ಜೂ.7ರಂದು ಕನ್ನಡ ಕಿರುತೆರೆಯಲ್ಲಿ ಬರಲಿದೆ ನೇತಾಜಿ ಜೀವನ ಚರಿತ್ರೆ!ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡಲು ತನ್ನ ಪ್ರಾಣವನ್ನೇ ಮುಡಿಪಾಗಿಟ್ಟ ಸ್ವಾತಂತ್ರ್ಯ ಹೋರಾಟಗಾರ. ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ ಎಂದು ದೇಶಭಕ್ತರಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ನೇತಾಜಿ ಸುಭಾಷ್ ಚಂದ್ರ ಬೋಸ್. ಇಂತಹ ನೇತಾಜಿ ಅವರ ಜೀವನ ಚರಿತ್ರೆ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

ಒರಿಸ್ಸಾದ ಕಟಕ್​ನಲ್ಲಿ ಜನಿಸಿದ ನೇತಾಜಿ‌ ಸುಭಾಷ್ ಚಂದ್ರ ಬೋಸ್ ಅವರು ಇಂಡಿಯನ್ ಸಿವಿಲ್ ಸರ್ವೀಸ್ ಸೇರಲು ಬ್ರಿಟನ್ನಗೆ ತೆರಳಬೇಕಾಯಿತು. ಆದರೆ ಅಲ್ಲಿಂದ ವಾಪಾಸ ಬಂದಿದ್ದು ಕೇವಲ ಸುಭಾಷ್ ಚಂದ್ರ ಬೋಸ್ ಅಲ್ಲ, ಅವರಲ್ಲಿ ಸ್ವಾತಂತ್ರ್ಯ ಕಿಡಿ ಸೇರಿಕೊಂಡು ಭಾರತ ಬಂದರು. ನೇತಾಜಿ ಅವರು ಸ್ವದೇಶಕ್ಕೆ ಹಿಂದಿರುಗಿ ಸ್ವಾತಂತ್ರ್ಯ ಹೋರಾಟದಲ್ಲಿ  ಸೇರಿಕೊಂಡರು. ‌ಗಾಂಧಿಯವರ ಅಹಿಂಸಾ ಹೋರಾಟವನ್ನು ಕಟುವಾಗಿ ವಿರೋಧಿಸಿ ಸ್ವಂತ ಸೇನೆ ಬಲವನ್ನೇ ನೇತಾಜಿ ಕಟ್ಟಿದರು.

ನೇತಾಜಿಯವರು ಭಾರತ ಮಾತೆಗೆ ಬ್ರಿಟಿಷರ್ ದಾಸ್ಯದಿಂದ ಮುಕ್ತಿ ದೊರಕಿಸುವ ಪಣವನ್ನು ತೊಟ್ಟದಿರು. ಸ್ವಾತಂತ್ರ್ಯ ಹೋರಾಟದಲ್ಲಿ ಸ್ವತಃ ಸೈನ್ಯ ಕಟ್ಟಿದ ಧೀರ ನಾಯಕನ ಐತಿಹಾಸಿಕ ಕಥೆಯನ್ನು ಧಾರಾವಾಹಿಯ ಮೂಲಕ ನಾವು ಕಾಣಬಹುದು. ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಸ್ವಾಭಿಮಾನದ ಹೆಜ್ಜೆ ಹಾಕಿದ ಅವರು ಜರ್ಮನಿಯ ಸಹಾಯದೊಂದಿಗೆ “ಇಂಡಿಯನ್ ನ್ಯಾಷನಲ್ ಆರ್ಮಿ” ಸ್ಥಾಪಿಸಿದ್ದರು. ಆದರೆ ನೇತಾಜಿ ಅವರ ಸಾವಿನ ಹುತ್ತಕ್ಕೆ ಸುತ್ತಿಕೊಂಡ ಹಲವಾರು ಗೊಂದಲ,‌ ಪ್ರಶ್ನೆಗಳಿಗೆ ಇಂದಿಗೂ ಮುಕ್ತಿ ದೊರಕದೆ ಇರುವುದು ವಿಷಾದದ ಸಂಗತಿ.

ಇದನ್ನೂ ಓದಿ :  ಮುಂದಿನ ಮುಖ್ಯಮಂತ್ರಿ ಎಂದಾಗ ಕಡಕ್ ಟಾಂಗ್ ಕೊಟ್ಟ ಕಂದಾಯ ಸಚಿವ

ಇದೇ ಜೂನ್ 7 ರಿಂದ ಜೀ ಕನ್ನಡ ವಾಹಿಯಲ್ಲಿ “ನೇತಾಜಿ ಸುಭಾಷ್ ಚಂದ್ರ ಬೋಸ್” ಅನ್ನೋ ಧಾರಾವಾಹಿ ಪ್ರಾರಂಭವಾಗಲಿದೆ. ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಇದೊಂದು ಹೊಸ ಮೈಲಿಗಲ್ಲಾಗಲಿದೆ. ಈಗಾಗಲೇ ಪ್ರಸಾರಗೊಳ್ಳುತ್ತಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಆಂಬೇಡ್ಕರ್ ಅವರ‌ ಜೀವನ ಚರಿತ್ರೆಯನ್ನು ಸಾರುವ ಧಾರವಾಹಿ ಕನ್ನಡಿಗರ‌ ಮನೆಮಾತಾಗಿದೆ.ಚಿಕ್ಕವರಿಂದ ಹಿಡಿದು ಹಿರಿಯರವರೆಗೂ ಎಲ್ಲರ ಮನಗೆದ್ದಿದೆ. ಇದರ ಬೆನ್ನಲ್ಲೇ ಮತ್ತೊಬ್ಬ ಮಹಾನ್ ನಾಯಕನ ಸಾಹಸವನ್ನು ಜನರ ಮುಂದಿಡಲಾಗುತ್ತಿದೆ.

ಇದೀಗ ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಝೀ ಕನ್ನಡ ವಾಹಿನಿ ಸ್ವಾತಂತ್ರ್ಯ ಹೋರಾಟಗಾರರ ಸ್ಪೂರ್ತಿದಾಯಕ  ಕಥೆಯನ್ನು ಜನರ ಮುಂದೆ ಇಡಲು ಮುಂದಾಗಿದೆ.