ಇಲ್ಲಿದೆ ಓಟಿಂಗ್ ಪೋಲ್ ರಿಸಲ್ಟ್.. ರಾಜ್ಯದ ಬೆಸ್ಟ್ ನ್ಯೂಸ್ ಆ್ಯಂಕರ್ ಇವರೇ ನೋಡಿ!ರಾಜ್ಯದಲ್ಲಿ ಅನೇಕ ಸುದ್ದಿ ಮಾಧ್ಯಮಗಳಿವೆ. ಎಲ್ಲವೂ ಅದರದ್ದೇ ಆದ ಓದುಗರನ್ನು ಪಡೆದು ಕೊಂಡಿದೆ. ಜೊತೆ ಪತ್ರಿಕೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿವೆ. ಇನ್ನು ಸುದ್ದಿ ಮಾಧ್ಯಮಗಳ ಆ್ಯಂಕರ್ ಗಳಂತು ಅನೇಕ ಮಂದಿ ಅಭಿಮಾನಿಗಳು ಕೂಡ ಇದ್ದಾರೆ ಹೀಗಿರುವಾಗ ಅತೀ ಹೆಚ್ಚು ಟ್ರೆಂಡಿಂಗ್ ನಲ್ಲಿರುವ ನಾಲ್ಕು ನ್ಯೂಸ್ ಆ್ಯಂಕರ್ ಗಳಲ್ಲಿ ನಿಮ್ಮ ಫೇವರೇಟ್ ಆ್ಯಂಕರ್ ಯಾರು? ಕರ್ನಾಟಕದಲ್ಲಿ ಯಾವ ನ್ಯೂಸ್ ಆ್ಯಂಕರ್ ಗೆ ಅತೀ ಹೆಚ್ಚು ಅಭಿಮಾನಿಗಳಿದ್ದಾರೆ ಎಂಬ ವಿಷಯ ತಿಳಿಯುವ ಕುತೂಹಲದಲ್ಲಿ ವೈರಲ್ ಸುದ್ದಿ ಡಾಟ್ ಕಾಮ್ ನ್ಯೂಸ್ ಪೋರ್ಟಲ್ ಓಟಿಂಗ್ ಪೋಲ್ ಒಂದನ್ನು ನಡೆಸಿತ್ತು.

ನಿಮ್ಮ ನೆಚ್ಚಿನ ಆ್ಯಂಕರ್ ಯಾರು ಎಂದು ಕೇಳಲಾದ ಪ್ರಶ್ನೆಗೆ ಟಿವಿ9 ನಿಂದ ರಂಗನಾಥ್ ಭಾರಧ್ವಾಜ್, ಸುವರ್ಣ ನ್ಯೂಸ್ ನಿಂದ ಅಜಿತ್ ಹನುಮಕ್ಕನವರ್, ಬಿಟಿವಿ ಇಂದ ರಾಧಾ ಹಿರೇಗೌಡರ್ ಹಾಗೂ ಪಬ್ಲಿಕ್ ಟಿವಿ ಇಂದ ಹೆಚ್ ಆರ್ ರಂಗನಾಥ್ ಅವರನ್ನು ಆಯ್ಕೆಯಲ್ಲಿ ಕೊಡಲಾಗಿತ್ತು.

ಈವರೆಗೂ ಸುಮಾರು 42,800 ಓಟ್ ಗಳು ಬಂದಿದ್ದು ಇದರಲ್ಲಿ ಅಜಿತ್ ಹನುಮಕ್ಕನವರ್ ಅತ್ಯಂತ ಹೆಚ್ಚು ಓಟ್ (38,049 ಅಂದರೆ ಶೇ. 88) ಒಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಎರಡೆನೆಯ ಸ್ಥಾನದಲ್ಲಿ ರಂಗನಾಥ್ ಭಾರಧ್ವಾಜ್ (2.1K ಅಂದರೆ 5%) ಇದ್ದಾರೆ ಇನ್ನು ಮೂರನೆಯದಾಗಿ ಹೆಚ್ ಆರ್ ರಂಗನಾಥ್ (2.1K ಅಂದರೆ 4%) ಇದ್ದಾರೆ. ರಾಧಾ ಹಿರೇಗೌಡರ್ 1% ಓಟ್ ಪಡೆಯುವ ಮೂಲಕ ಕೊನೆಯ ಸ್ಥಾನದಲ್ಲಿದ್ದಾರೆ. ಇನ್ನೂ ಓಟಿಂಗ್ ಪೋಲ್ ಲೈವ್ ನಲ್ಲಿದ್ದು ಭಾಗಹಿಸಲು ಯಾವುದೇ ಕೊನೆಯ ದಿನಾಂಕ ಇಲ್ಲ.

ವೆಬ್ ಸೈಟ್ ಕೊನೆಯವರೆಗಿನ ಸುದ್ದಿಗಳನ್ನೂ ನೋಡಿ ರಾಷ್ಟ್ರೀಯವಾದಿ ನ್ಯೂಸ್ ಪೋರ್ಟಲ್ ಆದ ನಮ್ಮನ್ನು ಬೆಂಬಲಿಸಿ.