ಜೊಲ್ಲೆ ಚಾರಿಟೇಬಲ್ ಫೌಂಡೇಶನ್ ನ ಕಾರ್ಯ ಶ್ಲಾಘನೀಯ:- ಪಿ ರಾಜೀವ್ಬೆಳಗಾವಿ :- ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಜೊಲ್ಲೆ ಚಾರಿಟೇಬಲ್ ಫೌಂಡೇಶನ್ ಹಾಗೂ ಕುಡಚಿ ಶಾಸಕರಾದ ಪಿ ರಾಜೀವ್ ಅವರ ಸಹಕಾರದಿಂದ ಕೋವಿಡ್ ಕೇರ್ ಸೆಂಟರ್ ನ ಪ್ರಾರಂಭ ಮಾಡಲಾಯಿತು.

ಚಿಕ್ಕೋಡಿ ಸಂಸದರು ಹಾಗೂ ಜೊಲ್ಲೆ ಚಾರಿಟೇಬಲ್ ಫೌಂಡೇಶನ್ ನ ಅಣ್ಣಾ ಸಾಹೇಬ ಜೊಲ್ಲೆ ಕೋವಿಡ್ ಕೇರ್ ಸೆಂಟರ್ ನ್ನು ಬುಧವಾರ ಉದ್ಘಾಟಿಸಿದರು.

ಅಂಗನವಾಡಿ,ಆಶಾ ಕಾರ್ಯಕರ್ತೆಯರಿಗೆ ಹಾಗೂ ದೇವದಾಸಿಯರಿಗೆ ಮೆಡಿಕಲ್ ಕಿಟ್,ಆಹಾರ ಧಾನ್ಯಗಳ ಕಿಟ್ ವಿತರಿಸುವ ಮೂಲಕ ಕೋವಿಡ್ ನ ಕುರಿತು ಜಾಗೃತಿ ಮೂಡಿಸಿದರು.

ಇದನ್ನೂ ಓದಿ :  ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ-ಎಸ್‍ಐಟಿಗೆ ಮುಖ್ಯಸ್ಥರೇ ಇಲ್ವಾ?

ಶಾಸಕರಾದ ಪಿ ರಾಜೀವ್ ಅವರು ಕೊರೋನಾ ಸಂಕಷ್ಟದ ಸಮಯದಲ್ಲಿ ಜನರಿಗೆ ನೆರವಾಗಿರುವ ಜೊಲ್ಲೆ ಚಾರಿಟೇಬಲ್ ಫೌಂಡೇಶನ್ ನ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.

ಇದೇ ವೇಳೆ ಬಸವ ಪ್ರಸಾದ ಜೊಲ್ಲೆ, ಬಸನಗೌಡ ಆಸಂಗಿ, ಮಲ್ಲಿಕಾರ್ಜುನ ಖಾನಗೌಡರ, ಪರಶುರಾಮ ಪತ್ತಾರ, ಹಾರೂಗೇರಿ ಪಿಎಸೈ ಯಮನಪ್ಪ ಮಾಂಗ ಸೇರಿದಂತೆ ಇತರರು ಉಪಸ್ಥಿತರಿದ್ದರು.