ನಮ್ಮ ದೇಶದ ಸಂಸದರ ತಿಂಗಳ ಸಂಬಳ, ಅವರಿಗೆ ನೀಡೋ ಸೌಲಭ್ಯ ಎಂಥದ್ದು ಗೊತ್ತೆ, ಒಮ್ಮೆ ಓದಿ

ನೂತನವಾಗಿ ಆಯ್ಕೆಯಾದ ಸಂಸದರಿಗೆ ತಿಂಗಳಿಗೆ 50 ಸಾವಿರ ರೂ ಸಂಬಳವನ್ನು ನೀಡಲಾಗುತ್ತದೆ. ಮತ್ತೆ ಪಾರ್ಲಿಮೆಂಟ್ ಕಲಾಪದ ಸಂದರ್ಭದಲ್ಲಿ ಹಾಜರಾಗಿ, ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿದರೆ ದಿನಕ್ಕೆ 2,000 ರೂ ಸಿಗುತ್ತದೆ. ಇನ್ನು ತಮ್ಮ ಕ್ಷೇತ್ರದ ಖರ್ಚು ವೆಚ್ಚಗಳಿಗೆ ಸುಮಾರು 45 ಸಾವಿರ ರೂಪಾಯಿಗಳನ್ನು ಕ್ಷೇತ್ರದ ಭತೆಗೆ ಕೊಡಲಾಗುತ್ತೆ. ಸಂಸದರ ಆಫೀಸ್ ಮೆಂಟೇನೆನ್ಸ್ ಗಾಗಿ ಪ್ರತಿ ತಿಂಗಳು ಸುಮಾರು 45,000 ರೂಗಳನ್ನು ಕಚೇರಿಯ ಭತ್ತೆಗಾಗಿ ಕೊಡಲಾಗುತ್ತೆ. ಇದರಲ್ಲಿ ಸುಮಾರು 15 ಸಾವಿರ ರೂಗಳನ್ನು ಸಭೆಗಳು ಹಾಗೂ ಪೋಸ್ಟ್ ಗಳ ಖರ್ಚುಗಳಿಗಾಗಿ ಬಳಸಿಕೊಳ್ಳಬೇಕಾಗುತ್ತದೆ.

ಇದರ ಜೊತೆಗೆ ಅವರ ಆಫೀಸ್ ಆಗಿರಬಹುದು ಮನೆಯಾಗಿರಬಹುದು ಇದರ ಕರ್ಟನ್, ಪೀಠೋಪಕರಣಗಳು ಮತ್ತು ಸ್ವಚ್ಛತೆಗೆ ತೆಗೆದುಕೊಳ್ಳುವ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಪಾರ್ಲಿಮೆಂಟ್ ಗೆ ಆಯ್ಕೆಯಾದ ಸಂಸದರಿಗೆ ತಾತ್ಕಲಿಕವಾಗಿ ಉಳಿದುಕೊಳ್ಳಲು ಆಯಾ ರಾಜ್ಯ ಸರ್ಕಾರಗಳು ಹೋಟೆಲ್ ಅಥವಾ ಗೆಸ್ಟ್ ಹೌಸ್ ಅನ್ನು ಕೊಡಬೇಕಾಗುತ್ತೆ. ಸರ್ಕಾರದಿಂದ ಶಾಶ್ವತ ನೆಲೆಯನ್ನು ಕಲ್ಪಿಸುವವರೆಗೂ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಳ್ಳಬಹುದು. ಸಂಸದರ ಅವಧಿ ಪೂರ್ಣಗೊಳ್ಳುವವರೆಗೂ ಉಚಿತವಾಗಿ ಮನೆ ಸಿಗುತ್ತೆ. ಒಂದು ವೇಳೆ ಸಂಸದ ರಾಜೀನಾಮೆ ನೀಡಿದರೆ ಆ ಮನೆಯಲ್ಲಿ ಅವರು ಒಂದು ತಿಂಗಳುಗಳ ಕಾಲ ಉಳಿದುಕೊಳ್ಳಬಹುದು. ಸಂಸದರು ಅಕಾಲಿಕವಾಗಿ ಮರಣಹೊಂದಿದರೆ, ಮನೆಯ ಸದಸ್ಯರು ಆ ಮನೆಯಲ್ಲಿಯೇ ಆರು ತಿಂಗಳುಗಳ ಕಾಲ ಉಳಿದುಕೊಳ್ಳಬಹುದು.

ಸಂಸದರು ಕಾರ್ಯಕ್ರಮಗಳಿಗೆ ತೆರಳಬೇಕೆಂದರೆ ರೈಲ್ವೆ ಪ್ರಯಾಣ ಉಚಿತವಾಗಿ ಸಿಗುತ್ತದೆ. ಇದಲ್ಲದೆ ಸಂಸದರ ಜೊತೆಗೆ ಅವರ ಪತಿ ಅಥವಾ ಪತ್ನಿ ಕೂಡ ಉಚಿತವಾಗಿ ಪ್ರಯಾಣ ಬೆಳೆಸಬಹುದು. ಇನ್ನು ಸಂಸದರು ಉಚಿತವಾಗಿ ವಿಮಾನ ಪ್ರಯಾಣವನ್ನು ಸಹ ಮಾಡಬಹುದು. ಒಂದು ವರ್ಷಕ್ಕೆ ಸುಮಾರು 34 ಬಾರಿ ಸಿಂಗಲ್ ಟಿಕೆಟ್ ಗಳ ಮೂಲಕ ಪ್ರಯಾಣ ಮಾಡಬಹುದು. ಸಂಸದರು ತಮ್ಮ ಪತಿ ಅಥವಾ ಪತ್ನಿಯ ಜೊತೆಗೆ ಸುಮಾರು ಎಂಟು ಬಾರಿ ವಿಮಾನದಲ್ಲಿ ಪ್ರಯಾಣ ಮಾಡಬಹುದು. ಒಬ್ಬ ಎಂಪಿ ರಸ್ತೆ ಮೂಲಕ ಇಷ್ಟೆಲ್ಲ ಸಂಚರಿಸುತ್ತಾನೋ, ಅಷ್ಟೂ ಪ್ರಯಾಣಕ್ಕೆ ಪ್ರತಿ ಕಿಲೋಮೀಟರ್ ಗೆ 16 ರೂ ಕೊಡಲಾಗುವುದು.

ಇದನ್ನೂ ಓದಿ :  ಲವ್ ಜಿಹಾದ್ ವಿರುದ್ಧ ಬಹುದೊಡ್ಡ ನಿರ್ಧಾರದ ಬಳಿಕ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಲು ಮುಂದಾದ ಯೋಗಿ ಸರ್ಕಾರ!

ಇನ್ನು ಇವರಿಗೆ ಮೂರು ಟೆಲಿಫೋನ್ ಸಂಪರ್ಕಗಳನ್ನು ನೀಡಲಾಗುತ್ತದೆ. ಈ ಮೂರು ನಂಬರ್ ನಿಂದ ಪ್ರತಿವರ್ಷಕ್ಕೆ 50,000 ಉಚಿತ ಕರೆಗಳನ್ನು ಮಾಡಬಹುದು. ಇನ್ನು ಪ್ರೈವೇಟ್ ಟೆಲಿಫೋನ್ ಕಂಪನಿಗಳ ಸಂಪರ್ಕವನ್ನು ಪಡೆಯಬಹುದು. ಇದರಿಂದ ಸುಮಾರು ಒಂದುವರೆ ಲಕ್ಷ ಕರೆಗಳನ್ನು ಉಚಿತವಾಗಿ ಮಾಡಬಹುದು. ಇವರಿಗೆ ವೈದ್ಯಕೀಯ ಭತೆಗಳು ಕೂಡ ಸಿಗುತ್ತದೆ. ಸಂಸದರು ಸುಮಾರು ಒಂದು ವರ್ಷಕ್ಕೆ 50 ಸಾವಿರ ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ಬಳಸಬಹುದು. ಈ ಎಲ್ಲಾ ಸೌಲಭ್ಯಗಳೊಂದಿಗೆ ಕಂಪ್ಯೂಟರ್, ಲ್ಯಾಪ್ ಟಾಪ್ , ಪ್ರಿಂಟರ್ ಹಾಗೂ ಇನ್ನಿತರ ವಸ್ತುಗಳನ್ನು ಖರೀದಿ ಮಾಡಲು 50 ಸಾವಿರ ರೂಗಳನ್ನು ನೀಡಲಾಗುತ್ತಿದೆ. ಸಂಸದರಿಗೆ ಯಾವುದೇ ಕುಂದು ಕೊರತೆ ಇರಬಾರದು ಲಂಚದ ಹಣಕ್ಕೆ ಆಸೆ ಬಿಳಬಾರದೆಂದು ಇಷ್ಟೆಲ್ಲಾ ಸೌಲಭ್ಯಗಳನ್ನು ಸರ್ಕಾರ ಇವರಿಗೆ ನೀಡುತ್ತಿದೆ.