ಒಂದೇ ಮರ,ಒಂದೇ ಹಗ್ಗ ಬಲಿಪಡೆಯಿತು ಎರಡು ಜೀವಬೆಳಗಾವಿ: ಮದುವೆ ಬಳಿಕವೂ ಪ್ರೀತಿ ಮುಂದುವರಿಸಿದ್ದ ಜೋಡಿಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಒಂದೇ ಮರಕ್ಕೆ ಅಕ್ಕಪಕ್ಕ ದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಜರುಗಿದೆ.
ಸವದತ್ತಿ ತಾಲೂಕಿನ ಸಿಂದೋಗಿ ಗ್ರಾಮದ ಪಂಚಪ್ಪ ಕಣವಿ (25 ವ) ಹಾಗೂ ಸಕ್ಕೂಬಾಯಿ ಕರಿಗಾರ (23 ವ) ಮೃತ ಪ್ರೇಮಿಗಳು.

ಈ ಇಬ್ಬರು ಪಂಚಪ್ಪ ಹಾಗೂ ಸಕ್ಕೂಬಾಯಿ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದರು.
ಪ್ರೇಮ ವಿವಾಹಕ್ಕೆ ಪಂಚಪ್ಪ ಮತ್ತು ಶಕ್ಕುಬಾಯಿ ಕುಟುಂಬಸ್ಥರು ಅವಕಾಶ ನೀಡಿರಲಿಲ್ಲ ನಾಲ್ಕು ವರ್ಷಗಳ ಹಿಂದೆ ಪಂಚಪ್ಪ ಬೇರೊಬ್ಬ ಮಹಿಳೆಯೊಂದಿಗೆ ವಿವಾಹವಾಗಿದ್ದನು. ಮದುವೆಯ ನಂತರವೂ ಶಕ್ಕೂಬಾಯಿಯೊಂದಿಗೆ ಈತ ಸಲುಗೆಯಿಂದ‌ ಇದ್ದನು. ಈ ಇವರಿಬ್ಬರ ಪ್ರಣಯ ಗಂಭೀರ ಸ್ವರೂಪ ಪಡೆದುಕೊಂಡಿತ್ತು.
ಇಬ್ಬರೂ ಆವಾಗಾವಾಗ ಭೇಟಿಯಾಗಿ ಕಾಲ ಕಳೆಯುತ್ತಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ :  ಕುಮಾರಸ್ವಾಮಿ ಪಲ್ಟಿ ಗಿರಾಕಿ: ಶಾಸಕ ವ್ಯಂಗ್ಯ

ಕಳೆದ‌ ತಿಂಗಳಲ್ಲಿ ಶಕ್ಕೂಬಾಯಿಯ ವಿವಾಹ ಬೇರೆ ಯುವಕನೊಂದಿಗೆ ಮಾಡಲಾಗಿತ್ತು.
ಮದುವೆ ಬಳಿಕವೂ ಪತಿಯ ಮನೆಗೆ ಹೋಗಿರಲು ಶಕ್ಕೂಬಾಯಿಗೆ ಇಷ್ಟವಿರಲಿಲ್ಲ. ಮದುವೆಯ ನಂತರವೂ ತಮ್ಮಿಬ್ಬರ ಪ್ರೀತಿಗೆ ಎರಡು ಕುಟುಂಬಸ್ಥರು ಅಡ್ಡಗಾಲಾಗುತ್ತಾರೆಂಬ ಆತಂಕದಿಂದ ಒಂದೇ ಮರಕ್ಕೆ ಆಶ್ಚರ್ಯವೆಂಬಂತೆ ಒಂದೇ ಹಗ್ಗದಿಂದ ಇಬ್ಬರು ನೇಣಿಗೇರಿದ್ದಾರೆ. ಘಟನೆ ತಿಳಿದು ಎರಡು ಕುಟುಂಬಗಳು ಘಟನಾಸ್ಥಳಕ್ಕೆ ಬಂದು ಕಣ್ಣೀರುಹಾಕಿವೆ.
ಈ ಕುರಿತು ಸವದತ್ತಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿ ಈ ಇಬ್ಬರ ಪ್ರಣಯಗೀತೆ ಸಾವಿನಲ್ಲಿ ಅಂತ್ಯವಾಗಿದೆ.