ಶಾಲಾ ಕಾಲೇಜು ಪ್ರಾರಂಭದ ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆಯೇ ಸರ್ಕಾರ?

ಪ್ರಪಂಚದಾದ್ಯಂತ ಹಬ್ಬಿರುವ ಕೊರೋನ ಕಾರಣದಿಂದಾಗಿ ಜನರ ಜೀವನಶೈಲಿಯಲ್ಲಿ ಹಲವಾರು ಬದಲಾವಣೆಗಳಾಗಿವೆ ಕೆಲವೊಂದು ಒಳ್ಳೆಯ ಬೆಳವಣಿಗೆಗಳು ಆದರೆ ಇನ್ನೂ ಕೆಲವೊಂದು ತೊಂದರೆಯನ್ನುಂಟುಮಾಡಿವೆ. ಇದರಲ್ಲಿ ಮಕ್ಕಳ ವಿದ್ಯಾಭ್ಯಾಸವು ಕೂಡ ಸೇರಿಕೊಂಡಿದೆ ನಮ್ಮ ದೇಶಕ್ಕೆ ಕೊರೋನಾ ಲಗ್ಗೆಯಿಟ್ಟ ಪ್ರಾರಂಭದ ದಿನಗಳಿಂದ ಮುಚ್ಚಿದ ಶಾಲಾ-ಕಾಲೇಜುಗಳನ್ನು  ತೆಗೆಯಲು ಇನ್ನೂ ಕಾಲ ಕೂಡಿಬಂದಿಲ್ಲ ಮಾರ್ಚ್ ತಿಂಗಳ ಮೂರನೇ ವಾರದಲ್ಲಿ ಮೊದಲ ಬಾರಿಗೆ ನಮ್ಮ  ರಾಜ್ಯದಲ್ಲಿ ಶಾಲೆಗೆ ರಜೆ ಘೋಷಿಸಲಾಗಿತ್ತು ನಂತರದ ದಿನಗಳಲ್ಲಿ ದಿನದಿಂದ ದಿನಕ್ಕೆ ಕೊರೋನ ಹೆಚ್ಚುತ್ತಲೇ ಹೋದ ಕಾರಣದಿಂದಾಗಿ ಶಾಲೆ-ಕಾಲೇಜುಗಳು  ಇಂದಿನವರೆಗೂ ಮುಚ್ಚಿದ ಹಂತದಲ್ಲಿಯೇ ಇದೆ

ಇದರ ನಡುವಿನ ದಿನಗಳಲ್ಲಿ ಅನಿವಾರ್ಯದ ಕಾರಣ ಎಸ್ ಎಸ್ ಎಲ್ ಸಿ, ಪಿಯುಸಿ ಪದವಿ, ಹಾಗೂ ಡಿಪ್ಲೋಮೋ ಗಳ ಅಂತಿಮ ಪರೀಕ್ಷೆಗಳನ್ನು ಕಠಿಣ ಸುರಕ್ಷತಾ ಕ್ರಮಗಳನ್ನು ಕೈಗೊಂಡು ನಡೆಸಲಾಯಿತು ಹಾಗೂ ಇತ್ತೀಚೆಗಷ್ಟೇ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಾಲೇಜನ್ನು ತೆರೆದು ತರಗತಿ ನಡೆಸುತ್ತಿದ್ದಾರೆ.  ಆದರೆ ಇನ್ನುಳಿದ ಎಲ್ಲಾ ಮಕ್ಕಳಿಗೆ ಆನ್ಲೈನ್ ಪಾಠ ವಷ್ಟೇ ಗತಿ ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲೇ ಇದ್ದರೆ ಹಾದಿ ತಪ್ಪಬಹುದು ಕಲಿಕೆಯಲ್ಲಿನ ಆಸಕ್ತಿ ಕಳೆದುಕೊಳ್ಳಬಹುದು ಎಂಬ ಆತಂಕದಿಂದ ಶಾಲೆಯನ್ನು ತೆರೆಯಿರಿ ಮಕ್ಕಳ ಮುಂದಿನ ಜೀವನ  ಮುಖ್ಯ ಎಂಬ ಕೂಗು ಕೆಲ ಪೋಷಕರಪೋಷಕರದ್ದು ಆದರೆ ಇನ್ನು ಕೆಲವು ಪೋಷಕರು ಜೀವನಕ್ಕಿಂತಲೂ ಜೀವವೇ ಮುಖ್ಯ ಈಗಿನ ಪರಿಸ್ಥಿತಿಯಲ್ಲಿ ಶಾಲೆಯನ್ನು ತೆರೆದರೆ ಮುಗ್ಧ ಮಕ್ಕಳು ತಮಗರಿವಿಲ್ಲದೆ ಅಜಾಗೃಕತೆಯಿಂದ  ಕೊರೋನಕ್ಕೆ ಬಲಿ ಆಗಬಹುದೆಂಬ ಅಳುಕು ತೋಡಿಕೊಳ್ಳುತ್ತಿದ್ದಾರೆ.

ಆದರೆ ಇದೆಲ್ಲದರ ನಡುವೆ ಸೋಮವಾರದಂದು ಸಭೆ ನಡೆಸಿರುವ ಸಿಎಂ ಅವರು ಸದ್ಯಕ್ಕಂತೂ ಶಾಲೆಯನ್ನು ತೆರೆಯುವುದಿಲ್ಲ ಎಂದಿದ್ದಾರೆ ಡಿಸೆಂಬರ್ ಕೊನೆಯವರೆಗೂ ಶಾಲೆಯನ್ನು ತೆರೆಯುವ ಯೋಚನೆ ಇಲ್ಲ ಎಂಬ ಸ್ಪಷ್ಟ ನಿಲುವನ್ನು ಸರ್ಕಾರ ವ್ಯಕ್ತಪಡಿಸುತ್ತಿದೆ ಈಗ ನಡೆಯುತ್ತಿರುವ ಆನ್ಲೈನ್ ತರಗತಿಗಳನ್ನು ಮುಂದುವರಿಸಲಾಗುತ್ತದೆ ಜೊತೆಗೆ ದೂರದರ್ಶನದ ಚಂದನ ವಾಹಿನಿಯಲ್ಲಿ ಮಕ್ಕಳ ಪಾಠಗಳನ್ನು ಪ್ರಸಾರ ಮಾಡಲಾಗುತ್ತದೆಮಾಡಲಾಗುತ್ತದೆ.   ಇದರಿಂದಾಗಿ ಈ ವರ್ಷದ ಕೊನೆಯವರೆಗೆ ಅಂತೂ ಶಾಲೆಯನ್ನು ತೆರೆಯುವುದಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.

ಏನೇ ಆದರೂ ಮಕ್ಕಳ ಜೀವನದ ಜೊತೆಗೆ ಈ ಜೀವವು ಬಹಳ ಮುಖ್ಯ ಅದಕ್ಕಾಗಿ ಅವರ ಭವಿಷ್ಯದ ದೃಷ್ಟಿಯಿಂದ  ಮನೆಯಲ್ಲಿಯೇ ಮಕ್ಕಳಿಗೆ ಉತ್ತಮ ಮೌಲ್ಯ, ಜ್ಞಾನವನ್ನು ತುಂಬುವುದು ಅಷ್ಟೇ ಪೋಷಕರಿಗೆ ಈಗ ಉಳಿದಿರುವ ದಾರಿಯಾಗಿದೆ ಆಟದ ಜೊತೆಗೆ ಪಾಠ ಕಲಿಸುವುದು ಹಾಗೂ ಅವರ ಕಲೆಗಳನ್ನು ಗುರುತಿಸಿ ಅದನ್ನು ಬೆಳೆಯುವಂತೆ ಮಾಡುವುದು  ಪೋಷಕರ ಮುಂದಿರುವ ಸವಾಲಾಗಿದೆ ಹಾಗೂ ಜವಾಬ್ದಾರಿ ಕೂಡ.
– ರಕ್ಷಿತ ಭಟ್

ಜಾಹಿರಾತು: ವೆರಿಕೋಸ್ ವೇಯ್ನ್ ನಿಂದ ಬಳಲುತ್ತಿದ್ದೀರಾ? ಚಿಂತೆ ಬಿಡಿ ವೆರಿಕೋಸ್ ವೇಯ್ನ್ ಗೆ ಆಪರೇಷನ್ ಇಲ್ಲದೆಯೇ ಚಿಕಿತ್ಸೆ ನೀಡುತ್ತಾರೆ ಖ್ಯಾತ ವೈದ್ಯ ಡಾ. ಉರಾಳ್. ಹೆಚ್ಚಿನ ಮಾಹಿತಿಗಾಗಿ ಈಗಲೇ ಸಂಪರ್ಕಿಸಿ ವೆರಿಕೋಸ್ ವೇಯ್ನ್ ರೋಗಿಗಳ ಆಶಾಕಿರಣ ಆಪರೇಷನ್ ರಹಿತ ಆಯುರ್ವೇದ ಪರಿಹಾರ. ಡಾ. ಉರಾಳ್ ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಸಂಸ್ಥೆ ಶೃಂಗೇರಿ. +91 81053 71042 , 8310191364.
http://www.uralsayurveda.in https://www.facebook.com/DrUrals/