ತಿನ್ನಲು ಊಟ ಇಲ್ಲದ ಸ್ಥಿತಿಯಲ್ಲಿದ್ದ ಸಾಧು ಕೋಕಿಲ ಲೈಫ್ ನ ಟರ್ನಿಂಗ್ ಪಾಯಿಂಟ್ ಯಾವುದು ಗೊತ್ತಾ? ಇಲ್ಲಿದೆ ಕಣ್ಣೀರಿನ ಕಥೆಇವರು ಒಬ್ಬ ನಟ, ಸಂಗೀತ ನಿರ್ದೇಶಕ, ಹಾಸ್ಯ ನಟ ನಿರ್ಮಾಪಕ, ನಿರ್ದೇಶಕ. ಭಾರತದಲ್ಲಿ ಅತಿ ವೇಗವಾಗಿ ಕೀಬೋರ್ಡ್ ನುಡಿಸುವವರಲ್ಲಿ ಇವರು ಕೂಡ ಒಬ್ಬರು. ಇವರು ಬೇರೆ ಯಾರು ಅಲ್ಲ ನಮ್ಮ ಕಾಮಿಡಿ ಕಿಂಗ್ ಸಾಧು ಕೋಕಿಲ. ಇವರು 24 ಮಾರ್ಚ್ 1966 ರಲ್ಲಿ ನಟೇಶ್ ಮತ್ತು ಮಂಗಳ ದಂಪತಿಗಳ ಮಗನಾಗಿ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರು. ಇವರ ತಂದೆಯವರು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಪಿಟೀಲಗಾರರಾಗಿರುತ್ತಾರೆ. ಅವರ ತಾಯಿಯವರು ಹಿನ್ನೆಲೆಗಾಯಕಿ ಆಗಿರುತ್ತಾರೆ.

ಮನೆಯಲ್ಲಿದ್ದ ಬಡತನದಿಂದ ಎಂಟನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಬಿಟ್ಟು ಕೆಲಸ ಮಾಡಲು ಪ್ರಾರಂಭಿಸುತ್ತಾರೆ.‌ ಅಣ್ಣನ ಸಹಾಯದಿಂದ ಕಸ್ತೂರಿ ಶಂಕರ್ ರಾವ್ ಅವರ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅಂಗಡಿಯಲ್ಲಿ ಕಸಗುಡಿಸಿ, ವಾದ್ಯಗಳನ್ನು ವರೆಸುವಂತಹ ಕೆಲಸವನ್ನು ಮಾಡುತ್ತಿರುತ್ತಾರೆ. ಆಗ ಅವರ ಮನಸ್ಸು ಸಂಗೀತವಾದ್ಯಗಳ ಕಡೆ ಸೆಳೆಯುತ್ತದೆ. ಹೇಗಾದರೂ ಮಾಡಿ ನಂಬರ್ ಒನ್ ಕೀಬೋರ್ಡ್ ಪ್ಲೇಯರ್ ಆಗಬೇಕೆಂದು ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ನಂತರ ಆರ್ಕೆಸ್ಟ್ರಾದಲ್ಲಿ ಹೆಲ್ಪರ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಈ ಕೆಲಸಕ್ಕೆ ಒಂದು ದಿನಕ್ಕೆ ಹತ್ತು ರೂಪಾಯಿ ಸಂಬಳ ಸಿಗುತ್ತಿರುತ್ತದೆ.

ಒಂದು ದಿನ ಸಾಧುರವರು ಆರ್ಕೆಸ್ಟ್ರಾದ ವಾದ್ಯವೊಂದನ್ನು ಸರಿಯಾಗಿ ಜೋಡಿಸಿರುವುದಿಲ್ಲ. ಇದನ್ನು ನೋಡಿದ ಮೋಹನ್ ರವರು ಸಾಧು ರವರಿಗೆ ಮನಬಂದಂತೆ ಬೈಯುತ್ತಾರೆ. ಮೋಹನ್ ರವರು ಸಾಧುರವರಿಗೆ ಕೊಡಬೇಕಾದ 200 ರೂಪಾಯಿ ಸಂಬಳದ ಬದಲಿಗೆ ಒಂದು ಆರ್ಕೆಸ್ಟ್ರಾದ ಟೀ ಶರ್ಟ್ ಕೊಡುತ್ತಾರೆ. ಇದರಿಂದ ಮನನೊಂದ ಸಾಧು ರವರು ಉತ್ತಮ ಟೀ ಶರ್ಟನ್ನು ಬಿಚ್ಚಿ ಅವರ ಮೇಲೆ ಎಸೆದು ಬರಿಮೈಯಲ್ಲಿ ಹೊರಬರುತ್ತಾರೆ. ಸ್ವಲ್ಪ ದೂರ ಬಂದ ಬಳಿಕ ಸೈಕಲ್ ಅವರಿಗೆ ನೆನಪಿಗೆ ಬರುತ್ತದೆ.ಆಗ ಸೈಕಲನ್ನು ತೆಗೆದುಕೊಳ್ಳಲು ಮೋಹನ್ ರವರ ಮನೆ ಬಳಿ ಬರುತ್ತಾರೆ. ಆಗ ಅವರ ಪತ್ನಿಯವರು ಸಾಧುವಿಗೆ 20 ರೂಗಳನ್ನು ನೀಡಿ ಬೇಸರ ಮಾಡಿಕೊಳ್ಳಬೇಡ ಎಂದು ಹೇಳುತ್ತಾರೆ.

ನಂತರ ಅಣ್ಣನ ಬಳಿ ಬಂದು ನಾನು ಎಲ್ಲಿ ಹೋಗುತ್ತೇನೋ ಗೊತ್ತಿಲ್ಲ. ಮತ್ತೆ ವಾಪಸ್ ಬರುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದು ಸೈಕಲೇರಿ ಅಲಸೂರು ಕೆರೆಯ ಕಡೆಗೆ ಸಾಯಲು ಬರುತ್ತಾರೆ. ಬರುವ ದಾರಿಯಲ್ಲಿ ಬಂದು ಸಿನಿಮಾದ ಪೋಸ್ಟರ್ ಅನ್ನು ನೋಡುತ್ತಾರೆ. ಅದನ್ನು ನೋಡಿದ ನಂತರ ನನ್ನ ಬಳಿ 20ರೂ ಇದೆ. ಸಾಯುವುದಕ್ಕಿಂತ ಮುಂಚೆ ಸಿನಿಮಾವನ್ನು ನೋಡಿ ಸಾಯೋಣ ಎಂದು ತೀರ್ಮಾನ ಮಾಡಿ ಸಿನಿಮಾವನ್ನು ನೋಡುತ್ತಾರೆ. ಆ ಸಿನಿಮಾದಲ್ಲಿ ಪ್ರಾರಂಭದಿಂದ ಅಂತ್ಯದವರೆಗೂ ಬರೀ ನಗು ನಗು. ಅದು ಒಂದು ಅದ್ಭುತವಾದ ನಗೆಯ ಸಿನಿಮಾವಾಗಿರುತ್ತದೆ. ಸಿನಿಮಾ ನೋಡಿ ತಮ್ಮ ದುಃಖವನ್ನು ಮರೆಯುತ್ತಾರೆ. ಈ ಸಿನಿಮಾ ಅವರ ಜೀವನವನ್ನೇ ಬದಲಾಯಿಸಿಬಿಡುತ್ತದೆ.

ಹೀಗೆ ಮುಂದೆ ಕೀಬೋರ್ಡ್ ಅನ್ನು ಕಲಿತು ದೊಡ್ಡ ಮ್ಯೂಸಿಷಿಯನ್ ಆಗಿ ಬೆಳೆಯುತ್ತಾರೆ. ಹೀಗೆ ಸಿನಿಮಾರಂಗದಲ್ಲಿ ಅವರ ಪಯಣ ಬೆಳೆಯುತ್ತಾ ಹೋಗುತ್ತದೆ. ಅನೇಕ ನಟರುಗಳ ಜೊತೆ ಪರದೆಯನ್ನು ಹಂಚಿಕೊಳ್ಳುತ್ತಾ ಹೋಗುತ್ತಾರೆ. ಇಂದು ಇವರು ಸಂಗೀತ ನಿರ್ದೇಶಕರಾಗಿ ಹಾಗೂ ಹಾಸ್ಯನಟರಾಗಿ ಕರ್ನಾಟಕದ ಜನಮಾನಸದಲ್ಲಿ ನೆಲೆಯೂರಿದ್ದಾರೆ.