ಜಯಚಂದ್ರ ಆಯ್ತು, ಇದೀಗ ಕುಮಾರಸ್ವಾಮಿ ಸರದಿ ; ಫಲಿತಾಂಶಕ್ಕಿಂತ ಮೊದಲೇ ಸೋಲನೊಪ್ಪಿಕೊಂಡ ಪ್ರತಿಪಕ್ಷಗಳು! ಕಾರಣ ಇಲ್ಲಿದೆ.ಬೆಂಗಳೂರು: ತ್ರಿಕೋಣ ಸ್ಪರ್ಧೆಯ ಮೂಲಕ ಜಿದ್ದಾಜಿದ್ದಿನ ಕಣವಾಗಿ ಏರ್ಪಟ್ಟಿದ್ದ ರಾಜರಾಜೇಶ್ವರಿ ನಗರ ಮತ್ತು ಶಿರಾ ಅಸೆಂಬ್ಲಿ ಉಪಚುನಾವಣೆಯ ಫಲಿತಾಂಶ, ಮಂಗಳವಾರದಂದು ಹೊರಬೀಳಲಿದೆ. ಎರಡೂ ಕ್ಷೇತ್ರದಲ್ಲಿ ನಮದೇ ಗೆಲುವು ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಹೇಳುತ್ತಿದೆ. ಬಿಜೆಪಿಯಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಗೆಲುವಿನ ಅಂತರ ಎಷ್ಟು ಎನ್ನುವುದು ಮಾತ್ರ ಗೊತ್ತಾಗಬೇಕಿದೆ ಎನ್ನುವ ಖಚಿತ ವಿಶ್ವಾಸದ ಮಾತನ್ನಾಡುತ್ತಿದೆ. ಶಿರಾದಲ್ಲಿ ಇಪ್ಪತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದೇವೆ ಎಂದು ಉಸ್ತುವಾರಿಯಲ್ಲಿ ಒಬ್ಬರಾಗಿರುವ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಎರಡೂ ಕ್ಷೇತ್ರದಲ್ಲಿ ಮತದಾರ ಕಾಂಗ್ರೆಸ್ಸಿಗೆ ಆಶೀರ್ವದಿಸಲಿದ್ದಾನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಯನ್ನು ನೀಡಿದ್ದಾರೆ. ಇವೆಲ್ಲದರ ನಡುವೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, “ಶಿರಾದಲ್ಲಿ ಜೆಡಿಎಸ್ ಗೆಲ್ಲಲಿದ್ದೇವೆ. ರಾಜರಾಜೇಶ್ವರಿ ನಗರದಲ್ಲಿ ಗೆಲುವಿನ ಸನಿಹಕ್ಕೆ ಬರಲಿದ್ದೇವೆ” ಎಂದು ಹೇಳುವ ಮೂಲಕ ಒಂದು ಕ್ಷೇತ್ರದಲ್ಲಿ ಫಲಿತಾಂಶಕ್ಕೆ ಮುನ್ನವೇ ಸೋಲನ್ನು ಒಪ್ಪಿಕೊಂಡಿದ್ದಾರೆ. ಶಿರಾದಲ್ಲಿ ಶೇ. 82.31 ಮತ್ತು ಆರ್.ಆರ್.ನಗರದಲ್ಲಿ ಶೇ.45.24 ಮತದಾನ ನವೆಂಬರ್ ಮೂರರಂದು ನಡೆದ ಉಪಚುನಾವಣೆಯಲ್ಲಿ ಶಿರಾದಲ್ಲಿ ಶೇ. 82.31 ಮತ್ತು ಆರ್.ಆರ್.ನಗರದಲ್ಲಿ ಶೇ.45.24 ಮತದಾನವಾಗಿದೆ. ಈ ಪೈಕಿ ಶಿರಾದಲ್ಲಿ ತ್ರಿಕೋಣ ಸ್ಪರ್ಧೆ ಮತ್ತು ಆರ್.ಆರ್.ನಗರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಎಂದು ಹೇಳಲಾಗುತ್ತಿದೆ.

ನವೆಂಬರ್ ಹತ್ತರ ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ. ಅವರೇನೇ ಪ್ರಚಾರ ಮಾಡಲಿ, ಶಿರಾದಲ್ಲಿ ಗೆಲ್ಲುವುದು ಜೆಡಿಎಸ್ “ಶಿರಾ ಚುನಾವಣೆಯಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಾಗಿದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರೇನೇ ಪ್ರಚಾರ ಮಾಡಲಿ, ಶಿರಾದಲ್ಲಿ ಗೆಲ್ಲುವುದು ಜೆಡಿಎಸ್. ನಮ್ಮ ಪಕ್ಷ ಮೂರನೇ ಸ್ಥಾನಕ್ಕೆ ಹೋಗುತ್ತದೆ ಎನ್ನುವ ಬಿಜೆಪಿಯವರ ಮಾತಿಗೆ ಮತದಾರ ಉತ್ತರಿಸಲಿದ್ದಾನೆ”ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ಸಿನವರು ನೀರಿನಂತೆ ಚುನಾವಣೆಗೆ ಹಣವನ್ನು ಖರ್ಚು ಮಾಡಿದ್ದಾರೆ ರಾಜರಾಜೇಶ್ವರಿ ನಗರದಲ್ಲಿ ನಾವು ಗೆಲುವಿನ ಸನಿಹಕ್ಕೆ ಬರಲಿದ್ದೇವೆ. ಬಿಜೆಪಿ ಮತ್ತು ಕಾಂಗ್ರೆಸ್ಸಿನವರು ನೀರಿನಂತೆ ಚುನಾವಣೆಗೆ ಹಣವನ್ನು ಖರ್ಚು ಮಾಡಿದ್ದಾರೆ. ನಮಗೆ ಎಲ್ಲಿಂದ ಬರಬೇಕು ಅಷ್ಟು ದುಡ್ಡು”ಎಂದು ಕುಮಾರಸ್ವಾಮಿ ಹೇಳುವ ಮೂಲಕ, ರಾಜರಾಜೇಶ್ವರಿ ನಗರದಲ್ಲಿ ಸೋಲು ಖಚಿತ ಎನ್ನುವ ಮಾತನ್ನಾಡಿದ್ದಾರೆ.

ಓಂ ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಪೀಠಂ. ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 21 ಗಂಟೆಯಲ್ಲಿ ಶಾಶ್ವತ ಪರಿಹಾರ. ಖ್ಯಾತ ಜ್ಯೋತಿಷಿ, ಪಂಡಿತ್ ಶ್ರೀ ಶ್ರೀನಿವಾಸಮೂರ್ತಿ. ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ, ಆಸ್ತಿ ವಿಚಾರ, ಹಣಕಾಸಿನ ಸಮಸ್ಯೆ, ಸತಿಪತಿ ಕಲಹ, ಅತ್ತೆ-ಸೊಸೆ ಕಲಹ, ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9108678938