ರೋಹಿಣಿ ಸಿಂಧೂರಿಯವರ ರಾಜಿನಾಮೆಗೆ ಪ್ರತಾಪ ಸಿಂಹ ಕಾರಣನಾ?ರೋಹಿಣಿ ಸಿಂಧೂರಿಯವರ ವಿರುದ್ಧ ವೃತ್ತಿ ನುರಿತ ರಾಜಕಾರಣಿಗಳು ಮಾತನಾಡಿದಾಗ ಆಶ್ಚರ್ಯವೇನು ಆಗಿರಲಿಲ್ಲ. ಯಾಕೆಂದರೆ, ಮೀಡಿಯಾಗಳಲ್ಲಿ ದಕ್ಷರು ಎಂದು ಕರೆಸಿಕೊಂಡಿರುವ ಅಧಿಕಾರಿ, ನಿಯಮ ಪಾಲನೆಯ ವಿಷಯದಲ್ಲಿ ಕಟ್ಟುನಿಟ್ಟಿನ ವರ್ತನೆ ತೋರಿಸಿದರೂ ವೃತ್ತಿನುರಿತ ರಾಜಕಾರಣಿಗಳಿಗೆ ಸಹ್ಯವಾಗುವುದಿಲ್ಲ.

ಆದರೆ, ಪತ್ರಕರ್ತರಾಗಿ ಈಗ ಸಂಸದರಾಗಿರುವ Pratap Simha ಅವರು ರೋಹಿಣಿ ಸಿಂಧೂರಿಯವರ ಆಡಳಿತ ವೈಖರಿಯ ಬಗ್ಗೆ ಪ್ರಶ್ನಿಸಿದಾಗ, ಹಿಂದಿನ ಕಾರಣದ ಕುರಿತ ಸಹಜ ಕುತೂಹಲವಿತ್ತು. ಯಾಕೆಂದರೆ, ಪ್ರತಾಪ್ ಸಿಂಹ ಅವರು ಇತರೆ ರಾಜಕಾರಣಿಗಳಂತೆ ರೋಹಿಣಿಯವರ ಕಾರ್ಯ ವೈಖರಿಯ ಬಗ್ಗೆ ದನಿಯೆತ್ತಿರಲಿಲ್ಲ. ಈ ಹಿಂದೆ ಜಿಲ್ಲಾಧಿಕಾರಿಯವರ ಜನಸಂಪರ್ಕ ಸಭೆಗೆ ಸಾರಾ ಮಹೇಶ್ ಮತ್ತಿತರ ಶಾಸಕರು ವಿರೋಧ ವ್ಯಕ್ತಪಡಿಸಿದಾಗ ಪ್ರತಾಪ್ ಅವರು ಜಿಲ್ಲಾಧಿಕಾರಿಯವರ ನಡೆಯನ್ನು ಸಮರ್ಥಿಸಿದ್ದರು. ಚಾಮರಾಜನಗರ ದುರ್ಘಟನೆಯಾದಾಗಲೂ ರೋಹಿಣಿಯವರ ಪರ ಮಾತನಾಡಿದ್ದರು.

ಈಗ ಪ್ರತಾಪ್ ಅವರ ವಿರೋಧಕ್ಕೆ ಮುಖ್ಯವಾಗಿ ಕಾರಣವಾಗಿರುವುದು,
1.ಗ್ರಾಮೀಣ ಭಾಗದಲ್ಲಿ ಕೋವಿಡ್ ನಿಯಂತ್ರಣದ ವಿಷಯದಲ್ಲಿ ಅವರ ಕಾರ್ಯ ವಿಧಾನದ ಬಗ್ಗೆ. ಅರ್ಧದಿನವನ್ನು ಮೀಟಿಂಗ್ ಗಳಲ್ಲೇ ಕಳೆಯುತ್ತಿದ್ದಾರೆ.
2.ದಕ್ಷ ಮತ್ತು ನಿಯಮ ಪಾಲನೆಯ ಅಧಿಕಾರಿ ಎಂದು ಕರೆಸಿಕೊಳ್ಳುವ ಜಿಲ್ಲಾಧಿಕಾರಿ, 16 ಸ್ಟೆಪ್ ಡೌನ್ ಆಸ್ಪತ್ರೆಗೆ ಮಂಜೂರಾತಿ ನೀಡುವಾಗ ನಿಯಮವೇಕೆ ಪಾಲಿಸಿಲ್ಲ ಎನ್ನುವ ಪ್ರಶ್ನೆ ಎತ್ತಿದ್ದಾರೆ.
3.ಖಾಸಗಿ ಆಸ್ಪತ್ರೆಗಳ ಶೇ.75 ಹಾಸಿಗೆಗಳನ್ನು ಸರ್ಕಾರಕ್ಕೆ ಮೀಸಲಿಡಬೇಕು ಎನ್ನುವ ಮುಖ್ಯ ಕಾರ್ಯದರ್ಶಿಯ ರೋಹಿಣಿಯವರ ಆದೇಶ ಪಾಲನೆಗಾಗಿ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿ ಎಂದು ಜನಪ್ರತಿನಿಧಿಗಳು ಮಾಡಿದ ಮನವಿಯನ್ನೇಕೆ ಜಾರಿಗೆ ತರಲಿಲ್ಲ? ತಂದಿದ್ದರೆ ಬಡ-ಮಧ್ಯಮ ವರ್ಗದವರು ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ಹಣ ಕಟ್ಟುವುದು ತಪ್ಪಿಸಬಹುದಾಗಿತ್ತಲ್ಲ ಎನ್ನುವ ಪ್ರಶ್ನೆಯನ್ನೆತ್ತಿದ್ದಾರೆ.
4.ಕೇಂದ್ರ+ರಾಜ್ಯದಿಂದ ಕೋವಿಡ್ ನಿರ್ವಹಣೆಗಾಗಿ ಬಂದಿರುವ 41 ಕೋಟಿ ಹಣದಲ್ಲಿ 39 ಕೋಟಿ ವೆಚ್ಚವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಆ ಖರ್ಚಿನ ವಸ್ತುಸಹಿತ ವಿವರ ನೀಡಲಿ ಎಂದಿದ್ದಾರೆ.

ಡಿ.ಸಿ ರೋಹಿಣಿ ಸಿಂಧೂರಿಯವರು ದಕ್ಷರು, ನಿಯಮ ಪಾಲಕರೇ ಇರಬಹುದು. ಆದರೆ, ಪ್ರಶ್ನಾತೀತರೇನೂ ಅಲ್ಲ. ಜನಪ್ರತಿನಿಧಿಯಾಗಿ ಪ್ರತಾಪ್ ಅವರು ಕೇಳಿದ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿಗಳು ಉತ್ತರ ಕೊಡಲೇಬೇಕಾಗುತ್ತದೆ. ಎಲ್ಲಾ ಸರಿಯಿದ್ದರೇಕೆ ಉತ್ತರಿಸಲು ಹಿಂಜರಿಕೆ ಇರಬಾರದಲ್ಲವೇ?

ಇದನ್ನೂ ಓದಿ :  ಲಡಾಖ್‌ ಗಡಿ ಬಳಿ ಮತ್ತೆ ಚೀನಾ ತಂಟೆ

ಕೋವಿಡ್ ನಿರ್ವಹಣೆಗಾಗಿ ಸರಕಾರ ಮತ್ತು ಸಮಾಜದ ಸಂಘ ಸಂಸ್ಥೆಗಳು ವಿಶೇಷ ನೆರವು ನೀಡಿವೆ. ಜಿಲ್ಲಾಡಳಿತ ಇಂತವರ ದಾಖಲೆಯನ್ನು ಸರಿಯಾದ ರೀತಿಯಲ್ಲಿ ಕೊಡಬೇಕಾಗಿರುವುದು ಕರ್ತವ್ಯವೂ ಹೌದು. ಜಿಲ್ಲಾಧಿಕಾರಿಗಳು, ಆಯುಕ್ತರ ವರ್ಚಸ್ಸಿನ ಜಟಾಪಟಿಯಲ್ಲಿ ಕರೋನಾಕ್ಕೆ ತುತ್ತಾದ ಕುಟುಂಬಗಳು ಯಾಕೆ ಸಂಕಷ್ಟಕ್ಕೆ ಗುರಿಯಾಗಬೇಕು.
ಇವರ ತಮ್ಮ ಹಮ್ಮು ಬಿಮ್ಮಿಗಳನ್ನು ತಮ್ಮ ಮನೆಯಲ್ಲೇ ಇಟ್ಟುಬಂದು ಕೆಲಸ ಮಾಡಲಿ.

ಕೆಳಗಿನ ಅಧಿಕಾರಿಗಳು ಮಾಡಿದ ಖರ್ಚಿನ ಸಮಫೂರ್ಣ ಲೆಕ್ಕ ಕೇಳುವ ಅಧಿಕಾರಿಯವರು ತಾನು ಮಾಡಿದ ಖರ್ಚಿನ ಲೆಕ್ಕವನ್ನು ಅಷ್ಟೇ ಪ್ರಾಮಾಣಿಕವಾಗಿ ಒಪ್ಪಿಸಬೇಕು ತಾನೆ? ಒಪ್ಪಿಸಲಿ…

ಪ್ರಶ್ನೆ ಖಂಡಿತ ಮಾಡಬೇಕು. ಆದರೆ, ಮಾಡುವ ಸಾಲಿನಲ್ಲಿ ನಿಂತವರ ಜೊತೆ ಪ್ರಶ್ನಿಸಿದರೆ ಜನರ ಪ್ರತಿಕ್ರಿಯೆ ಹೇಗಿದ್ದಿತು ಎನ್ನುವುದು ಗೊತ್ತಿರಬೇಕು.
ಒಬ್ಬ ಜನಪ್ರತಿನಿಧಿಯಾಗಿ ಈ ಪ್ರಶ್ನೆಗಳನ್ನು ಕೇಳುವ ಹಕ್ಕು ಸಂಸದರಾದ ಪ್ರತಾಪ್ ಸಿಂಹ ಅವರಿಗೆ ಖಂಡಿತ ಇದೆ ಮತ್ತು ಇವೆಲ್ಲ Valid ಪ್ರಶ್ನೆಗಳೇ ಆಗಿವೆ. ಆದರೆ, ಇಲ್ಲಿ ಆದ ಸಮಸ್ಯೆ ಏನೆಂದರೆ, ರೋಹಿಣಿ ಸಿಂಧೂರಿಯವರ ವಿರುದ್ಧ ದನಿಯೆತ್ತಿದ ಪುರಾತನ ರಾಜಕಾರಣಿಗಳ ಸಾಲಿನಲ್ಲೇ ಪ್ರತಾಪ್ ಅವರನ್ನು ನಿಲ್ಲಿಸಿ ಜನರು ನೋಡಿದ್ದು ಮತ್ತು ಅವರ ಜೊತೆ ಇವರೂ ಸೇರಿಕೊಂಡರೇ ಎನ್ನುವಂತೆ ಯೋಚಿಸಿದ್ದು. ಈ ಎಲ್ಲಾ ಪ್ರಶ್ನೆಗಳಿಗೂ ಪ್ರತಾಪ್ ಸಿಂಹ ಅವರು ನಿನ್ನೆ ತಮ್ಮ ಫೇಸ್ಬುಕ್ ಲೈವ್ನಲ್ಲಿ ಉತ್ತರ ನೀಡಿದ್ದಾರೆ.

ಪ್ರತಾಪ್ ಅವರ ಬಗ್ಗೆ ಈ ಹಿಂದೊಮ್ಮೆ ಹೀಗೆ ಬರೆದಿದ್ದೆ. ಮತ್ತೆ ಅದನ್ನೇ ರಿಪೀಟ್ ಮಾಡಿ ಮುಗಿಸುತ್ತೇನೆ.

ಅಪ್ಪನ ಹೆಸರು, ಕುಟುಂಬದ ಬಲ ಅಂತೆಲ್ಲ ಏನು ಇಲ್ಲದೇ, ಸ್ವಂತ ಶಕ್ತಿ, ಸಾಮರ್ಥ್ಯದಿಂದ ಸಂಸದರಾದವರು ಪ್ರತಾಪ್ ಸಿಂಹ. ಅವರ ಕೆಲಸವೇ ಅವರ ಬಗ್ಗೆ ಮಾತನಾಡಬೇಕು.

ದೊಡ್ಡ ಕುಟುಂಬದ ಹಿನ್ನೆಲೆಯಿಲ್ಲದೇ ರಾಜಕೀಯದಲ್ಲಿ ಬೆಳೆಯುತ್ತಿರುವವರನ್ನು ಕೆಡವಲು ರಣಪಡೆಗಳೇ ಕಾಯುತ್ತಿವೆ ಇಲ್ಲಿ. ಅದನ್ನು ಯೋಚಿಸಿಯೇ ಹೆಜ್ಜೆಯಿಡಬೇಕು.

ಕಡೆಯದಾಗಿ…
ಸಾರಾಸಗಟಾಗಿ ಪ್ರತಾಪ್ ಅವರನ್ನು ಕಟಕಟೆಯಲ್ಲಿ ನಿಲ್ಲಿಸಿ ರೋಹಿಣಿಯವರಿಗೆ ಕ್ಲೀನ್ ಚಿಟ್ ಕೊಡಲು ಹೊರಡುವವರು, ಪ್ರತಾಪ್ ಅವರು ಎತ್ತಿರುವ ಪ್ರಶ್ನೆಗಳಿಗೆ ರೋಹಿಣಿಯವರೂ ಸೂಕ್ತ ಉತ್ತರ ಕೊಡಲಿ ಅಂತಲೂ ಕೇಳಬೇಕು.