ಸೆಪ್ಟೆಂಬರ್ 20 ರಿಂದ ಬರಲಿದೆ ಹೊಸ ನ್ಯೂಸ್ ಚಾನೆಲ್ : ಸುಳ್ಳು ಸುದ್ದಿ ಹಬ್ಬಿಸಿದವ ವಿರುದ್ಧ ದಾಖಲಾಯ್ತು ಕೇಸ್!ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣದಲ್ಲಿ ಬಾರೀ ಹೆಸರು ಮಾಡಿದ್ದ ನ್ಯೂಸ್ ಚಾನೆಲ್ ಅಂದ್ರೆ ಅದು ನ್ಯೂಸ್ ಫಸ್ಟ್! Tv9 ಬಿಟ್ಟ ಪತ್ರಕರ್ತರೇ ಸೇರಿ ಕಟ್ಟಿ ಬೆಳೆಸಿದ ಫಸ್ಟ್ ನ್ಯೂಸ್ ಕೆಲವು ಕಾರಣದಿಂದಾಗಿ ತನ್ನ ಹೆಸರನ್ನು ಫಸ್ಟ್ ನ್ಯೂಸ್ ಎಂದು ಬದಲಾಯಿಸಿಕೊಂಡಿತ್ತು ಆನಂತರ ಕೆಲವೇ ತಿಂಗಳಲ್ಲೇ 5 ಲಕ್ಷಕ್ಕೂ ಅಧಿಕ YouTube ಸಬ್ಸ್ಕೈಬರ್ಸ್ ಪಡೆಯುವ ಮೂಲಕ ಅತ್ಯಂತ ನಿಖರ ಸುದ್ದಿಮಾದ್ಯಮವಾಗಿ ಹೊರಹೊಮ್ಮಿದೆ.

ಆರಂಬದಿಂದಲೂ ಕ್ವಾಲಿಟಿ ವೀಡಿಯೋ ಹಾಗೂ ಕಂಟೆಂಟ್ ನೀಡುವ ಮೂಲಕವೇ ಹೆಸರಾಗಿದ್ದ ನ್ಯೂಸ್ ಫಸ್ಟ್ ಸದ್ಯ ಒಂದು ವರ್ಷದಿಂದಲೂ ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ ಮೂಲಕವೇ ಸುದ್ದಿ ತಲುಪಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು ಇನ್ನು ಇದೇ ಮುಂದಿನ ತಿಂಗಳು 20 ರಂದು ಟಿವಿಯಲ್ಲಿ ಕೂಡ ಪ್ರಸಾರವಾಗಲಿದೆ.ಛಲ ಬಿಡದೇ ಕಟ್ಟಿದ ನ್ಯೂಸ್ ನಲ್ಲಿ ಸೋಮಣ್ಣ ಮಾಚಿಮಾಡ, ಜಹ್ನಾವಿ ಕಾರ್ತಿಕ್, ವಿದ್ಯಾಶ್ರೀ, ನಾಗೇಂದ್ರ ಬಾಬು ಸೇರಿದಂತೆ ಎಲ್ಲವೂ ಯುವ ಮನಸ್ಸುಗಳೇ ಇವೆ. ಆದರೆ ಇಂಥ ಒಂದೊಳ್ಳೆ ಪ್ರಯತ್ನಕ್ಕೂ ಕೆಲವು ಕಾಂಗ್ರೆಸ್ ಪ್ರೇರಿತ ಕಚಡಾ ನ್ಯೂಸ್ ಪೋರ್ಟಲ್ ಒಂದು ನ್ಯೂಸ್ ಫಸ್ಟ್ ಬಿಜೆಪಿಯದ್ದೆಂದು ಸುಳ್ಳು ಸುದ್ದಿ ಹಬ್ಬಿಸಿದ್ದು ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ಬಿ ವೈ ವಿಜಯೇಂದ್ರ ಹಣ ಹೂಡಿಕೆ ಮಾಡಿದ್ದಾರೆ, ಇದೊಂದು ಬಿಜೆಪಿ ಬೆಂಬಲಿತ ಮಾಧ್ಯಮವೆಂಬ ಸುಳ್ಳು ಆರೋಪ ಮಾಡಿದೆ. ಇದಕ್ಕೆ ನ್ಯೂಸ್ ಫಸ್ಟ್ ಕೂಡ ಪ್ರತಿಕ್ರಿಯಿಸಿದ್ದು ನ್ಯೂಸ್ ಫಸ್ಟ್ ಒಂದು ಸ್ವತಂತ್ರ ಮಾಧ್ಯಮವಾಗಿದ್ದು ಇದರಲ್ಲಿ ಯಾವ ರಾಜಕೀಯ ಪಕ್ಷದವರ ಹೂಡಿಕೆಯೂ ಇಲ್ಲ ಎಂದಿದೆ. ಅಲ್ಲದೆ ಇಂತಹ ಸುಳ್ಳು ಸುದ್ದಿ ಹಬ್ಬಿಸಿದ ಕಾಂಗ್ರೆಸ್ ಪ್ರೇರಿತ ನ್ಯೂಸ್ ಪೋರ್ಟಲ್ ಮೇಲೆ ಕೇಸ್ ದಾಖಲಿಸಿದೆ.

ಇದನ್ನೂ ಓದಿ :  ಬಿಜೆಪಿ ಹೈಕಮಾಂಡ್ ನಾಯಕ ಶೀಘ್ರ ರಾಜ್ಯಕ್ಕೆ

ಒಟ್ಟಿನಲ್ಲಿ ಸಮಾಜದಲ್ಲಿ ಒಂದು ಬದಲಾವಣೆ ತರಲು ಪ್ರಯತ್ನಿಸುತ್ತಿರುವ ನ್ಯೂಸ್ ಫಸ್ಟ್ ವಿರುದ್ಧ ಹರಡಲಾಗಿರುವ ಸುಳ್ಳು ಸುದ್ದಿಗೆ ಕಿವಿ ಕೊಡದೆ ನಾವೆಲ್ಲರೂ ಬೆಂಬಲಿಸೋಣ. ವೈರಲ್ ಸುದ್ದಿ ನ್ಯೂಸ್ ಪೋರ್ಟಲ್ ಕಡೆಯಿಂದ ಆಲ್ ದ ಬೆಸ್ಟ್.. ಶುಭವಾಗಲಿ ಸೋಮಣ್ಣ ಮಾಚಿಮಾಡ ಅಂಡ್ ಟೀಂ.