ನಾನು ನಾಟಕಕಾರ ಅಲ್ಲ, ಬೆಳಗಾವಿಯಲ್ಲಿ ರಾಜೀನಾಮೆಯ ಮಾತೆತ್ತಿದ ಗೋಕಾಕ್ ಸಾಹುಕಾರಬೆಳಗಾವಿ:- ಕಳೆದ ಕೆಲದಿನಗಳಿಂದ ಚರ್ಚೆಯಲ್ಲಿರುವ ಮಾಜಿ ಸಚಿವ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆಯ ವಿಷಯ ಮತ್ತೇ ಮುನ್ನೆಲೆಗೆ ಬಂದಂತಾಗಿದೆ ಮೊನ್ನೆಯಷ್ಟೇ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಭೇಟಿಮಾಡಿ ಈಗಾಗಲೇ ಅನೇಕ ರಾಜಕೀಯ ಲೆಕ್ಕಾಚಾರಗಳನ್ನು ಹಾಕಿರುವ ರಮೇಶ್ ಜಾರಕಿಹೊಳಿ ಶುಕ್ರವಾರ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳಿಗೆ ಸಾಂತ್ವನ ಹೇಳಿ ಆಶಿರ್ವಾದ ಪಡೆದು ಬೆಳಗಾವಿಗೆ ಮರಳಿದ್ದಾರೆ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಸುತ್ತೂರು ಶ್ರೀಗಳಿಗೆ ಮಾತೃವಿಯೋಗವಾಗಿರುವ ಕಾರಣಕ್ಕೆ ಹೋಗಿ ಸ್ವಾಂತನ ಹೇಳಿಬಂದೆ ಮೈಸೂರಿನ ಭೇಟಿಗೆ ವಿಶೇಷ ಅರ್ಥ ಬೇಡ ಮುಂಬೈಗೆ ಹೋಗಿ ರಾಜಕಾರಣದ ಚರ್ಚೆ ಮಾಡಿದ್ದು ನಿಜವಾಗಿದೆ ಎಂದು ಮೈಸೂರು ಭೇಟಿಯ ಕುರಿತು ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದರು.ಕೇಂದ್ರ ಹಾಗೂ ಸಂಘಪರಿವಾರದ ನಾಯಕರು ಅತ್ಯಂತ ಗೌರವಯುತವಾಗಿ ನಡೆಸಿಕೊಂಡಿದ್ದಾರೆ ಅದರ ಬಗ್ಗೆ ಅಸಮಾಧಾನ ಇಲ್ಲ ಆದರೆ ನನ್ನ ರಾಜೀನಾಮೆಯ ವಿಚಾರ ನಿಜವಾಗಿದೆ ಶೀಘ್ರದಲ್ಲೇ ಅಧಿಕೃತವಾಗಿ ನೀಡುವೆ ಎಂದು ರಾಜೀನಾಮೆ ವಿಷಯ ಬಹಿರಂಗ ಪಡಿಸಿದರು. ನನಗೆ ಅಸಮಾಧಾನ ಇದ್ದದ್ದು ನಿಜ ಆದರೆ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಅವುಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎನ್ನುವ ಮೂಲಕ ಅಸಮಾಧಾನ ವಿಷಯವನ್ನು ಗುಟ್ಟಾಗಿಯೇ ಉಳಿಸಿಕೊಂಡರು.

ರಾಜಕೀಯದಲ್ಲಿ ಮಂತ್ರಿಗಿರಿಗಾಗಿ ನಾನು ಯಾರ ಮನೆಯ ಬಾಗಿಲು ತಟ್ಟುವವನಲ್ಲ! ದೇವರು ಶಕ್ತಿಕೊಟ್ಟಿದ್ದಾನೆ ಸರ್ಕಾರ ಉರುಳಿಸಿ ರಚಿಸಿದ ಅನೇಕರನ್ನು ಮಂತ್ರಿಮಾಡಿದ ನನಗೆ ಮಂತ್ರಿಯಾಗುವುದು ದೊಡ್ಡ ವಿಷಯವೇನಲ್ಲ! ಅಷ್ಟೊಂದು ಕನಿಷ್ಠ ವ್ಯಕ್ತಿ ನಾನಲ್ಲ ಎಂದ ಅವರು ಶಾಸಕ ಸ್ಥಾನಕ್ಕಾಗಿ ನಾನು ಆಸೆಪಡುವವನಲ್ಲ ವಿರೋಧಿಗಳಿಗೆ ಸಂತೋಷವಾಗಿರಬಹುದು ಆದರೆ ಮುಂದಿನ ದಿನಗಳಲ್ಲಿ ನೋಡಿ ಎಂದ ಅವರು ನಾಟಕ ಮಾಡುವ ವ್ಯಕ್ತಿ ನಾನಲ್ಲ ಯಡಿಯೂರಪ್ಪ ಸಂಪೂರ್ಣ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಾರೆ ಇದರಲ್ಲಿ ಯಾವುದೇ ಗೊಂದಲಗಳು ಬೇಡ! ಪಕ್ಷದಲ್ಲಿ ನನ್ನ ಸ್ಥಿತಿಯನ್ನು ಕಂಡು ಅನೇಕ ಜನರು ಹೀಯ್ಯಾಳಿಸಿದ್ದಾರೆ ನನಗೆ ಪಕ್ಷದಲ್ಲಿ ಇರುವ ಕೆಲ ನಾಯಕರು ಬೆನ್ನಿಗೆ ಚೂರಿ ಹಾಕಿದ್ದು ನಿಜ ಅವರಿಗೆ ಕಾಲವೇ ಉತ್ತರ ನೀಡುತ್ತೆ ಮತ್ತು ಕಾದು ನೋಡಿ ಅಂಥವರನ್ನು ಮನೆಗೆ ಕಳುಹಿಸದೇ ಬಿಡುವುದಿಲ್ಲ ಎಂದು ಪಕ್ಷದಲ್ಲಿರುವ ಹಿತ ಶತ್ರುಗಳ ವಿಷಯದಲ್ಲಿ ಗಟ್ಟಿ ನಿಲುವು ತಾಳಿರುವುದಾಗಿ ಗೋಕಾಕ ಸಾಹುಕಾರ್ ತಿಳಿಸಿದರು.
ರಮೇಶ್ ಜಾರಕಿಹೊಳಿ ಅವರಿಗೆ ಪುತ್ರ ಅಮರನಾಥ ಜಾರಕಿಹೊಳಿ, ಅಳಿಯ ಅಂಬಿರಾವ ಪಾಟೀಲ ಸಾಥ್ ನೀಡಿದ್ದರು.