ಲಿಂಗಾಯತ ಸಿಎಂ ಸಮರ! ರಾಜ್ಯದಲ್ಲಿ ಲಿಂಗಾಯತ ಪರಾಯ ನಾಯಕರು ಪಕ್ಷ ಬದಲಾವಣೆ?ರಾಜ್ಯದಲ್ಲಿ ಲಿಂಗಾಯತ ಪರಾಯ ನಾಯಕರು ಇದ್ದಾರೆ ಬೆಂಗಳೂರು: ರಾಜ್ಯದಲ್ಲಿ ಪರ್ಯಾಯ ಲಿಂಗಾಯತ ನಾಯಕರು ಇಲ್ಲ ಎಂಬುದು ನಿಜವಲ್ಲ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಭಾನುವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು’ ಬಿ.ಎಸ್.ಯಡಿಯೂರಪ್ಪ ಅವರು ಲಿಂಗಾಯತ ನಾಯಕರಲ್ಲಿ ಒಬ್ಬರು. ಇದರ ಬಗ್ಗೆ ಯಾವುದೇ ಅನುಮಾನವಿಲ್ಲ.

ಪರ್ಯಾಯ” ಲಿಂಗಾಯತ ನಾಯಕರು ಇಲ್ಲ ಎಂದು ನಾನು ಒಪ್ಪುವುದಿಲ್ಲ. ನಾನು, ಶರಣ್‌ಪ್ರಕಾಶ್ ಪಾಟೀಲ್ ಮತ್ತು ಈಶ್ವರ್ ಖಂಡೆ, ಸೇರಿದಂತೆ ಕಾಂಗ್ರೆಸ್‌ನಲ್ಲಿ ಅನೇಕ ಲಿಂಗಾಯತ ನಾಯಕರು ಇದ್ದಾರೆ. ಬಿಜೆಪಿಯಲ್ಲೂ ಜಗದೀಶ್ ಶೆಟ್ಟರ್ , ಉಮೇಶ್ ಕತ್ತಿ ಯತ್ನಾಳ್, ವಿ.ಸೋಮಣ್ಣ, ಅರವಿಂದ್ ಬೆಲ್ಲದ್ ಮುಂತಾದ ಅನೇಕ ನಾಯಕರು ಇದ್ದಾರೆ. ಎಲ್ಲರೂ ಸಿಎಂ ಹುದ್ದೆಗೆ ಅರ್ಹರು ಎಂದು ಹೇಳಿದ್ದಾರೆ. ‘ ನಮ್ಮನ್ನು ಮುಖ್ಯಮಂತ್ರಿ ಎಂದು ಘೋಷಿಸುವುದು ಸರಿಯಲ್ಲ.

ಯಾವ ಪಕ್ಷ ಅಧಿಕಾರದಲ್ಲಿರಬೇಕು ಎಂದು ರಾಜ್ಯದ ಜನರು ನಿರ್ಧರಿಸುತ್ತಾರೆ ಮತ್ತು ನಂತರ ಯಾರು ಮುಖ್ಯಮಂತ್ರಿ ಎಂದು ಹೈಕಮಾಂಡ್ ನಿರ್ಧರಿಸುತ್ತದೆ, ಎಂದು ಅವರು ಹೇಳಿದರು. ಕಾಂಗ್ರೆಸ್‌ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿ ಯಾವುದೇ ಚುನಾವಣೆ ಎದುರಿಸಿಲ್ಲ. ಕರ್ನಾಟಕ ಮಾತ್ರವಲ್ಲ, ಬೇರೆ ರಾಜ್ಯದಲ್ಲೂ ಮಾಡಿಲ್ಲ. ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸುವೆವು, 150 ಸ್ಥಾನಗಳನ್ನು ಗೆದ್ದು ಅಧಿಕಾರ ಏರುವುದು ನಮ್ಮ ಗುರಿ ಎಂದರು.