ನನ್ನ ಆಯುಷ್ಯವನ್ನು ಬೇರೆಯವರಿಗೆ ಕೊಡಿ! ವಯಸ್ಸಾಗಿದೆ ಲಸಿಕೆ ಬೇಡ ಎಂದ ಕಾಂಗ್ರೆಸ್ ಮುಖಂಡ!ನವದೆಹಲಿ: ನನಗೆ 70 ವರ್ಷ ತುಂಬಿದೆ. ನನ್ನ ಬದಲಿಗೆ ಬಾಳಿಬದುಕುವ ಯುವಕರಿಗೆ ಲಸಿಕೆ ಕೊಡಿ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಇಂದು ದೇಶಾದ್ಯಂತ ಹಿರಿಯ ನಾಗರಿಕರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಖರ್ಗೆ, ನನಗೆ ಈಗಾಗಲೇ 70 ವರ್ಷ ಮೀರಿದೆ. ಅಬ್ಬಾಬ್ಬಾ ಎಂದರೆ ನಾನು ಇನೊಂದು 5-10 ವರ್ಷ ಬದುಕಿರಬಹುದು. ಹಾಗಾಗಿ ನನ್ನ ಬದಲಿಗೆ ಹೆಚ್ಚಿನ ಆಯುಷ್ಯವನ್ನು ಹೊಂದಿರುವ ಯುವಕರಿಗೆ ಲಸಿಕೆ ನೀಡಿ ಎಂದು ಪ್ರತಿಕ್ರಿಯಿಸಿದ್ದಾರೆ.

ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಲಸಿಕೆಯನ್ನು ಬೆಳಗ್ಗೆಯಿಂದ ದೇಶಾದ್ಯಂತ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ಬಿಹಾರದ ಸಿಎಂ ನಿತೀಶ್ ಕುಮಾರ್, ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಸೇರಿದಂತೆ ಹಲವಾರು ಗಣ್ಯಾತಿಗಣ್ಯರು ಆಸ್ಪತ್ರೆಗಳಿಗೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಂಡಿದ್ದಾರೆ.