“ಯಡಿಯೂರಪ್ಪ ಕಾಲು ಹಿಡಿದು ರಾಜಕೀಯಕ್ಕೆ ಬಂದವರು ನೀವು” ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ?!ಬೆಂಗಳೂರು: ಮುಖ್ಯಮಂತ್ರಿ ಬದಲಾಗ್ತಾರೆ ಎಂಬ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಕಾಲು ಹಿಡಿದು ಬಿಜೆಪಿಗೆ ಬಂದ್ದಿದ್ದೀರಿ. ಇವತ್ತು ಅವರ ವಿರುದ್ಧ ‌ಮಾತನಾಡುತ್ತಿದ್ದಿರಾ? ರಾಜ್ಯದಲ್ಲಿ ಸಿಎಂ ಸ್ಥಾನ‌ ಖಾಲಿ‌ ಇಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕೆಂಬ ಕಾಳಜಿ ನಮಗೂ ಇದೆ. ಬನ್ನಿ ಒಟ್ಟಾಗಿ ಹೋಗಿ ಅನುದಾನ ಕೇಳೋಣ. ಅದನ್ನು ಬಿಟ್ಟು ಪಕ್ಷ ವಿರೋಧಿ ಹೇಳಿಕೆ ನೀಡಬೇಡಿ ಎಂದು ಯತ್ನಾಳಗೆ ರೇಣುಕಾಚಾರ್ಯ ಎಚ್ಚರಿಕೆ ನೀಡಿದರು. ಯಡಿಯೂರಪ್ಪ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ಮಹಾನ್ ನಾಯಕ. ಅವರ ನಾಯಕತ್ವವನ್ನು ಕೇಂದ್ರದ ವರಿಷ್ಠರು ಒಪ್ಪಿದ್ದಾರೆ.

ಪ್ರಧಾನಮಂತ್ರಿ ನಿಮಗೆ ಕರೆ ಮಾಡಿ ಯಡಿಯೂರಪ್ಪ ಅವರನ್ನು ಇಳಿಸುತ್ತೇವೆ ಅಂತಾ ಹೇಳಿದ್ರಾ? ಒಂದು ಕಡೆ ಪಕ್ಷಕ್ಕೆ ಮುಜುಗರ ಆಗುವ ಹಾಗೆ ಮಾತಾಡ್ತೀರಿ, ಇನ್ನೊಂದು ಕಡೆ ಪ್ರಧಾನಿ ಹೆಸರು ಹೇಳ್ತೀರಿ, ಕಳೆದ ವರ್ಷ ಪ್ರವಾಹ ಆದಾಗ ನೀವೇ ನೇರವಾಗಿ ಪ್ರಧಾನಿ ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡಿಸಬೇಕಿತ್ತು. ಅದರ ಬದಲು ಬಹಿರಂಗವಾಗಿ ಪ್ರಧಾನಿ ವಿರುದ್ಧ ಹೇಳಿಕೆ ಕೊಡಲಿಲ್ವಾ ನೀವು? ಈಗ ನಮಗೆ ಯಡಿಯೂರಪ್ಪ ನಾಯಕ ಅಲ್ಲ, ಮೋದಿ, ಷಾ ಅಂತಾ ಹೇಳ್ತೀರಿ, ಬಿಜೆಪಿಗೆ ಎಲ್ಲರೂ ನಾಯಕರೇ, ಹಾಗಾದರೆ ಹಿಂದೆ ಯಡಿಯೂರಪ್ಪ ಅವರನ್ನು ಕೈಕಾಲು ಕಟ್ಟಿ ತಾವು ಬಿಜೆಪಿಗೆ ಬರಲಿಲ್ವಾ? ಆಗ ಯಡಿಯೂರಪ್ಪ ನಾಯಕ ಆಗಿರಲಿಲ್ವಾ? ಯಾಕೆ ಈ ರೀತಿ ಹೇಳಿಕೆ ಕೊಡ್ತಿದ್ದೀರಿ? ಹಗಲುಗನಸು ಕಾಣುತ ದುರಹಂಕಾರದ ಮಾತಾಡ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಜಾಹಿರಾತು : ವಾಕ್ ಸಿದ್ಧಿ ಜಪ ಸಿದ್ಧಿ ಯಂತ್ರ ಸಿದ್ಧಿ ಹಾಗೂ ಮಂತ್ರ ಸಿದ್ಧಿಯಲ್ಲಿ ಪರಿಣಿತಿ ಹೊಂದಿರುವ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವಶೀಕರಣ ಮಹಾ ಮಾಂತ್ರಿಕರು ಹಾಗೂ ಸರ್ವಸಿದ್ಧಿ ಸಾಧಕರಾದ ಇವರು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ಸ್ತ್ರೀ ವಶೀಕರಣ ಹಾಗೂ ಪುರುಷ ವಶೀಕರಣ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಕೆಳಗೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ 9740202800 ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು.9740202800