ರಾಜ್ಯದಲ್ಲಿ ಮತ್ತೆ ಕಾಣಿಸಿಕೊಳ್ಳಲಿದೇಯಾ ಆಕ್ಸಿಜನ್ ಕೊರತೆ!ಈಗಾಗಲೇ ಉತ್ಪಾದನೆ ದಿಢೀರ್ 700 ಟನ್‌ನಿಂದ 500 ಟನ್‌ಗೆ ಇಳಿಕೆಯಾಗಿದೆ ಹಾಗೂ ಇನ್ನೂಂದ ಸಂಕಷ್ಟವೆಂದರೆ 7 ರಾಜ್ಯಗಳಿಂದ ಆಕ್ಸಿಜನ್ ಪೂರೈಕೆ ಸ್ಥಗಿತವಾಗಿದ್ದು ಮುಂಬರುವ ದಿನಗಳಲ್ಲಿ :ತಜ್ಞರ ಆತಂಕ

ಬೆಂಗಳೂರು ರಾಜ್ಯದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯ ಮೆಡಿಕಲ್ ಆಕ್ಸಿಜನ್ ಉತ್ಪಾದಿಸಿ ಪೂರೈಸುತ್ತಿರುವ ಕೆಲ ಕಂಪನಿಗಳು ಕಳೆದ ಮೂರು ದಿನಗಳಿಂದ ದಿಢೀರ್ ಉತ್ಪಾದನೆ ಕಡಿಮೆ ಮಾಡಿದ್ದು, ಮತ್ತೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆಯ ಆತಂಕಹುಟ್ಟುಹಾಕಿದೆ. ರಾಜ್ಯದಲ್ಲಿ ಕೊರೋನಾ ಪ್ರಕರಣದಲ್ಲಿ ಕುಸಿತವಾಗಿದ್ದರೂ ಐಸಿಯು ಹಾಗೂ ಆಕ್ಸಿಜನ್ ಅವಲಂಬಿತ ಸೋಂಕಿತರ ಪ್ರಮಾಣ ಕಡಿಮೆಯಾಗಿಲ್ಲ. ಹೀಗಾಗಿ ಆಕ್ಸಿಜನ್‌ನ ಬೇಡಿಕೆ ಎಂದಿನಂತೆ ಇದೆ. ಆದರೆ ಆಕ್ಸಿಜನ್ ಪೂರೈಕೆ ಕಡಿಮೆಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಕೆಲ ದಿನಗಳಲ್ಲೇ ಕರ್ನಾಟಕ ಮತ್ತೆ ಆಕ್ಸಿಜನ್ ಕೊರತೆ ಸುಳಿಗೆ ಸಿಲುಕಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಈಗೇಕೆ ಆಕ್ಸಿಜನ್ ಸಮಸ್ಯೆ ?
*ರಾಜ್ಯದಲ್ಲಿ ಸೋಂಕು ಇಳಿದರೂ ಆಕ್ಸಿಜನ್ ಅವಲಂಬಿತರ ಪ್ರಮಾಣ ಇಳಿಯುತ್ತಿಲ್ಲ.
*3 ದಿನಗಳಿಂದ ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ ದಿಢೀರ್ ಇಳಿಕೆಯಾಗಿದೆ.
*ಹೊರ ರಾಜ್ಯದ 7 ಕಂಪನಿಗಳಿಂದ ಆಕ್ಸಿಜನ್ ಪೂರೈಕೆ ಸ್ಥಗಿತವಾಗಿದೆ.
*ಸದ್ಯ ರಾಜ್ಯದಲ್ಲಿರುವ 250 ಟನ್ ಬಫರ್ ಸ್ಟಾಕ್ ಕೆಲ ದಿನಗಳಲ್ಲಿ ಮುಗಿಯುವ ಆತಂಕವು ಕಾಡುತ್ತಿದೆ.

250 ಮೆ.ಟನ್ ಬಫರ್ ಸ್ಟಾಕ್: ಸದ್ಯ ರಾಜ್ಯದಲ್ಲಿ ಸುಮಾರು 250 ಮೆ.ಟನ್‌ನಷ್ಟು ಆಕ್ಸಿಜನ್ ಬಫರ್ ಸ್ಟಾಕ್ ಇದೆ. ಈ ಮಧ್ಯೆ, ಜೂ.1 ರಂದು ಹೊರ ರಾಜ್ಯದ ಎರಡು ಕಂಪನಿಗಳು ಮಾತ್ರ ತಲಾ 120 ಮೆ.ಟನ್ ಆಕ್ಸಿಜನ್ ಸರಬರಾಜು ಮಾಡಿವೆ. ಇದರ ಜೊತೆಗೆ ಹೊರ ರಾಜ್ಯಗಳಿಂದ ರೈಲಿನಲ್ಲಿ ಬರುತ್ತಿರುವ ಆಕ್ಸಿಜನ್ ಬಳಸಿಕೊಂಡು ಸದ್ಯದ ಪರಿಸ್ಥಿತಿ ನಿರ್ವಹಿಸಲಾಗುತ್ತಿದೆ . ಸದ್ಯ ಉತ್ಪಾದನೆ ಕಡಿಮೆ ಮಾಡಿರುವ ರಾಜ್ಯದ ಕಂಪನಿಗಳು ಕೂಡಲೇ ಉತ್ಪಾದನೆ ಹೆಚ್ಚಿಸದಿದ್ದರೆ ಬಫರ್ ಸ್ಟಾಕ್ ಕೆಲವೇ ದಿನಗಳಲ್ಲೇ ಖಾಲಿಯಾಗಲಿದೆ. ಇದರಿಂದ ಮತ್ತೆ ಆಕ್ಸಿಜನ್ ಸಮಸ್ಯೆ ಉದ್ಭವಿಸಲಿದೆ.

ಇದನ್ನೂ ಓದಿ :  ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ-ಎಸ್‍ಐಟಿಗೆ ಮುಖ್ಯಸ್ಥರೇ ಇಲ್ವಾ?