ರಾಜ್ಯಕ್ಕೆ ಎಲ್ಲೆಡೆ ದಲಿತ ಸಿಎಂ ಕೂಗು! ರೇಸನಲ್ಲಿ ಯಾರಿದ್ದಾರೆ ನೋಡಿ?ಬೆಂಗಳೂರು ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿಯ ಕೂಗು ಇನ್ನೂ ಕಡಿಮೆಯಾಗುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯ ಮಂತ್ರಿ ಎಂಬ ಹೇಳಿಕೆಯಿಂದ ಆರಂಭವಾಗಿರುವ ಗೊಂದಲ ಇದೀಗ ದಲಿತ ಮುಖ್ಯಮಂತ್ರಿ ಕೂಗಿನವರೆಗೆ ಬಂದು ನಿಂತಿದೆ. ಕೇಂದ್ರದ ಮಾಜಿ ಸಚಿವ ಕೆ.ಎಚ್ ಮುನಿಯಪ್ಪ ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್, ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು, ದಲಿತ ಸೇರಿದಂತೆ ಇತರೆ ಹಿಂದುಳಿದ ನಾಯಕರನ್ನು ಒಟ್ಟುಗೂಡಿಸಿ ದಲಿತ ಮುಖ್ಯಮಂತ್ರಿ ಸ್ಥಾನವನ್ನು ಯಾಕೆ ಪಡೆಯಬಾರದು ಎಂಬುದರ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು ಎಂದು ಹೇಳಲಾಗುತ್ತಿದೆ.

ಶನಿವಾರ ರಾತ್ರಿ ಸಭೆ ಸೇರಿದ ನಾಯಕರು, ಬಹಳ ಹೊತ್ತಿನವರೆಗೆ ಚರ್ಚೆ ನಡೆಸಿದರು. ಈ ಹಿಂದೆಯೇ ದಲಿತ ಮುಖ್ಯಮಂತ್ರಿ ಕೂಗು ಮುನ್ನೆಲೆಗೆ ಬಂದಿತ್ತು. ಅದು ಸಾಕಾರವಾಗಲಿಲ್ಲ. ರಾಜ್ಯಕ್ಕೆ ನಮ್ಮವರೊಬ್ಬರು ಮುಖ್ಯಮಂತ್ರಿ ಯಾಕಾಗಬಾರದು ಎಂಬುದರ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ನಿರ್ಧಾರವನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಈಗ ಅದರ ಬಗ್ಗೆ ಚರ್ಚೆ ನಡೆಸುವುದು ಬೇಡ ಎಂದು ಅನೇಕ ನಾಯಕರು ಅಭಿಪ್ರಾಯಪಡುತ್ತಿದ್ದಾರೆ.

ಗೊಂದಲದ ಚೆಂಡು ಕೆಲವೊಂದು ಮಾತ್ರ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ಹೆಸರನ್ನು ಪದೇಪದೇ ಉಲ್ಲೇಖ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಈ ರೀತಿ ಹೇಳಿಕೆ ನೀಡುವುದು ಬೇಡ. ಏನಿದ್ದರೂ ಹೈಕಮಾಂಡ್ ನಿರ್ಧಾರವೇ ಅಂತಿಮ. ಅಂತಹ ಹೇಳಿಕೆ ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದೆ.