ಜೋಶಿ-ಶೆಟ್ಟರ್ ಜೋಡಿ ಮಾಡಿದ್ದೇನು?ಉತ್ತುಂಗದಲ್ಲಿ ಸ್ಮಾರ್ಟ್ ಸಿಟಿ ಅಭಿವೃದ್ಧಿ ಕಾರ್ಯ.. ಹರಿದು ಬರುತ್ತಿದೆ ಭಾರೀ ಬಂಡವಾಳ… ಸದ್ದಿಲ್ಲದೆ ಕರ್ನಾಟಕದ ಅದ್ಭುತ ನಗರವಾಗಿ ಬೆಳೆಯುವತ್ತ ಹೆಜ್ಜೆ ಹಾಕುತ್ತಿದೆ ಹುಬ್ಬಳ್ಳಿ-ಧಾರವಾಡ…

ಅತ್ಯಾಕರ್ಷಕ ರಸ್ತೆಗಳು, ಅನನ್ಯ ಮೂಲಸೌಕರ್ಯಗಳಿಂದ ಕಂಗೊಳಿಸುತ್ತಿರುವ ಹುಬ್ಬಳ್ಳಿ – ಧಾರವಾಡ; ಎರಡನೇ ರಾಜಧಾನಿ ಎಂಬ ಹೆಸರನ್ನು ಸಾರ್ಥಕಗೊಳಿಸುವಂತಿದೆ‌. ಸಾರಿಗೆ ಕ್ಷೇತ್ರದಲ್ಲಾಗುತ್ತಿರುವ ಕ್ರಾಂತಿಯು ಹೂಡಿಕೆದಾರರ ಗಮನ ಸೆಳೆಯುತ್ತಿದ್ದು, ಈಗಾಗಲೇ 25 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗಿದೆ. ಅಭಿವೃದ್ಧಿ ಗುರಿಯೆಡೆ “ಚಿಗರಿ” ವೇಗದಲ್ಲಿ ಓಡುತ್ತಿರುವ ಅವಳಿ ನಗರದ ಕುರಿತು ವಿಶೇಷ ವರದಿ.

ಯಾವಾಗಲೂ ಸರ್ಕಾರವನ್ನು, ಜನಪ್ರತಿನಿಧಿಗಳನ್ನು ತೆಗಳುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಇಂತಹುಗಳನ್ನ ಶ್ಲಾಘಿಸಲೇಬೇಕು. ಪ್ರಹ್ಲಾದ್ ಜೋಷಿ ಹಾಗೂ ಜಗದೀಶ್ ಶೆಟ್ಟರ್ ರವರಿಗೊಂದು ಹ್ಯಾಟ್ಸಾಫ್.