನ ಧ್ವಂಸಗೊಳಿಸಿದರೂ ಬಜರಂಗದಳ ಹಾಗೂ ಸಂಘಪರಿವಾರದ ಕಾರ್ಯಕರ್ತರು ಮಾತ್ರ ಮಾನವೀಯತೆಗೆ ಮೊದಲು ಆದ್ಯತೆ ನೀಡುತ್ತಾರೆ ಏಕೆಂದರೆ ನಮ್ಮ ಧರ್ಮ ನಮಗೆ ಶಾಂತಿ ಮಾನವೀಯ ಮೌಲ್ಯಗಳನ್ನು ಕಲಿಸಿಕೊಟ್ಟಿದೆ ಎಂದು ಕಾರ್ಯಕರ್ತರೊಬ್ಬರು ಹೇಳಿದ್ದಾರೆ. ವೀಡಿಯೋ ನೋಡಿ