ಕ್ಷಮೆ ಕೇಳ್ತಾರಾ ಜಮೀರ್ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಬಗ್ಗೆ ಹಗುರವಾಗಿ ಮಾತನಾಡಿದರೆ ಹೋರಾಟ ನಡೆಸಬೇಕಾಗುತ್ತದೆ ಹುಷಾರ್ ಎಂದು ಜಮೀರ್ ಅಹ್ಮದ್‌ಗೆ ಎಚ್ಚರಿಕೆ ನೀಡಿರುವ ಜೆಡಿಎಸ್ ಮುಖಂಡ ಟಿ.ಎ. ಶರವಣ, ಕೇವಲವಾಗಿ ಮಾತನಾಡಿರುವುದಕ್ಕೆ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಜಮೀರ್ ನಮ್ಮ ಪಕ್ಷದ ನಾಯಕರ ಬಗ್ಗೆ ಮಾತನಾಡಿರುವುದು ಪಕ್ಷದ ಕಾರ್ಯಕರ್ತರಿಗೆ ಬಹಳ ಬೇಸರ ಮೂಡಿಸಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡಿದರೆ ಪ್ರಚಾರ ಸಿಗಬಹುದು ಎಂದುಕೊಂಡಿದ್ದಾರೆ. ಆದರೆ ಗೌಡರು ಸೀಮೆಎಣ್ಣೆ ಕ್ಯಾನ್ ಹಿಡಿದು ದರಿದ್ರ ನಾರಾಯಣ ಎಂಬ ಹೆಸರಿನಲ್ಲಿ ಇಡೀ ಕ್ಷೇತ್ರ ಓಡಾಡಿ ತನು, ಮನ, ಧನ ಎಲ್ಲವನ್ನೂ ಕೊಟ್ಟು ಚಾಮರಾಜಪೇಟೆಯ ಗಲ್ಲಿ ಗಲ್ಲಿ ಗಳಲ್ಲಿ ಓಡಾಡಿ ಜಮೀರ್‌ರನ್ನು ಗೆಲ್ಲಿಸಿಕೊಂಡರು. ಅದೆಲ್ಲ ಮರೆತು ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 2 ಬಾರಿ ಮುಖ್ಯಮಂತ್ರಿ ಆಗಿರುವ ಕುಮಾರಸ್ವಾಮಿ ಅವರ ಬಗ್ಗೆ ಯಾವ ಕಾರಣಕ್ಕಾಗಿ ಹಗುರವಾಗಿ ಮಾತನಾಡುತ್ತಿದ್ದಾರೆ.

ಒಂದು ಸಮುದಾಯವನ್ನು ಜಮೀರ್ ಟಾರ್ಗೆಟ್ ಮಾಡುತ್ತಿದ್ದಾರೆ. ಜೆಡಿಎಸ್‌ನಲ್ಲಿ ಇದ್ದಾಗ ಅಧಿಕಾರ ಅನುಭವಿಸಿ, ಈಗ ಅವರ ವಿರುದ್ಧವೇ ಮಾತ ನಾಡುತ್ತಿದ್ದಾರೆ. ಮೊದಲು ಸಮುದಾಯಗಳನ್ನು ಎತ್ತಿಕಟ್ಟುವುದನ್ನು ನಿಲ್ಲಿಸಿ ನಿಮ್ಮ ಪಕ್ಷದ ಬಗ್ಗೆ ನೋಡಿಕೊಳ್ಳಿ ಎಂದು ತಿರುಗೇಟು ನೀಡಿದರು.